ಕೋಲಾರ

ಹೈನುಗಾರಿಕೆ ಅಭಿವೃದ್ಧಿಗೆ ಕೋಮುಲ್ ಸ್ಥಾಪನೆ

Published On :

ಚಿಂತಾಮಣಿ:  ಗ್ರಾಮೀಣ ಪ್ರದೇಶದ ಹೈನುಗಾರಿಕೆಯ ರೈತರ ಅನುಕೂಲಕ್ಕಾಗಿ ಚಿಂತಾಮಣಿ ಹಾಲು ಒಕ್ಕೂಟ ಉಪವಿಭಾಗ ನೂತನ ಕಟ್ಟಡ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಕೋಲಾರ ಕೋಮುಲ್ ಒಕ್ಕೂಟದ ಅಧ್ಯಕ್ಷ ಮಂಜುನಾಥರೆಡ್ಡಿ ಚಾಲನೆ ನೀಡಿದರು.
ನಗರದ ಕನಂಪಲ್ಲಿ ಬಳಿ ಇರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಹಾಲು ಶೀಥಲೀಕರಣ ಕೇಂದ್ರದ ಆವರಣದಲ್ಲಿ 44 ಲಕ್ಷ ವೆಚ್ಚದಲ್ಲಿ ನೂತನ ಉಪವಿಭಾಗ ಕಚೇರಿ ಕಟ್ಟಡಕ್ಕೆ ಚಾಲನೆ ನೀಡಿದರು. ಬಾಡಿಗೆ ಕಟ್ಟಡದಲ್ಲಿ ಸಾವಿರಾರು ರುಪಾಯಿ ಬಾಡಿಗೆ ಕಟ್ಟುವ ಬದಲಾಗಿ ಒಕ್ಕೂಟದ ಅನುದಾನದಿಂದಲೇ ಒಳ್ಳೆಯ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಿರುವುದಾಗಿ ಮಂಜುನಾಥರೆಡ್ಡಿ ತಿಳಿಸಿದರು. ನಂತರ ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪೈಕಿ ಚಿಂತಾಮಣಿ ನಗರವು ವಾಣಿಜ್ಯ ಕೇಂದ್ರವಾಗಿದೆ. ನಗರ ವ್ಯಾಪ್ತಿಗಳಲ್ಲಿ ನಂದಿನಿ ಪಾರ್ಲರ್ ಕೇಂದ್ರಗಳನ್ನು ತೆಗೆಯಲು ಈಗಾಗಲೇ ತಾಲೂಕು ದಂಡಾಧಿಕಾರಿ, ನಗರಸಭೆ ಆಯುಕ್ತ ಹಾಗೂ ಎಪಿಎಂಸಿ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದರು.
ಕೋಲಾರ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ.ಗೋಪಾಲ್, ಕೆ.ವಿ.ನಾರಾಯಣಸ್ವಾಮಿ, ಉಪವ್ಯವಸ್ಥಾಪಕರಾದ ಶಿವರಾಜ್, ಡಾ.ರಾಘವೇಂದ್ರ ಸೇರಿದಂತೆ ಇನ್ನೂ ಹಲವು ಸಿಬ್ಬಂದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.