ಕೋಲಾರ

ಪಾಸ್‌ಬುಕ್ ನೀಡಲು ಬ್ಯಾಂಕ್‌ನಲ್ಲಿ ಪ್ರಿಂಟಿಂಗ್ ಪ್ರೆಸ್ ಇದೆಯೇ?!

Published On :

ಚಿಂತಾಮಣಿ: ಪ್ರಗತಿ ಗ್ರಾಮೀಣ ಬ್ಯಾಂಕ್ ದುಸ್ಥಿತಿಗೆ ತಲುಪಿದೆಯೇ? ಇದು ತಾಲೂಕಿನ ಮೈಲಾಂಡ್ಲಹಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುವ ವಿಧ್ಯಾರ್ಥಿ ಹಾಗೂ ಪೋಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗಿರುವುದು ಕಡ್ಡಾಯ. ಇದರನ್ವಯ ಮೈಲಾಂಡ್ಲಹಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲೂ ಸಹ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯನ್ನು ತೆರೆದಿರುತ್ತಾರೆ. ಆದರೆ ಅವರಿಗೆ ಪಾಸ್ ಪುಸ್ತಕ ಮಾತ್ರ ದೊರೆಯದಾಗಿದೆ. ಒಂದು ಬಿಳಿ ಹಾಳೆಯಲ್ಲಿ ಸೀಲು ಹಾಕಿ ಖಾತೆ ಸಂಖ್ಯೆಯನ್ನು ನಮೂದಿಸಿ ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ. ಈ ಕುರಿತು ವಿಚಾರಿಸಿದರೆ ಎಲ್ಲ ಮಕ್ಕಳಿಗೆ ಪಾಸ್‌ಬುಕ್ ನೀಡಬೇಕಾದರೆ ಬ್ಯಾಂಕಿನಲ್ಲಿ ಪ್ರಿಂಟಿಂಗ್ ಪ್ರೆಸ್ ಓಪನ್ ಮಾಡಬೇಕಾಗುತ್ತದೆಂದು ಅಲ್ಲಿನ ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಿದ್ದಾರೆ.
ಇದನ್ನು ಗಮನಿಸಿದರೆ ಪ್ರಗತಿ ಗ್ರಾಮೀಣ ಬ್ಯಾಂಕ್ ಖಾತೆದಾರರಿಗೆ ಪಾಸ್‌ಬುಕ್ ನೀಡಲೂ ಸಾಧ್ಯವಾಗದಂತ ದುಸ್ಥಿತಿಗೆ ತಲುಪಿದೆಯೇ ಎಂದು ಯೋಚಿಸುವಂತಾಗಿದೆ. ವಿದ್ಯಾರ್ಥಿಗಳು ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಅರ್ಜಿ ನಮೂನೆಯೊಂದಿಗೆ ಪಾಸ್‌ಬುಕ್ ನಕಲು ಪ್ರತಿಯನ್ನು(ಜೆರಾಕ್ಸ್ ಸಹ ಲಗತ್ತಿಸಿ ಸಂಬಂಧಿಸಿದ ಇಲಾಖೆಗೆ) ನೀಡಬೇಕಾಗಿದೆ.
ಆದ್ದರಿಂದ ಸಂಬಂಧಿಸಿದ ಬ್ಯಾಂಕಿನ ಹಿರಿಯ ಅಧಿಕಾರಿಗಳು ಈ ಕುರಿತು ಕೂಡಲೇ ಗಮನ ಹರಿಸಿ ಬಡ ವಿದ್ಯಾರ್ಥಿಗಳು ಬ್ಯಾಂಕ್‌ಪಾಸ್ ಬುಕ್ ಪಡೆಯುವಂತಾಗಲು ಕ್ರಮ ಕೈಗೊಂಡು ಸಹಕರಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.