ಕೋಲಾರ

ಸರ್ಕಾರಿ ಸವಲತ್ತು ಸದುಪಯೋಗಕ್ಕೆ ಅಧಿಕಾರಿಗಳು ಶ್ರಮಿಸಬೇಕು: ಪ್ರಭಾಕರ್

Published On :

ಶಿಡ್ಲಘಟ್ಟ: ಅಧಿಕಾರಿಗಳು ಪ್ರಾಮಾಣಿಕರಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಸಮಸ್ತ  ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಲು ಸಾಧ್ಯ ಎಂದು ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಹೆಚ್.ಆರ್.ಪ್ರಭಾಕರ್‌ಕಿವಿಮಾತು ಹೇಳಿದರು.
ಪಟ್ಟಣದ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿ ರೀಲರುಗಳು, ಹಾಗೂ ರೇಷ್ಮೆ ಬೆಳೆಗಾರರು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ  ರೇಷ್ಮೆ ಇಲಾಖೆಯ ಸಹಾಯಕ(ನೂಲು ಬಿಚ್ಚಾಣಿಕೆ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಜನಾರ್ದನಮೂರ್ತಿ ಅವರನ್ನು ಸನ್ಮಾನ ಮಾಡಿ ಮಾತನಾಡಿದ ಅವರು ಪ್ರತಿಯೊಬ್ಬ ಅಧಿಕಾರಿಯೂ ಕೂಡಾ ಒಂದು ದಿನ ನಿವೃತ್ತಿಯಾಗಲೇಬೇಕು, ಸೇವೆಗೆ ಮಾತ್ರ ನಿವೃತ್ತಿ ಇದ್ದು, ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳ ಅನುಭವಕ್ಕೆ ಮಾತ್ರ ನಿವೃತ್ತಿಯಿಲ್ಲ, ಇಲಾಖೆಯಿಂದ ಬರುವಂತಹ ವಿವಿಧ ಬಗೆಯ ಸಹಾಯಧನಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯಲ್ಲಿ ತೊಡಗುವಂತೆ ರೀಲರುಗಳು ಹಾಗೂ ರೇಷ್ಮೆ ಬೆಳೆಗಾರರಿಗೆ ಸಲಹೆ ನೀಡಿದರು.
ಸುಮಾರು ರು. 1014 ಲಕ್ಷ ಅನುದಾನ ಪಟ್ಟಣದ ರೇಷ್ಮೆ ಬೆಳೆಗಾರರು ಹಾಗೂ ರೀಲರುಗಳಿಗೆ ತರುವಲ್ಲಿ ಜನಾರ್ದನ ಮೂರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇಲಾಖೆಯಿಂದ ಸಿಗುತ್ತಿರುವ ಸಹಾಯಧನವನ್ನು
ರು. 75 ಸಾವಿರದಿಂದ 1 ಲಕ್ಷಕ್ಕೆ ಏರಿಕೆ, ಹಾಗೂ ಚಾಕಿಗೆ ನೀಡುವಂತಹ ಸಹಾಯಧನ 750 ರೂಪಾಯಿಗಳಿಂದ 1000ಕ್ಕೆ ಏರಿಕೆ,
ಬೈವೋಲ್ಟಿನ್ ಗೂಡಿಗೆ ಪ್ರೋತ್ಸಾಹಧನವಾಗಿ ಪ್ರತಿ ಕೆಜಿಗೆ 40 ರುಪಾಯಿ ಪ್ರೋತ್ಸಾಹಧನ ಕೊಡಲಾಗುತ್ತಿದೆ. ಮುಖ್ಯವಾಗಿ ಚಾಕಿ ಕೇಂದ್ರಗಳು ಮುಂದೆ ಬರಬೇಕಾಗಿದೆ. ಸುಮಾರು 59 ಲಕ್ಷ ಚಾಕಿಯ ಉತ್ಪಾದನೆಯ ಗುರಿ ಹೊಂದಿದ್ದು, 600 ಮೆಟ್ರಿಕ್
ಟನ್ ಗೂಡಿನ ಉತ್ಪಾದನೆಯ ಗುರಿಯನ್ನು ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ರೀಲರುಗಳು, ಹಾಗೂ ರೇಷ್ಮೆ ಬೆಳೆಗಾರರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಸಹಕಾರಿಗಳಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ ಮೂರ್ತಿ, 34 ವರ್ಷಗಳ ಸೇವಾ ಅವಧಿಯಲ್ಲಿ ಎಲ್ಲಾ ಹಂತಗಳಲ್ಲೂ ಸಹಕಾರ ನೀಡಿ ಉತ್ತಮ, ಪ್ರಾಮಾಣಿಕ ಸೇವೆಯನ್ನು ಸಲ್ಲಿಸಲು ಸಹಕಾರಿಗಳಾದ ರೀಲರುಗಳು, ರೇಷ್ಮೆ ಬೆಳೆಗಾರರು, ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಮಾರುಕಟ್ಟೆ ಉಪ ನಿರ್ದೇಶಕ ಹನುಮಂತರಾಯಪ್ಪ, ಎಂ.ಚಂದ್ರಪ್ಪ, ರೀಲರುಗಳ ಸಂಘದ ಅಧ್ಯಕ್ಷ ಅಕ್ಮಲ್‌ಪಾಷಾ, ವಿಜ್ಞಾನಿ ಮಹೇಶ್, ಗೌರವಾಧ್ಯಕ್ಷ ಸಮೀವುಲ್ಲಾ, ಬಿ.ಕೆಂಪರೆಡ್ಡಿ, ಹಿತ್ತಲಹಳ್ಳಿ ಹೆಚ್.ಜಿ.ಗೋಪಾಲಗೌಡ, ಹೆಚ್.ಕೆ.ಸುರೇಶ್, ರಾಮಕೃಷ್ಣಪ್ಪ, ಜಯರಾಮರೆಡ್ಡಿ, ರತ್ನಯ್ಯಶೆಟ್ಟಿ, ಸುಧಾಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.