ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಶಿಡ್ಲಘಟ್ಟ: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದು ಕಾಣೆಯಾಗಿದ್ದ ವ್ಯಕ್ತಿಯ ಬಗ್ಗೆ ದೂರು ನೀಡಿ 40 ದಿನಗಳಾದರೂ ಪತ್ತೆ ಮಾಡದ ಪೊಲೀಸರ ಕ್ರಮವನ್ನು ಖಂಡಿಸಿ ನೂರಾರು ರೈತರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು.
ಎಚ್.ವಿ. ಮುನಿರಾಜು ಎಂಬ ರೈತ ಜನವರಿ 13 ರಂದು ರೇಷ್ಮೆಗೂಡು ಮಾರುಕಟ್ಟೆಗೆ ಬಂದವನು ಕಾಣೆಯಾಗಿದ್ದು ಈ ಬಗ್ಗೆ ಜನವರಿ 14 ರಂದು ಪಟ್ಟಣದ ಪುರ ಠಾಣೆ ದೂರನ್ನು ದಾಖಲಿಸಲಾಗಿತ್ತು.
ಚಿಕ್ಕಬಳ್ಳಾಪುರ ತಾಲ್ಲೂಕು ಎಲೆಹಳ್ಳಿ ಗ್ರಾಮದ ತನ್ನ ಅಕ್ಕ ಅಶ್ವತಮ್ಮನ ಸಾವಿನ ಬಗ್ಗೆ ವಿಚಾರಣೆಗಾಗಿ ಚಿಕ್ಕಬಳ್ಳಾಪುರಕ್ಕೆ ಬಂದಾಗಲೆಲ್ಲ ಮುನಿರಾಜುವಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಮನೆಯ ಪೋಷಣೆಗೆ ಏಕೈಕ ವ್ಯಕ್ತಿಯಾಗಿದ್ದ ಮುನಿರಾಜುವಿನ ನಾಪತ್ತೆಯಿಂದಾಗಿ ಇದೀಗ ಅವರ ಕುಟುಂಬದವರು ಕಂಗಾಲಾಗಿದ್ದು ಪುರ ಠಾಣೆ ಪೊಲೀಸರ ಬೇಜವಾಬ್ದಾರಿ ಹಾಗೂ ಉಡಾಫೆ ಉತ್ತರಗಳನ್ನು ನೀಡದೇ ಚುರುಕಾಗಿ ಕಾರ್ಯ ನಿರ್ವಹಿಸಿ ಮುನಿರಾಜನನ್ನು ಪತ್ತೆ ಮಾಡಿಕೂಡಬೇಕೆಂದು ಒತ್ತಾಯಿಸಿದರು. ಆರ್.ಶ್ರೀನಿವಾಸ್ ಅವರ ನೇತೃತ್ವದಲ್ಲಿಪಿಳ್ಳಾಂಜಿನಪ್ಪ, ಮುನಯ್ಯ, ಬಸವರಾಜ್ ಧರಣಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

