ಪ್ರಾಮಾಣಿಕತೆಯಿಂದ ಮಾತ್ರ ಒಕ್ಕೂಟ ಉಳಿವು
ಮಾಲೂರು: ಉತ್ಪಾದಕರು-ಕಾರ್ಯದರ್ಶಿಗಳು ಪ್ರಾಮಾಣಿಕತೆ ಉಳಿಸಿಕೊಂಡಾಗ ಮಾತ್ರ ಒಕ್ಕೂಟ ಉಳಿದುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕೋ.ಚಿ. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್ ರೆಡ್ಡಿ ಅಭಿಪ್ರಾಯ ಪಟ್ಟರು.
ಪಟ್ಟಣದ ಕೃಷಿಕ ಸಮಾಜದಲ್ಲಿ ತಾಲೂಕು ಹಾಲು ಉತ್ಪಾದಕರ ಸಂಘ ಗುರುವಾರ ಆಯೋಜಿಸಿದ್ದ ಕೋಚಿಮು ಅಧ್ಯಕ್ಷ ಮಂಜುನಾಥ್ ರೆಡ್ಡಿರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹಾಲು ಒಕ್ಕೂಟದಲ್ಲಿ ದಾಸ್ತಾನಿರುವ ಹಾಲು ಉತ್ಪನ್ನಗಳು ಮಾರಾಟವಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಒಕ್ಕೂಟವು ನಷ್ಟ ಅನುಭವಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ. ದಾಸ್ತಾನಿನಲ್ಲಿರುವ 20 ಸಾವಿರ ಟನ್ ಹಾಲಿನ ಪೌಡರ್ ಗೆ ಉತ್ತಮ ಬೇಡಿಕೆ ಬಂದಿದ್ದು, ಇನ್ನೆರಡು ತಿಂಗಳಲ್ಲಿ ಒಕ್ಕೂಟಕ್ಕೆ ಒಳೆಯ ದಿನಗಳು ಬರಲಿದೆ ಎಂದ ಅವರು, ಸರ್ಕಾರಕ್ಕೆ ಹಾಲಿನ ದರ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿದ್ದು ಇದುವರೆಗೂ ಸಕಾರತ್ಮಕ ಉತ್ತರ ಬಂದಿಲ್ಲ. ಇದಕ್ಕಾಗಿ ಜನಪ್ರತಿನಿಧಿಗಳಿಗೆ ಹಾಲಿನ ದರ ಹೆಚ್ಚಿಸಲು ಸಹಕರಿಸುವ ಬುದ್ಧಿ ಬರಲಿ ಎಂದು ದೇವರಲ್ಲಿ ಕೇಳುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಎರಡು ಜಿಲ್ಲೆಗಳು 3 ಲಕ್ಷ ಕುಟುಂಬ ಅವಲಂಬಿತವಾಗಿದ್ದು,ಹೈನುಗಾರಿದೆ ಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಒಕ್ಕೂಟದಲ್ಲಿ ಮಾಲೂರು ತಾಲೂಕು ಉತ್ತಮ ಗುಣಮಟ್ಟದ ಹಾಲು ನೀಡುತ್ತಿದ್ದು, ಇದರಲ್ಲಿ ಇಲ್ಲಿನ ರೈತರ ಹಾಗೂ ಸೂಸೈಟಿ ಕಾರ್ಯದರ್ಶಿಗಳ ಪ್ರಾಮಾಣಿಕತೆ ಎದ್ದು ಕಾಣುತ್ತಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅದ್ಯಕ್ಷ ಡಾ.ಎ.ವಿ.ಪ್ರಸನ್ನ ಮಾತನಾಡಿ, ತಾಲೂಕಿನ ಬಹುತೇಕ ಸೊಸೈಟಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಬಿಎಂಸಿ ಅಳವಡಿಸಲಾಗಿದ್ದು, ಈ ಬಾರಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾಲಿನ ಗುಣಮಟ್ಟದಲ್ಲಿ ಮೊದಗಲಿರಾಗಿದ್ದೇವೆ ಎಂದರು. ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಮಂಜುನಾಥ್ ರೆಡ್ಡಿ ಹಾಗೂ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್ರವರನ್ನು ತಾಲೂಕು ಹಾಲು ಉತ್ಪಾದಕ ಸಂಘವು ಸನ್ಮಾನಿಸಿತು. ಇದೇ ಸಂಧರ್ಭದಲ್ಲಿ ಸರ್ಕಾರದ ಅರ್ಥಿಕ ಸಹಾಯದಲ್ಲಿ ಅಮೃತ ಯೋಜನೆಯಡಿ ತಾಲೂಕಿನ 9 ಪಲಾನುಭವಿಗಳಿಗೆ ಹಸು ಕೊಳ್ಳಲು ತಲಾ 35 ಸಾವಿರ ರು.ಗಳನ್ನು ವಿತರಿಸಲಾಯಿತು.
ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾದ ತಾಲೂಕಿನ ಬೊಪ್ಪನಹಳ್ಳಿ ಹಾಲು ಉತ್ವಾದಕರ ಸಂಘದ ಕಾರ್ಯದರ್ಶಿ ನಾಗರಾಜ್ ರವರ ಪತ್ನಿಗೆ ಪರಿಹಾರ ಧನವಾಗಿ ಹತ್ತು ಸಾವಿರ ರು.ಗಳನ್ನು ವಿತರಿಸಲಾಯಿತು. ತಾಲೂಕಿನ ಸೊಸೈಟಿ ಗಳ ಸಂಘದ ಕಾರ್ಯದರ್ಶಿ ನಾರಾಯಣ ಗೌಡ ಮಾತನಾಡಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ವಿಶ್ವನಾಥ್, ವಿಸ್ತರಾಣಾಧಿಕಾರಿ ಕೆ.ಎನ್.ಪ್ರಕಾಶ್, ವೇಣು, ಶಿವು ಕುಮಾರ್ ಇದ್ದರು. ಶ್ರೀಧರ್ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

