ಕೋಲಾರ

ವಿದ್ಯಾರ್ಥಿ ದಿಸೆಯಲ್ಲಿ ಪ್ರೀತಿ, ಪ್ರೇಮ ಸಲ್ಲ

Published On :


ಮಾಲೂರು: ಮಾಲೂರು ತಾಲೂಕು ಒಂದರಲ್ಲೇ ವರ್ಷಕ್ಕೆ ನೂರಕ್ಕೂ ಹೆಚ್ಚು ಹುಡುಗಿಯರು ಮನೆಯಿಂದ ಓಡಿ ಹೋಗುತ್ತಿರುವ ಪ್ರಕರಣ ದಾಖಲಾಗುತ್ತಿರುವುದು ಅಂತಕಕಾರಿ ಬೆಳವಣಿಗೆ ಎಂದು ಮಾಲೂರು ಠಾಣೆ ಇನ್ಸ್ಪೆಕ್ಟರ್ ಕೇಶವಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾಲೇಜು ವ್ಯಾಸಂಗ ವೇಳೆಯಲ್ಲಿ ಚಂಚಲತೆ ವಯಸ್ಸಿನ ಪರಿಣಾಮ, ಪಠ್ಯದ ಕಡೆಗಿಂತ ಇತರೆ ಆಕರ್ಷಣೆಗೆ ಬಲಿಯಾಗುತ್ತಿರುವುದೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.  ಎಸ್ಐ ಶಿವಸ್ವಾಮಿ ಮಾತನಾಡಿದರು.
ಉಪನ್ಯಾಸಕ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಇನ್ಸ್ಪೆಕ್ಟರ್ ಕೇಶವಮೂರ್ತಿ ಉತ್ತರಿಸಿದರು. ಈರಣ್ಣ, ಈಶ್ವರ್, ಕುಮಾರಿ ನಿಶಾ ಪ್ರಾರ್ಥಿಸಿದರು. ಉಪಾನ್ಯಾಸಕ ಎ.ವಿ.ಜಗನ್ನಾಥ್  ನಿರೂಪಿಸಿದರು.ಉಪಾನ್ಯಾಸಕ ಕಾಂಬ್ಲೆ ವಂದಿಸಿದರು.
ಇಂದು ಕಾಂಗ್ರೆಸ್ ನಿಯೋಗ ಭೇಟಿ
ಕೋಲಾರ:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್.ಟಿ. ಘಟಕದ ಅಧ್ಯಕ್ಷ ಈಶ್ವರ್ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ 7 ರಂದು ಬೆಳಗ್ಗೆ 10.30ಕ್ಕೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಜಿಲ್ಲೆಯ ವಾಲ್ಮೀಕಿ ಜನಾಂಗದ ಮುಖಂಡರನ್ನು ಹಾಗೂ ಪಕ್ಷದ ಎಲ್ಲಾ ವಿಭಾಗದ ಕಾಂಗ್ರೆಸ್ ಕಾರ್ಯಕರ್ತಕರ್ತರೊಂದಿಗೆ ಚರ್ಚೆ ನಡೆಸಲ್ಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವೈ. ಶಿವಕುಮಾರ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.