ಅಂಗವಿಕಲರಿಗೆ ನೆರವು ಕಲ್ಪಿಸುವುದು ಅವಶ್ಯ: ಅಶ್ವತ್ಥರೆಡ್ಡಿ
ಮಾಲೂರು: ವಿಕಲಚೇತನರಿಗೆ ಅನುಕಂಪ ಬೇಕಾಗಿಲ್ಲ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿ, ನೆರವು ನೀಡುವ ಮನಸ್ಸಿನವರು ಬೇಕಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎ.ಅಶ್ವತ್ಥರೆಡ್ಡಿ ಹೇಳಿದರು.
ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಪಟ್ಟಣದ ಬಸ್ ನಿಲ್ಧಾಣದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಶಿಕ್ಷಣಕ್ಕಾಗಿ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾನ್ಯ ಜನರಿಕ್ಕಿಂತ ವಿಕಲ ಚೇತನರು ಸ್ವಾಭಿಮಾನಿಗಳು. ಅವರಿಗೆ ಅಂಗವಿಕಲತೆ ಸಮಸ್ಯೆಯಲ್ಲ. ಸಮಸ್ಯೆ ಆಗುತ್ತಿರುವುದು ಅವರನ್ನು ಸಮಾಜ ನೋಡುತ್ತಿರುವ ದೃಷ್ಟಿಕೋನದಿಂದ. ಅವರಿಗೆ ಪ್ರೋತ್ಸಾಹ ಬೇಕಾಗಿದೆ ಎಂದರು. ಶಿಕ್ಷಣ ಇಲಾಖೆ ಈ ಬಗ್ಗೆ ಪೋಷಕರ ಹಾಗೂ ಸಮಾಜದ ಕಣ್ಣು ತೆರಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅಪೂರ್ಣ ಕಲಾ ತಂಡ ಹಾಗೂ ಚೈತನ್ಯ ಕಲಾನಿಕೇತನ ಸಂಘದ ಸದಸ್ಯರು ವಿಕಲಚೇತನರ ಶಿಕ್ಷಣಕ್ಕೆ ಪ್ರೋತ್ಸಾಹಿಸುವಂತಹ ಹಾಡುಗಳನ್ನು ಹಾಡಿದರು. ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಕು.ಚಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಜ.ಮು. ಚಂದ್ರ, ಶಿಕ್ಷಣ ಇಲಾಖೆಯ ಅಶ್ವತ್ಥ್, ದೇವೇಂದ್ರ ದತ್ತ, ಶ್ರೀಧರ್ ರೆಡ್ಡಿ, ಮಹೇಶ್ ಕುಮಾರ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ನರಸಿಂಹ, ಬಹದ್ದೂರ್ ಸಾಬ್, ಅಪೂರ್ಣ ಕಲಾ ತಂಡದ ನಾರಾಯಣಸ್ವಾಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

