ಕೋಲಾರ

ಇಂದು ಉಚಿತ ಡಯಾಬಿಟಿಕ್ ರಟಿನೋಪತಿ ಶಿಬಿರ

Published On :

ಕೋಲಾರ: ನಗರದ ಹೊಲವಲಯದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ದೇವರಾಜ ಅರಸು ವ್ಯೆದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣಾ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತ ಡಯಾಬಿಟಿಕ್ ರಟಿನೋಪತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಡಾ.ವಿ. ಲಕ್ಷ್ಮಯ್ಯ, ವಿ. ಮುನಿನಾರಾಯಣ, ನರೇಂದ್ರದತ್ತಿ, ರಾಜೇಶ್‌ಬಾಬು, ಕೆ.ಎಸ್. ಪ್ರಕಾಶ್ ಭಾಗವಹಿಸುವರು. ಸಕ್ಕರೆ ಕಾಯಿಲೆ ಇರುವವರಿಗೆ ಮಾತ್ರ ಶಿಬಿರ ನಡೆಯಲಿದ್ದು ಅಕ್ಷಿ ಪಟಲದ ತೊಂದರೆ ಇದ್ದವರಿಗೆ ಕಣ್ಣಿನ ತಜ್ಞರು ಪರೀಕ್ಷಿಸಿ ಅವಶ್ಯಕತೆ ಇದ್ದರೆ ಜಾಲಪ್ಪ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎನ್.ಅಕ್ಷಯಕುಮಾರ್ ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಅರ್ಜಿ
ಮುಳಬಾಗಲು:  ತಾಲೂಕಿನ ಪ್ರತಿಭಾವಂತ ಯಾದವ (ಗೊಲ್ಲ) ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲೂಕು ಯಾದವ ನೌಕರರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ. ಎಸ್‌ಎಸ್‌ಎಲ್ಸಿ, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ, ಬಿಇಡ್, ಎಂಎ ಮತ್ತು ತಾಂತ್ರಿಕ ಪರೀಕ್ಷೆಗಳಲ್ಲಿ ಶೇ.60ಕ್ಕೂ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಯಾದವ ಕಲ್ಯಾಣ ಮಂಟಪ, ಸಂತೆ ಮೈದಾನ, ಮುಳಬಾಗಲು ಇಲ್ಲಿಗೆ ಜು.25 ರೊಳಗೆ ಸಲ್ಲಿಸಲು ಕೋರಲಾಗಿದೆ.
ಎಸ್‌ಡಿಎಂಸಿ ರಚನೆ
ಚಿಂತಾಮಣಿ: ತಾಲೂಕಿನ ಮೈಲಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಗೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಎಂ.ಎನ್. ಕೇಶವಮೂರ್ತಿ, ಉಪಾಧ್ಯಕ್ಷರಾಗಿ ನಜೀಬ್‌ಪಾಷ, ಎಂ. ಜಗನ್ನಾಥ್, ಲಕ್ಷ್ಮಿದೇವಮ್ಮ, ಕಲೀಂವುಲ್ಲಾ ಷರೀಪ್, ಎಂ. ನಾರಾಯಣಸ್ವಾಮಿ, ಪ್ರಮೀಳಮ್ಮ, ಎಂ. ವೆಂಕಟೇಶ್, ಫರ್ಜಾನ, ಪಾರ್ವತಮ್ಮ, ಕೂತರಾಜನಹಳ್ಳಿ ಮುನಿಯಪ್ಪ, ಗಡದಾಸನಹಳ್ಳಿಯ ವರಲಕ್ಷ್ಮಿ, ಕುರುಬೂರಿನ ಕೆ.ಎಂ. ಶೋಭ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾಪಂ ಸದಸ್ಯರಾದ ಮುನಿಯಪ್ಪ, ಮಾಜಿ ಸದಸ್ಯರಾದ ಕೆ.ಆರ್. ರಮೇಶ್, ಮುಖಂಡರಾದ ಮುರಳಿಗೌಡ, ಅಬ್ದುಲ್ ಖುದ್ದುಸ್, ಡೈರಿ ಆಂಜಪ್ಪ, ಅಹಮದ್ ಜಾನ್, ಎಂ.ಎಸ್.ಶಂಕರ್, ಎಸ್.ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷ ಎಂ. ವೆಂಕಟೇಶಗೌಡ ಹಾಗೂ ಮುಖ್ಯ ಶಿಕ್ಷಕಿ ಹಸೀನಾ ಬೇಗಂ, ಸಹಶಿಕ್ಷಕರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.