ನ್ಯಾಕ್ ಸಮಿತಿ ಶಹಬ್ಬಾಸ್ಗಿರಿಗೆ ಸರ್ಕಸ್
ಕೋಲಾರ: ಜಿಲ್ಲೆಯ ಅತ್ಯಂತ ಹಳೆಯದಾದ ಸರ್ಕಾರಿ ಬಾಲಕರ ಕಾಲೇಜಿಗೆ ಉನ್ನತ ಶ್ರೇಣಿಯ ಸ್ಥಾನಮಾನ ಪಡೆಯಲು ಕಾಲೇಜಿನ ಆಡಳಿತ ವರ್ಗ ಪ್ರಯತ್ನಿಸುತ್ತಿದೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಮುರಳೀಧರ್ ತಿಳಿಸಿದರು.
ಅವರು ಮಂಗಳವಾರ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶು ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ತಿಂಗಳ 21,22 ಮತ್ತು 23 ರಂದು ರಾಷ್ಟ್ರೀಯ ಮಾನ್ಯತಾ ಪರಿಷತ್ ಸಮಿತಿಯ(ನ್ಯಾಕ್) ಸದಸ್ಯರು ನಮ್ಮ ಕಾಲೇಜಿಗೆ ಭೇಟಿ ನೀಡುತ್ತಿದ್ದು ಕಾಲೇಜಿನ ಅಭಿವೃದ್ಧಿಗೆ ಸಮಿತಿಯಿಂದ ಸಲಹೆ-ಸಹಕಾರ ಪಡೆಯುವುದಕ್ಕಾಗಿ ಕಳೆದ ಒಂದು ಒಂದು ವರ್ಷದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಐದು ವರ್ಷಗಳಿಗೊಮ್ಮೆ ನ್ಯಾಕ್ ಸಮಿತಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಮಾಡಿ ಕಾಲೇಜಿನ ಶ್ರೇಣಿ ನಿಗದಿ ಮಾಡಿ ಮಾನ್ಯತೆ ನೀಡುತ್ತದೆ, ಕಳೆದ 2004 ತಮ್ಮ ಕಾಲೇಜಿಗೆ ಭೇಟಿ ನೀಡಿದ ಸಮಿತಿ ಮೌಲ್ಯಮಾಪನ ಮಾಡಿ ಸಿ ಗ್ರೇಡ್ನ್ನು ನೀಡಿತು. ಆದರೆ, ಈ ಬಾರಿ ಎ ಅಥವಾ ಬಿ ಗ್ರೇಡ್ನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಮಿತಿಗೆ ಬಯಸುವ ಎಲ್ಲಾ ವಿವರಗಳನ್ನು ಒದಗಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು.
ಕಾರಣಾಂತರಗಳಿಂದ ಈ ಬಾರಿ ನ್ಯಾಕ್ ಸಮಿತಿಯ ಭೇಟಿ ವಿಳಂಬವಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ಹಲವಾರು ವಿಭಾಗಗಳಲ್ಲಿ ಬದಲಾವಣೆ ಮಾಡಲಾಗಿದೆ, ಕಾಲೇಜಿನ ಎಲ್ಲಾ ವಿಭಾಗಗಳಲ್ಲಿ ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ, ಗ್ರಂಥಾಲಯವನ್ನು ಸುಸಜ್ಜಿತಗೊಳಿಸಲಾಗಿದೆ, ಕಾಲೇಜಿನ ಅಂದ-ಚಂದ ಕಾಪಾಡಲು ಗಮನ ನೀಡಲಾಗಿದ್ದು ನ್ಯೂನತೆಗಳನ್ನು ಸರಿಪಡಿಸಿ ನ್ಯಾಕ್ ಸಮಿತಿಯ ಗಮನ ಸೆಳೆಯುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ನ್ಯಾಕ್ ಸಮಿತಿಯ ಅಧ್ಯಕ್ಷ ಪ್ರೊ.ಎಲ್.ಎಸ್. ರಾಥೋರ್, ಸದಸ್ಯರಾದ ಪ್ರೊ.ಶಂಕರ್ಲಾಲ್ ಗಾರ್ಗೆ, ಪ್ರೊ.ರಮೇಶ್ ದಾಂಡಿಗೆ, ಅಧಿಕಾರಿ ಡಾ.ಎಂ.ಎಸ್. ಶ್ಯಾಮಸುಂದರ್ ಬರಲಿದ್ದು ಮೂರು ದಿನಗಳ ಕಾಲ ಕಾಲೇಜಿನಲ್ಲಿ ಪ್ರಾಂಶುಪಾಲರು, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯೊಂದಿಗೆ ಚರ್ಚೆ ಮೌಲ್ಯಮಾಪನ ಮಾಡಿ ಕಾಲೇಜಿನ ಬಗ್ಗೆ ವರದಿ ನೀಡಲಿದ್ದಾರೆ ಎಂದರು.
ಕಾಲೇಜಿನಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಹಂತಹಂತವಾಗಿ ಪರಿಹರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶಂಕರಪ್ಪ 14 ಪುಸ್ತಕಗಳನ್ನು ಬರೆದಿದ್ದರೆ ಮತ್ತು ಬಯೋಟೆಕ್ನೊಲಾಜಿ ವಿಭಾಗದ ಡಾ.ಮಹೇಂದ್ರ ಕುಮಾರ್ ಎಳ್ಳು ಸಂಬಂಧಿಸಿದ ಬಯೋ ಆಕ್ಟೀವಿಟಿ ಮತ್ತು ಬಯೋ ಅವೇಲಬಲಿಟಿ ಆಫ್ ಲಿಗ್ನೋಸ್ ಸಯೋಸ್ ಎಂಬ ವಿಷಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಅವಾರ್ಡ್ ಪಡೆದಿರುವುದು ಕಾಲೇಜಿಗೆ ಹೆಮ್ಮಯೆ ವಿಷಯವಾಗಿದೆ ಎಂದರು.
ಪ್ರಾಂಶುಪಾಲ ವೆಂಕಟೇಶು ಮಾತನಾಡಿ ಎಲ್ಲಾ ವಿಭಾಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ಪ್ರಗತಿಗೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ, ನ್ಯಾಕ್ ಸಮಿತಿ ತನ್ನ ವರದಿಯಲ್ಲಿ ಕಾಲೇಜಿನ ಸುಧಾರಣೆಗೆ ನೀಡುವ ಸಲಹೆ-ಸೂಚನೆ ಪಾಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನ್ಯಾಕ್ ಸಮಿತಿಯ ಸಮನ್ವಯಾಧಿಕಾರಿ ಡಾ. ಖಾನ್, ಉಪನ್ಯಾಸಕರಾದ ಲಕ್ಷ್ಮೀನಾರಾಯಣ, ರುದ್ರೇಶ್ ಅದರಂಗಿ, ಪ್ರೊ.ಸಿ.ವಿ. ರಮೇಶ್, ಶ್ರೀನಿವಾಸಗೌಡ, ಡಾ. ಮಹೇಂದ್ರಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

