ಕೋಲಾರ

ವಿದ್ಯುತ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬೆಸ್ಕಾಂ ಮುತ್ತಿಗೆ

Published On :

ಶಿಡ್ಲಘಟ್ಟ: ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ರೈತರು ಘೋಷಣೆಗಳನ್ನು ಕೂಗುತ್ತಾ ಬಸ್ ನಿಲ್ದಾಣದಿಂದ ಬೆಸ್ಕಾಂ ಕಚೇರಿಗೆ ತೆರಳಿ ಧರಣಿ ನಡೆಸಿದರು.
ದಿನಕ್ಕೆ ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಟ್ರಾನ್ಸ್‌ಫಾರಂಗಳು ಸುಟ್ಟು ಹೋದ 24 ಗಂಟೆಯೊಳಗೆ ಬದಲಿಸಬೇಕು. ಕೆಟ್ಟುಹೋದ ಟ್ರಾನ್ಸ್‌ಫಾರಂಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದಲ್ಲಿ ರೈತರಿಗೆ ಆಗುವ ನಷ್ಟವನ್ನು ಕೆಇಬಿಯವರೇ ಭರಿಸಬೇಕು. ಬೆಳಿಗ್ಗೆ 4 ರಿಂದ 7 ಗಂಟೆವರೆಗೂ ಹಾಗೂ ಸಂಜೆ 6 ರಿಂದ 11 ಗಂಟೆವರೆಗೂ ಸಿಂಗಲ್ ಫೇಸ್ ಆದರೂ ಕಡ್‌ಡಾಯವಾಗಿ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟಿಸಿದರು.
ತಾಲೂಕಿನ ಪ್ರಮುಖ ಬೆಳೆಗಳಾದ ರೇಷ್ಮೆ, ತರಕಾರಿ, ದ್ರಾಕ್ಷಿ ಹಾಗೂ ಹೈನುಗಾರಿಕೆಗೆ ನದಿ ನಾಲೆಯಿಲ್ಲದ್ದರಿಂದ ಸಾವಿರ ಅಡಿಗೂ ಹೆಚ್ಚು ಆಳ ಕೊಳವೆ ಬಾವಿಗಳನ್ನು ಕೊರೆದಿದ್ದೇವೆ. ವಿಷಪೂರಿತ ನೀರನ್ನು ಬಳಸುತ್ತಿದ್ದೇವೆ. ಆದರೆ, ವಿದ್ಯುತ್ ಇಲ್ಲದೆ ರೈತ ಬೀದಿಗೆ ಬೀಳುವಂತಹ ಪರಿಸ್ಥಿತಿಗೆ ಆಳುವ ಸರ್ಕಾರ ತಂದು ನಿಲ್ಲಿಸಿದೆ. ರೇಷ್ಮೆ ದಾರವನ್ನು ತೆಗೆಯುವ ರೀಲರುಗಳು, ಉರಿಕಾರರು, ಮಗ್ಗದವರು ಕೂಡ ವಿದ್ಯುತ್ ಇಲ್ಲದೇ ಕೆಲಸವಿಲ್ಲದಂತಾಗಿದ್ದಾರೆ ಎಂದು ಟೀಕಿಸಿದರು.  ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ರೈತರು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶಿವಶಂಕರ್ ಅವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಮುನಿನಂಜಪ್ಪ, ರಾಮಚಂದ್ರಪ್ಪ, ಗಜೇಂದ್ರ, ಕಾರ್ಯಾಧ್ಯಕ್ಷ ಆನೂರು ಶ್ರೀನಿವಾಸ್, ಕಾರ್ಯದರ್ಶಿಕೃಷ್ಣಪ್ಪ, ಖಜಾಂಚಿ ದೇವರಾಜ್, ಸಂಘಟನಾ ಕಾರ್ಯದರ್ಶಿ ಅಂಬರೀಷ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ, ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಮುನಿರಾಜು, ನಾರಾಯಣಪ್ಪ, ಚಿದಾನಂದಮೂರ್ತಿ, ನಂಜುಂಡಪ್ಪ, ಗೋಪಾಲಪ್ಪ, ಹಿತ್ತಲಹಳ್ಳಿ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.