ಕೋಲಾರ

ಶಾಸಕರ ಗ್ರಾಮದಲ್ಲೇ ನೀರಿಗೆ ಹಾಹಾಕಾರ

Published On :

ತಿಪಟೂರು: ತಾಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಸಕ ಕೆ.ಷಡಕ್ಷರಿಯವರ ಸ್ವಗ್ರಾಮವಾದ ಕಲ್ಲೇಗೌಡಪಾಳ್ಯದಲ್ಲಿ ಕಳೆದ 2 ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದು, ಶಾಸಕರಾದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2 ತಿಂಗಳ ಹಿಂದೆಯೇ ಈ ಗ್ರಾಮದ ಬೋರ್‌ನಲ್ಲಿ ನೀರಿಲ್ಲದ್ದರಿಂದ ಹೊಸ ಬೋರ್‌ವೆಲ್ ಕೊರೆಸಿ ನೀರು ಬಂದಿದ್ದರೂ ಸಹ ಇದುವರೆಗೂ ಪಂಪು-ಮೋಟರ್ ಅಳವಡಿಸಿಲ್ಲ. ಈ ಬೋರ್‌ವೆಲ್ ನೀರನ್ನೇ 150ಕ್ಕೂ ಹೆಚ್ಚು ಮನೆಗಳ ರೈತರು ತಮಗೂ ಹಾಗೂ ತಮ್ಮ ಜಾನುವಾರುಗಳಿಗೂ ನಂಬಿಕೊಂಡಿದ್ದಾರೆ. ಸದ್ಯ ದಿನಕ್ಕೆ 2 ಟ್ಯಾಂಕರ್ ನೀರನ್ನು ಮಾತ್ರ ಗ್ರಾಮ ಪಂಚಾಯಿತಿ ಕಳುಹಿಸುತ್ತಿದ್ದು, ಈ ನೀರು ಸಾಲದೆ ದಿನನಿತ್ಯವೂ ಇಲ್ಲಿ ನೀರಿಗಾಗಿ ಜಗಳವಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಟ್ಯಾಂಕರ್ ಒಂದಕ್ಕೆ ರು. 300ರಂತೆ ಹಣ ತೆತ್ತು ನೀರು ಹಾಕಿಸಿಕೊಂಡು ಶಾಸಕರು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಗ್ರಾಮಸ್ಥರು ಜಿಪಂಯವರನ್ನು ಕೇಳಿದರೆ ಗ್ರಾಮ ಪಂಚಾಯಿತಿಯವರನ್ನು ಕೇಳಿ ಎನ್ನುತ್ತಾರೆ. ಹೀಗೆಯೇ ಅಧಿಕಾರಿಗಳು ಇಂದು, ನಾಳೆ ಎಂದು ಕಾಲ ತಳ್ಳುತ್ತಿದ್ದಾರೆಯೇ ವಿನಃ ಮೋಟರ್ ಅಳವಡಿಸುವ ಗೋಜಿಗೂ ಹೋಗದೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.