ಕೋಲಾರ

ಚಿನ್ನದ ಮಣ್ಣು ಕಳವಿಗೆ ಯತ್ನ: ಇಬ್ಬರ ಬಂಧನ

Published On :

ಕೆಜಿಎಫ್:  ಬಿಜಿಎಂಎಲ್ ಚಿನ್ನದ ಗಣಿಯ ಮಿಲ್‌ನಲ್ಲಿ ಚಿನ್ನದ ಮಣ್ಣು ಕಳವು ಮಾಡಲು ಹೋಗಿದ್ದ ಇಬ್ಬರನ್ನು  ಪೊಲೀಸರು ಬಂಧಿಸಿದ್ದು, ಇತರರು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ತಂಗರಾಜ್ ಮತ್ತು ಕುಟ್ಟಿ ಬಂಧಿತರು. ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜಿಎಂಎಲ್ ಚಿನ್ನದ ಗಣಿಯ ನಂದಿದುರ್ಗ್ ಮಿಲ್ ಒಳಗೆ ಚಿನ್ನದ ಅದಿರಿನ ಮಣ್ಣನ್ನು ಕಳ್ಳರು ಕಳವು ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣಾ ಪಿಎಸ್‌ಐ ಗಂಗಾಧರ್ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಚಿನ್ನಪ್ಪನ್, ಸೆಲ್ವ, ಸುರೇಂದ್ರ, ಪಿಂಟು ಮತ್ತಿತರರನ್ನು ತಲೆಮರೆಸಿಕೊಂಡವರಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಉರಿಗಾಂ ಪೊಲೀಸ್ ಠಾಣೆ ಪಿಎಸ್‌ಐ ಗಂಗಾಧರ್ ಕ್ರಮ ಜರುಗಿಸಿದ್ದಾರೆ.
ಜೂಜು: 7 ಮಂದಿ ಬಂಧನ
ಕೆಜಿಎಫ್:  ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಅಶೋಕಕುಮಾರ್, ವೇಣುದಾಸ್, ಶ್ರೀಧರ್, ಚಿರಂಜೀವಿ, ಸರವಣ, ಸೆಂದಿಲ್ ಮತ್ತು ಕೃಷ್ಣ ಬಂಧಿತರು. ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಣಕುಪ್ಪದ ವೆಂಕಟು ಎಂಬವರ ಜಮೀನಿನಲ್ಲಿ ಜೂಜಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ವೃತ್ತನಿರೀಕ್ಷ ಟಿ.ಸಿ. ವೆಂಕಟೇಶ್ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಆಟಕ್ಕೆ ಪಣವಾಗಿಟ್ಟಿದ್ದ 16300 ನಗದು, 4 ದ್ವಿಚಕ್ರ ವಾಹನ, ವಿವಿಧ ಕಂಪನಿಯ 11 ಮೊಬೈಲ್ ಫೋನ್‌ಗಳು, 52 ಇಸ್ಪೀಟ್ ಎಲೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.