ಕೋಲಾರ

'ಐಟಿ ಅಧಿಕಾರಿಗಳ ದಾಳಿಗೂ, ನನಗೂ ಸಂಬಂಧವಿಲ್ಲ'

Published On :

ಬಂಗಾರಪೇಟೆ:  ಕಾಂಗ್ರೆಸ್ ಮುಖಂಡ ಎಸ್.ಎನ್. ನಾರಾಯಣಸ್ವಾಮಿ ಒಡೆತನದ ರೆಸಾರ್ಟ್ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನಡೆಸಿದ ದಾಳಿಗೆ ಬಿಜೆಪಿ ಕಾರಣ ಎಂಬ ಆರೋಪಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ. ಆದರೆ, ಜನರಿಂದ ಅನುಕಂಪಗಿಟ್ಟಿಸಿಕೊಳ್ಳಲು ನಾರಾಯಣಸ್ವಾಮಿ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಶಾಸಕ ಎಂ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರ ಅಧೀನದಲಿದೆಯೇ ವಿನಃ ರಾಜ್ಯ ಸರ್ಕಾರದ ಅಧೀನದಲ್ಲಿಲ್ಲ. ಕೀಳುಮಟ್ಟದ ರಾಜಕೀಯ ಮಾಡುವುದಿಲ್ಲ ಎಂದು ಎಸ್.ಎನ್.ನಾರಾಯಣಸ್ವಾಮಿಗೂ ತಿಳಿದಿದೆ. ದಾಳಿಯಲ್ಲಿ ನನ್ನ ಮತ್ತು ಪಕ್ಷದ ಪಾತ್ರ ಬಗ್ಗೆ ಸಾಬೀತುಪಡಿಸಿದರೆ ನಾನು ಅವರಲ್ಲಿ ಬಹಿರಂಗ ಕ್ಷಮೆ ಕೋರಲು ಸಿದ್ಧ ಎಂದರು.
ಕ್ಷೇತ್ರ ಹಾಗೂ ಪಟ್ಟಣ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣವನ್ನು ಸರ್ಕಾರ ಮಂಜೂರು ಮಾಡಿದೆ. ಅಭಿವೃದ್ಧಿ ಕಾರ್ಯಗಳು ಜನರ ಮುಂದಿದೆ. ಆದರೂ ಕೇವಲ ಐದಾರು ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಸಿ ಸರ್ಕಾರ ನೀರಿಗಾಗಿ ಏನೂ ಮಾಡಿಲ್ಲ ಎನ್ನುವುದು ಮಾತ್ರ ದುರಂತ. ಪಟ್ಟಣ ಪ್ರದೇಶಕ್ಕೆ ಮಾತ್ರ ನೀರು ಪೂರೈಸಲು ಟ್ಯಾಂಕರ್‌ಗಳಿಗೆ 60 ಲಕ್ಷ ಒದಗಿಸಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 13.5 ಕೋಟಿ ವ್ಯಯಿಸಲಾಗಿದೆ. ವಿನಾಕಾರಣ ಆರೋಪ ಮಾಡಬೇಡಿ ಎಂದರು.
ಮೊದಲು ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸಬೇಕು. ನಂತರ ಈ ಕುರಿತು ಚರ್ಚಿಸಬೇಕು ಎಂದ ಅವರು, ಗಾಜಿನ ಮನೆಯಲ್ಲಿ ಕೂತು ಬೇರೆಯವರ ಮನೆಗೆ ಕಲ್ಲು ಎಸೆಯುವ ಮೊದಲು ತಾವು ಎಲ್ಲಿದ್ದೀವಿ ಎಂಬುದನ್ನು ಅರಿಯಬೇಕು ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಯ್ಯ, ನಗರ ಅಧ್ಯಕ್ಷ ಶಶಿಕುಮಾರ್, ಕೀಲುಕುಪ್ಪ ಶ್ರೀನಿವಾಸ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.