ಶಿಕ್ಷಕರ ಸಂಘದ ಚುನಾವಣಾ ಪ್ರಚಾರ ಶುರು
ಚಿಂತಾಮಣಿ: ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಗೆ 28 ವಿವಿಧ ಇಲಾಖೆಯ ನೌಕರರು ಸ್ಪರ್ಧಿಸಲು ತೀವ್ರ ಕಸರತ್ತು ನಡೆಸುತ್ತಿರುವುದು ತಾಲೂಕಿನ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಮೂಲಕ ಸ್ಪರ್ಧೆಗಿಳಿದಿದ್ದಾರೆ. ಚಿಂತಾಮಣಿ ತಾಲೂಕು ಸರ್ಕಾರಿ ನೌಕರರ ಸಂಘದಲ್ಲಿ ಸುಮಾರು 1800 ರಿಂದ 2000 ವರೆಗೂ ಸರ್ಕಾರಿ ನೌಕರರ ಸದಸ್ಯರು ಚಾಲ್ತಿಯಲ್ಲಿದ್ದಾರೆ. ಇದರಲ್ಲಿ ವಿವಿಧ ಇಲಾಖೆಯ ಹಲವು ನೌಕರರು ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಹಾಗೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಾಲೂಕು ಹಾಗೂ ಪಟ್ಟಣದಲ್ಲಿ ಗುಂಡು ತುಂಡು ಪಾರ್ಟಿಗಳು ಭ ರ್ಜರಿಯಾಗಿ ನಡೆಯುತ್ತಿವೆಯೆಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಚುನಾವಣೆಯಲ್ಲಿ ವಿಶೇಷವಾಗಿ ವಿದ್ಯಾ ಇಲಾಖೆಯಲ್ಲಿ ಸ್ಪರ್ಧೆಗೆ ಪ್ರಬಲವಾಗಿ ಪೈಪೋಟಿ ನಡೆಯುತ್ತಿದೆ. ಪ್ರೌಢಶಾಲಾ ಸಹ ಶಿಕ್ಷಕರ ಪೈಕಿ ಸ್ಪರ್ಧೆಯಾಳುಗಳಾದ ಪಟ್ಟಣದ ನೂತನ ಪ್ರೌಢಶಾಲೆ ಸಹ ಶಿಕ್ಷಕ ಆರ್.ವೆಂಕಟರಮಣರೆಡ್ಡಿ, ತಾಲೂಕಿನ ಗಂಜೂರು ಗ್ರಾಮದ ಸಹ ಶಿಕ್ಷಕ ಹಾಗೂ ಹಿಂದಿನ ಅಧ್ಯಕ್ಷ ಆರ್.ವೆಂಕಟರಮಣರೆಡ್ಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇಸಿಒ ಡಿ.ಜನಾರ್ದನ ರೆಡ್ಡಿ ಮತ್ತು ಕೈವಾರ ಸಹ ಶಿಕ್ಷಕ ಯಲ್ಲಪ್ಪ ಕಣಕ್ಕೆ ಇಳಿಯಲು ನಿರ್ಧರಿಸಿ, ಈಗಾಗಲೇ ತಾಲೂಕಿನ ಮತ್ತು ಪಟ್ಟಣದಲ್ಲಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅವರವರ ಸಾಧನೆಗಳನ್ನು ಶಿಕ್ಷಕರಿಗೆ ಮನವರಿಕೆ ಮಾಡಿ, ತಮ್ಮ ಉಮೇದುವಾರಿಕೆ ಪರ ಲಾಬಿ ಸಹ ನಡೆಸುತ್ತಿದ್ದಾರೆಂಬ ಮಾತು ಸಹ ಕೇಳಿಬರುತ್ತಿದೆ.
ಚುನಾವಣಾ ವೇಳಾಪಟ್ಟಿ: ನಾಮಪತ್ರ ಸಲ್ಲಿಸಲು ಇದೇ ತಿಂಗಳು 11 ರಿಂದ 15 ಕಡೆ ದಿನವಾಗಿರುತ್ತದೆ. 16 ರಂದು ನಾಮಪತ್ರ ವಾಪಸ್ ಪಡೆಯಲು ಕಡೆ ದಿನ. 22 ರಂದು ಬೆಳಿಗ್ಗೆ 11 ರಿಂದ ಸಂಜೆ 4 ತನಕ ಚುನಾವಣೆ ನಡೆಯಲಿದೆ. ಅದೇ ದಿನ ಮತ ಎಣಿಕೆ ಮತ್ತು ಫಲಿತಾಂಶ ಸಹ ಹೊರ ಬೀಳಲಿದೆಯೆಂದು ಸಂಘದ ಶಿವರಾಜ್ ತಿಳಿಸಿದ್ದಾರೆ.
ಶೈಕ್ಷಣಿಕ ಅಭಿವೃದ್ಧಿ ಕುಂಠಿತ: ಚುನಾವಣಾ ಗುಂಗಿನಲ್ಲಿ ಹಲವು ಶಿಕ್ಷಕರು ಶಾಲೆಯ ಪಾಠ ಪ್ರವಚನ ಕಡೆಗಣಿಸಿ ಮತ್ತು ವಿಷಯವಾರು ಶಿಕ್ಷಕರು ರಜೆ ಪಡೆದು ಗೈರು ಹಾಜರಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುವುದರಿಂದ ಶಾಲಾ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂಬ ದೂರುಗಳು ಪೋಷಕರು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಶಾಲಾ ವಿಭಾಗದಲ್ಲಿ ಒಂದು ಮತ್ತು ಪ್ರಾಥಮಿಕ ಶಿಕ್ಷಕರಲ್ಲಿ 3 ಸ್ಥಾನಗಳಿಗೆ ಸ್ಪರ್ಧೆ ಯಾಳುಗಳಾಗಲು ತೀವ್ರ ಪೈಪೋಟಿ ನಡೆಯುತ್ತಿದೆ.
- ಎನ್.ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

