ಇಂದು ಉಚಿತ ಕ್ಯಾನ್ಸರ್ ತಪಾಸಣೆ
ಕೋಲಾರ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಕೋಲಾರ ನಗರಶಾಖೆ ವತಿಯಿಂದ ಉಚಿತ ಕ್ಯಾನ್ಸರ್ ಪತ್ತೆ ಹಚ್ಚುವಿಕೆ ಹಾಗೂ ತಪಾಸಣಾ ಶಿಬಿರವನ್ನು ಫೆ. 4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.
ಕೈವಾರ: ಹರಿಕಥಾ ಕಾರ್ಯಕ್ರಮ
ಚಿಂತಾಮಣಿ: ಕೈವಾರದ ಯೋಗಿನಾರಾಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಹರಿಕಥಾ ವಿದ್ವಾನ್ ಮದನಹಳ್ಳಿ ಎಂ.ಆರ್. ಜಯರಾಮರೆಡ್ಡಿ ಅವರ ಹರಿಕಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅವರಿಗೆ ಪಕ್ಕವಾದ್ಯದಲ್ಲಿ ಆಲೇರಿ ಸಂತೋಷ್ಕುಮಾರ್, ಹಾರ್ಮೋನಿಯಂ, ಮುಳ್ಳಹಳ್ಳಿ ವೆಂಕಟರವಣಪ್ಪ ಸೋಲೇಕ್ಸ್, ಮದನಹಳ್ಳಿ ಕೆಂಪರೆಡ್ಡಿ ಮತ್ತು ಪ್ರಕಾಶ್ ತಬಲಾ ಮತ್ತು ಕೃಷ್ಣಮೂರ್ತಿ ಅವರು ಖಂಜಿರ ಸಹಕಾರ ನೀಡಿದರು. ಪ್ರತಿದಿನ ಯೋಗಿ ನಾರಾಯಣ ಮಠದಲ್ಲಿ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ನಾದಸುಧಾರಸ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.
ತಂಬಾಕು ಜಾಗೃತಿ ಜಾಥಾ
ಚಿಂತಾಮಣಿ: ದುಶ್ಚಟಗಳಿಂದ ಜನಸಾಮಾನ್ಯರು ದೂರವಿದ್ದು ಆರೋಗ್ಯದ ಬಗ್ಗೆ ಆದ್ಯತೆ ನೀಡಬೇಕೆಂದು ಜನ ಜಾಗೃತಿ ತಂಡದ ಮುಖಂಡ ನಾಗಭೂಷಣ್ ಹೇಳಿದರು. ತಾಲೂಕಿನ ಗಡಿಭಾಗದ ಚೇಳೂರು ಗ್ರಾಮದಲ್ಲಿ ತಂಬಾಕು ತ್ಯಜಿಸುವ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಟ್ಕಾ, ಪಾನ್, ತಂಬಾಕು ಸೇವನೆಯಿಂದ ಜನರಿಗೆ ಕ್ಯಾನ್ಸರ್ ಮತ್ತು ಇನ್ನೂ ಹಲವಾರು ರೋಗಗಳು ಬರುತ್ತವೆ. ಬಸ್ ನಿಲ್ದಾಣ, ಚಿತ್ರಮಂದಿರ, ಸಾರ್ವಜನಿಕರ ಸ್ಥಳಗಳಲ್ಲಿ ದುಶ್ಚಟಗಳನ್ನು ಮಾಡಬಾರದೆಂದು ನಾಗಭೂಷಣ್ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಚೇಳೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿಜಯ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಪಘಾತ: ಬಾಲಕನಿಗೆ ಗಾಯ
ಚಿಂತಾಮಣಿ: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನಿಗೆ ಕಾಲು ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುರುಗಮಲ್ಲ ಗ್ರಾಮದ ಬಳಿ ನಡೆದಿದೆ. ಚಿಂತಾಮಣಿ- ಮುರುಗಮಲ್ಲ ರಸ್ತೆಯ ಬಾರ್ಲಹಳ್ಳಿ ಗೇಟ್ ಬಳಿ ಖಾಸಗಿ ಬಸ್- ದ್ವಿಚಕ್ರ ವಾಹನ ಮಧ್ಯೆ ಸಂಭವಿಸಿದ ಅಪಘಾತದ ಪರಿಣಾಮ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವ ಶಿವಶಂಕರ್ಗೆ ಸಣ್ಣ- ಪುಟ್ಟ ಗಾಯಗಳಾಗಿ ಭರತ್ ಎಂಬ ಬಾಲಕನಿಗೆ ಕಾಲು ಮುರಿದಿದೆ. ಕೂಡಲೇ ಈತನನ್ನು ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

