ಮಂಚೇನಹಳ್ಳಿ: ಸಂಭ್ರಮದ ತಿರುಕಲ್ಯಾಣೋತ್ಸವ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿಯಲ್ಲಿ ಜೇಷ್ಠಾದೇವಿ ಸಮೇತ ಶನೇಶ್ವರಸ್ವಾಮಿ 23ನೇ ವಾರ್ಷಿಕೋತ್ಸವ ಮತ್ತು ಲಕ್ಷ್ಮಿನರಸಿಂಹಸ್ವಾಮಿಯ 5ನೇ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ರಥೋತ್ಸವದ ಮೂರು ದಿನಗಳ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.
ಭಕ್ತ ಸಮೂಹ ಪೂಜೆ ಮತ್ತು ಹೋಮಹವನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿತ್ತು. ದೇವಾಲಯ ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಆರ್ಯವೈಶ್ಯ ಮಂಡಳಿ ಮಹಿಳೆಯರಿಂದ ಭಕ್ತಿ ಗೀತೆ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಮೂರು ದಿನಗಳ ಕಾಲ ವಿವಿಧ ವಿಶೇಷ ಪೂಜೆ, ಸೇವಾ ಕಾರ್ಯಕ್ರಮಗಳು ನಡೆಯಿತು. ಭಕ್ತಾದಿಗಳಿಗಾಗಿ ಅನ್ನಸಂತರ್ಪಣೆ ಕೈಗೊಳ್ಳಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಜರುಗಿತು. ಭಕ್ತರು ರಸ್ತೆಯಲ್ಲಿ ರಂಗೋಲಿ ಹಾಕಿ ರಥವನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಸ್ವಾಮಿಯ ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತ ಸಮರ್ಪಿಸಿದರು.
ಪೂಜಾ ಸೇವಾ ಕಾರ್ಯಗಳಲ್ಲಿ ದೇವಸ್ಥಾನದ ಅಧ್ಯಕ್ಷ ವಲಸಾನಾರಾಯಣರಾವ್, ಕಾರ್ಯದರ್ಶಿ ರಾಜಗೋಪಾಲ್, ಆಗಮಿಕ ಪೌರೋಹಿತರಾದ ನರಸಿಂಹಾಚಾರ್, ಅಖಿಲ ಕುಮಾರಾಚಾರ್ಯ, ಗೌರವಾಧ್ಯಕ್ಷೆ ಅಹಲ್ಯಾ ಶ್ರೀನಿವಾಸುಲು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸಮೂರ್ತಿ, ಮಹೇಶ್ಕುಮಾರ್, ಮಂಡೀರಾಮನಹಳ್ಳಿ ಬಾಬು, ಶಶಿ, ಗೋಪಿ, ಗೋಪಾಲ್, ರಾಮಶಾಸ್ತ್ರಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

