ಮಾಲೂರು: ದೇಗುಲದ ನೂತನ ಗುರುಗಳ ಪದಗ್ರಹಣ
ಕ.ಪ್ರ. ವಾರ್ತೆ, ಮಾಲೂರು. ಜು.9
ಶಾಂತಿ ಕೇಂದ್ರವಾಗಿರುವ ದೇವಾಲಯವನ್ನು ನಿರ್ಮಿಸಬೇಕಾದರೆ ಎಲ್ಲರ ಸಹಕಾರ-ಸಹಾಯ ಅಗತ್ಯ ಎಂದು ಸಂತ ಪ್ರಾನ್ಸಿಸ್ ಡಿ.ಸೇಲರ್ ದೇವಾಲಯದ ನೂತನ ಗುರುಗಳಾದ ಫಾದರ್ ಡಾ. ಜೆರೋಮ್ ಹೇಳಿದರು.
ಪಟ್ಟಣದ ಗುಡ್ನಹಳ್ಳಿ ರಸ್ತೆಯಲ್ಲಿರುವ ಸಂತ ಪ್ರಾನ್ಸಿಸ್ ಡಿ.ಸೇಲರ ದೇವಾಲಯದ ವಿಚಾರಣೆಯ ಸೇವಾ ಸ್ಥಾನದ ಗುರುಗಳಾಗಿ ಪದಗ್ರಹಣ ಹಾಗೂ ನಿರ್ಗಮಿತ ಫಾದರ್ ಇರುದಯ ರಾಜ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತ ಒಂದು ದೇವಾಲಯ ಗ್ರಾಮದ ಶಾಂತಿ ಕೇಂದ್ರವಾಗಲಿದ್ದು, ಇನ್ನೆಲ್ಲೂ ಸಿಗದ ಶಾಂತಿ, ನೆಮ್ಮದಿ ದೇವಾಲಯಗಳಲ್ಲಿ ಕಾಣಬಹುದು ಎಂದರು.
ಇಲ್ಲಿಯ ತನಕ ಇಲ್ಲಿ ಸೇವೆ ಸಲ್ಲಿಸಿದ್ದ ಫಾದರ್ ಇರುದಯರಾಜ್ ಕೋಲಾರ ಜಿಲ್ಲೆಯವರಾಗಿದ್ದು, ಅವರು ವಿಚಾರಣೆ ಗುರುಗಳಾಗಿ ಲಂಡನ್ಗೆ ತೆರಳುತ್ತಿರುವುದು ಸಂತೋಷದ ವಿಷಯವಾಗಿದ್ದು, ಜಿಲ್ಲೆಯ ಪ್ರಥಮ ವಿಚಾರಣೆ ಗುರುಗಳು ವಿದೇಶಕ್ಕೆ ತೆರಳುತ್ತಿರುವುದರಿಂದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಲಂಡನ್ಗೆ ತೆರಳುತ್ತಿರುವ ಇಲ್ಲಿನ ಎಸ್.ಎಫ್.ಎಸ್. ಶಾಲೆಯ ಪ್ರಾಂಶುಪಾಲರು ಹಾಗೂ ದೇವಾಲಯದ ವಿಚಾರಣೆ ಗುರುಗಳಾದ ಫಾದರ್ ಇರುದಯರಾಜ್ ಅವರನ್ನು ಸ್ಥಳೀಯ ವಿಚಾರಣೆಯ ಭಕ್ತಾದಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಕೋಲಾರ ವಲಯದ ಶ್ರೇಷ್ಠ ಗುರುಗಳಾದ ಫಾದರ್ ಅಲೋಷಿಯನ್ ಹಾಗೂ ಬೆಂಗಳೂರು ಮಹಾಧರ್ಮ ಕ್ಷೇತ್ರದ ಪ್ರತಿನಿಧಿಗಳಾಗಿ ಬಂದಿದ್ದ ಸಂತ ಅಲೋಷಿಯಸ್ ಕಾಲೇಜಿನ ವ್ಯವಸ್ಥಾಪಕರಾದ ಫಾದರ್ ಅರುಳಪ್ಪ ರವರ ಸಮ್ಮುಖದಲ್ಲಿ ಪದಗ್ರಹಣ ವಿಧಿವಿಧಾನ ಪ್ರತಿಜ್ಞಾ ವಿಧಿಗಳನ್ನು ಅನುಷ್ಠಾನಗೊಳಿಸಿದರು. ನಂತರ ಹಾಲಿ ಗುರುಗಳಾದ ಫಾದರ್ ಇರುದಯರಾಜ್ ಅವರಿಂದ ನೂತನ ಫಾದರ್ ಡಾ. ಜೆರೋಮ್ ಪೂರ್ಣ ಅಧಿಕಾರವನ್ನು ಸ್ವೀಕರಿಸಿದರು.
ಎಸ್.ಎಫ್.ಎಸ್. ಶಾಲೆ ಪ್ರಾಂಶುಪಾಲರಾದ ಫಾದರ್ ಸಾಜೂ ಜೋಸ್, ಪಿಎಸ್ಐ ಸೇವಾ ಭವನದ ನಿರ್ದೇಶಕ ಫಾದರ್ ಜಿಜೋ ಜೋಷ್, ಕನ್ಯಾಸ್ತ್ರೀಯರು, ಗ್ರೇಶನ್ ಅಲ್ಮೇಡಾ. ರೋಜಲಿನ್ ಪುಪ್ಬ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

