ಕೋಲಾರ

ವೈದ್ಯರ ದಿನಾಚರಣೆ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು..

Published On :

ಚಿಕ್ಕಬಳ್ಳಾಪುರ: ವೈದ್ಯರ ದಿನಾಚರಣೆ ಅಂಗವಾಗಿ ಭಾರತೀಯ ವೈದ್ಯ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳ  ರೋಗಿಗಳಿಗೆ ಹಣ್ಣು ಹಂಪಲು  ವಿತರಿಸಲಾಯಿತು.
ಐ.ಎಂ.ಎ. ಜಿಲ್ಲಾಧ್ಯಕ್ಷ ಡಾ. ಮಂಜುನಾಥ್ ನೇತೃತ್ವದಲ್ಲಿ ವೈದ್ಯರು ಜಿಲ್ಲೆಯ ಜಿಲ್ಲಾ ಕೇಂದ್ರ ದಲ್ಲಿನ ಎಲ್ಲಾ ಆಸ್ಪತ್ರೆಗಳಿಗೂ ತೆರಳಿ ಹಣ್ಣು ಹಂಪಲು ವಿತರಣೆ ಮಾಡಿದರು.
ಡಾ.ಮಂಜುನಾಥ್ ಮಾತನಾಡಿ, ಪಶ್ಚಿಮ ಬಂಗಾಳದ ಧೀಮಂತ ಮುಖ್ಯಮಂತ್ರಿಯಾಗಿ ವೈದ್ಯರಾಗಿ ಬಡವರಿಗೆ ಅನೇಕ ರೀತಿಯಲ್ಲಿ ಔಷದೋಪಚಾರವೂ ಸೇರಿದಂತೆ ವಿವಿಧ ತರನಾದ ಉಚಿತ ಚಿಕಿತ್ಸೆ ನೀಡಿದ ಡಾ. ಬಿ.ಸಿ. ರಾಯ್ ನಮ್ಮ ವೈದ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಗರದ ಆಸ್ಪತ್ರೆಗಳ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದಲ್ಲದೇ ಡಾ. ಬಿ.ಸಿ. ರಾಯ್ ಜನ್ಮ ದಿನದ ಅಂಗವಾಗಿ ನಗರದ ಶಾಲೆಗಳಿಗೆ ತೆರಳಿದ ವೈದ್ಯರು ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು. ಡಾ. ಬಿ.ಸಿ. ರಾಯ್ ನಡೆದು ಬಂದ ಹಾದಿ ಹಾಗೂ ಅವರ ಸೇವೆ ಕುರಿತಾಗಿ ಜಿ.ಎಸ್. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿದ್ದಲಿಂಗಪ್ಪ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಜಿ.ಎಸ್. ಆಸ್ಪತ್ರೆಯ ಡಾ. ಸಿದ್ದಲಿಂಗಪ್ಪ, ಮಾನಸ ಆಸ್ಪತ್ರೆಯ ಡಾ. ಮಧುಕರ್, ಡಾ. ಕದಂ ವಿಕಾಸ್, ಡಾ. ಪಶುಪತಿ, ಡಾ. ಚರಣ್, ಡಾ. ವೆಂಕಟಾಚಲಪತಿ, ಡಾ. ಪ್ರಶಾಂತ್, ಡಾ. ವಿಜಯ್‌ಕುಮಾರ್, ಡಾ. ಮೋಹನ್, ಡಾ. ಪ್ರಭಾಕರ್, ಡಾ.ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.