ನಾಗರಾಜ್ ಆರೋಪದಲ್ಲಿ ಉರುಳಿಲ್ಲ: ಲಕ್ಷ್ಮಯ್ಯ ತಿರುಗೇಟು
ಕೋಲಾರ: ಬ್ಲಾಕ್ಮೇಲ್ ರಾಜಕಾರಣಕ್ಕೆ ಬಿಜೆಪಿಯು ಮಣಿಯದೇ ಇರುವುದರಿಂದ ಬೀಜ ನಿಗಮದ ನಿರ್ದೇಶಕ ಡಿ.ಎಲ್. ನಾಗರಾಜ್ ಪಕ್ಷಕ್ಕೆ ರಾಜಿನಾಮೆ ನೀಡಿದ ಸಂದರ್ಭ ತಮ್ಮ ಹಾಗೂ ಬಂಗಾರಪೇಟೆ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಯ್ಯ ತಿರುಗೇಟು ನೀಡಿದ್ದಾರೆ.
ಡಿ.ಎಲ್.ನಾಗರಾಜ್ ಮಾಡಿರುವ ಯಾವುದೇ ಆರೋಪದಲ್ಲಿ ಹುರುಳಿಲ್ಲ. ಪಕ್ಷದಲ್ಲಿ ಇರುವುದಕ್ಕೆ ಇಷ್ಟವಿಲ್ಲದ ಕಾರಣ ರಾಜಿನಾಮೆ ನೀಡಿದ್ದು, ಇದರಿಂದ ಬಿಜೆಪಿಗೆ ನಷ್ಟವಿಲ್ಲ ಎಂದು ತಿಳಿಸಿದ್ದಾರೆ.
ನಾಗರಾಜ್ ರಾಜಕೀಯ ಹಿನ್ನೆಲೆ ಏನೆಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ. ಜಿಲ್ಲೆಯ ಹಿರಿಯ ರಾಜಕಾರಣಿ ಪಿ. ವೆಂಕಟಗಿರಿಯಪ್ಪ ಅವರೊಂದಿಗಿದ್ದು ಅಲ್ಲೂ ಸಹ ಇವರ ಆಟ ನಡೆಯಲಿಲ್ಲ. ಮಾಜಿ ಸಚಿವ ದಿ.ಸಿ ಬೈರೇಗೌಡರು ಸಹ ಇವರನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಹಾಲಿ ಜೆಡಿಎಸ್ ಮುಖಂಡರಾದ ಕೆ. ಶ್ರೀನಿವಾಸಗೌಡ ಅವರೊಂದಿಗೆ ಸ್ನೇಹ ಬೆಳೆಸಿ ಅಲ್ಲಿಯೂ ಇವರ ಆಟ ನಡೆಯದೆ ಜನತಾದಳ ಬಿಟ್ಟು ಕೆಲವು ದಿನ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು ಇಲ್ಲಿಯೂ ಅವಕಾಶವಾದಿ ರಾಜಕಾರಣ ಮಾಡಿದ್ದರಿಂದ ಕಾಂಗ್ರೆಸ್ ಮುಖಂಡರು ಸಹ ಇವರನ್ನು ನಂಬಲಿಲ್ಲ ಎಂದುಟೀಕಿಸಿದ್ದಾರೆ.
ಮುಖಂಡ ಬೆಳಗಾನಹಳ್ಳಿ ವೆಂಕಟೇಶ್ ಅವರಿಗೂ ಕೈ ಕೊಟ್ಟಿದ್ದಾರೆ, ಜಿಲ್ಲಾಧಿಕಾರಿ ಆಗಿದ್ದ ತಿಮ್ಮೇಗೌಡರು ತಮ್ಮ ಅವಧಿಯಲ್ಲಿ ನಡೆದ ಘಟನೆಯಿಂದ ಬೇಸತ್ತು ನಾಗರಾಜ್ ಅವರನ್ನು ಗಡಿಪಾರು ಮಾಡಲು ಆದೇಶ ನೀಡಿದ್ದರು. ಹಾಲಿ ಇವರು ನ್ಯಾಯಾಲಯ ಪ್ರಕರಣಗಳಿಂದ ಮುಕ್ತರಾಗಲು ಬಿಜೆಪಿ ಜತೆ ಗುರುತಿಸಿಕೊಂಡರು. ನಮ್ಮ ಪಕ್ಷದಿಂದ ಜೀವದಾನ ಪಡೆದು ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ ಅವರ ಸಹಾಯದಿಂದ ಹುತ್ತೂರು ಜಿ.ಪಂ. ಕ್ಷೇತ್ರಕ್ಕೆ ಟಿಕಟ್ ನೀಡಿ ಆರ್ಥಿಕ ಸಹಾಯ ಮಾಡಿದ್ದರೂ ಈಗ ಇಲ್ಲಸಲ್ಲದ ಆರೋಪ ಮಾಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದು ಜನತೆ ಇವರ ನಾಟಕ, ನಯ ವಂಚಕತನದ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

