ಪರ ಸೇವೆಯೇ ಮಾನವ ಧರ್ಮ: ಕೆ.ರಮೇಶ್
ಗೌರಿಬಿದನೂರು: ತಮ್ಮ ಕುಟುಂಬ ಸದಸ್ಯರಿಗಾಗಿ ಶ್ರಮಿಸುವುದು ಕರ್ತವ್ಯ, ಇತರರಿಗೆ ಸೇವೆ ಸಲ್ಲಿಸುವುದು ಮಾನವ ಧರ್ಮ ಎಂದು ಲಯನ್ಸ್ ಉಪ ರಾಜ್ಯಪಾಲ ಕೆ.ರಮೇಶ್ ಅಭಿಪ್ರಾಯ ಪಟ್ಟರು.ಮಂಗಳವಾರ ರಾತ್ರಿ ಆಚಾರ್ಯ ಪ್ರಾರ್ಥನಾ ಮಂದಿರದಲ್ಲಿ ನಡೆದ ಲಯನ್ ಹಾಗು ಲಯನೆಸ್ ಕ್ಲಬ್ಗಳ 2013-14ಸಾಲಿನ ಪಾಲಕ ಮಂಡಲಿ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮಹೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿಶ್ವದಲ್ಲಿ 207 ರಾಷ್ಟ್ರಗಳಲ್ಲಿ 49 ಸಾವಿರಕ್ಕೂ ಹೆಚ್ಚು ಲಯನ್ಸ್ ಕ್ಲಬ್ಗಳಿವೆ. ಈ ಕ್ಲಬ್ಗಳ ಮುಖಾಂತರ ಸಾವಿರಾರು ಮಂದಿ ಸದಸ್ಯರು ಸಮಾಜಸೇವೆ ಮಾಡುತ್ತಿದ್ದಾರೆ. ಉಚಿತ ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ, ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮುಂತಾದ ಸೇವಾ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದೆ ಎಂದರು.ನೂತನ ಪದಾಧಿಕಾರಿಗಳು: ಕ್ಲಬ್ನ ನೂತನ ಅಧ್ಯಕ್ಷರಾಗಿ ಡಾ.ಎಂ.ಎನ್.ಶ್ರೀಧರ್, ಕಾರ್ಯದರ್ಶಿಯಾಗಿ ಲಕ್ಷ್ಮಣಗೌಡ, ಖಚಾಂಚಿಯಾಗಿ ಡಾ.ಸುಧೀರ್ ಹಾಗು ಆಡಳಿತ ಮಂಡಲಿ ಸದಸ್ಯರುಗಳು ಪ್ರಮಾಣ ವಚನ ಸ್ವೀಕರಿಸಿದರು.ಲಯನೆಸ್ ಕ್ಲಬ್ ಅಧ್ಯಕ್ಷರಾಗಿ ಪಾರ್ವತಮ್ಮ, ಕಾರ್ಯದರ್ಶಿಯಾಗಿ ಶಾಂತಿ ಸೂರಜ, ಖಚಾಂಚಿಯಾಗಿ ಪದ್ಮಾವತಮ್ಮ ಹಾಗೂ ಆಡಳಿತ ಮಂಡಲಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.ನೂತನವಾಗಿ ಸೇರ್ಪಡೆಯಾದ ಕೆ.ಮದ್ದಿಲೇಟಿ ವಿಜಯರಾಘವ, ಜಿ.ಎನ್.ಸೂರಜ್, ಜಿ.ವಿ.ನಾಗರಾಜು, ಗಣೇ ಶ್ ಅವರಿಗೆ ಜಿಲ್ಲೆಯ ಎರಡನೇ ಉಪ ರಾಜ್ಯಪಾಲ ಎನ್.ಕುಮಾರ್ ಪ್ರಮಾಣ ವಚನ ಬೋಧಿಸಿದರು.ರೀಜನಲ್ ಛೇರ್ಮನ್ ಎ.ರವೀಂದ್ರನಾಥ್, ಜೋನ್ ಛೇರ್ಮನ್ ಆರ್.ಪ್ರಕಾಶ್, ಮಾಜಿ ಅಧ್ಯಕ್ಷ ಅಶ್ವತ್ಥರೆಡ್ಡಿ, ಪ್ರೊ.ಕೆ.ರಾಮಾಂಜಿನೇಯುಲು ಇತತರು ಇದ್ದರು.
ಚಿಕ್ಕಬಳ್ಳಾಪುರ 30 ನೇ ವಾರ್ಡಿಗೆ ಚುನಾವಣಾ ವೇಳಾಪಟ್ಟಿ ಪ್ರಕಟ
ಚಿಕ್ಕಬಳ್ಳಾಪುರ: ರೇಲ್ವೆ ಹಳಿ ನಿರ್ಮಾಣಕ್ಕಾಗಿ ದಲಿತರನ್ನು ಒಕ್ಕಲೆಬ್ಬಿಸಲಾಗುತ್ತಿದೆ, ನಿವಾಸಿಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ನಗರಸಭಾ ಚುನಾವಣೆ ಬಹಿಷ್ಕರಿಸಲಾಗಿದ್ದ ನಗರದ 30 ನೇ ವಾರ್ಡಿನ (ಅಂಬೇಡ್ಕರ್ ಕಾಲೋನಿ) ನಗರಸಭಾ ಸದಸ್ಯರ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈ 10 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಜು.17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಜು.18 ಸ್ವೀಕಾರಗೊಂಡ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆದುಕೊಳ್ಳಲು ಜು.20 ಕೊನೆಯ ದಿನವಾಗಿದ್ದು, ಜು.28 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಅವಶ್ಯವಿದ್ದಲ್ಲಿ ಜು.30 ರಂದು ಮರು ಮತದಾನ ನಡೆಯಲಿದ್ದು ಜು.31 ರಂದು ಮತ ಎಣಿಕೆ ಕಾರ್ಯ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಜು.10 ರಿಂದ ಜು.31 ರವರೆಗೂ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ವೀರಭದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಗರದ 30 ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಚುನಾವಣೆಯಿಂದ ದೂರ ಉಳಿದಿದ್ದರು. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ನಿವಾಸಿಗಳ ಒತ್ತಾಯದಂತೆ ಕೊನೆಯ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ 30ನೆ ವಾರ್ಡಿಗೆ ಚುನಾವಣೆಯನ್ನು ಮುಂದೂಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

