ಹೊಸ ಸಿಎಂ ಬಂದ್ರೂ ಬದಲಾಗದ ಹಳೇ ಬೋರ್ಡು
ಟೇಕಲ್ ಲಕ್ಷ್ಮೀಶ್
ಟೇಕಲ್: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಮಾಲೂರು ತಾಲೂಕಿನ ಹಲವಾರು ನಾಡ ಕಚೇರಿಗಳ ಮುಂಭಾಗದ ಫ್ಲೆಕ್ಸ್ ಬೋರ್ಡ್ಗಳಲ್ಲಿ ಸಾರ್ವಜನಿಕರಲ್ಲಿ ಬಹುತೇಕ ಗೊಂದಲ ಮೂಡಿಸುತ್ತಿದೆ ಎಂಬುದು ಜನರಲ್ಲಿ ಬಂದಿರುವ ಗೊಂದಲದ ಗೂಡು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಅಟಲ್ಜೀ ಅವರ ಜನಸ್ನೇಹಿ ಕೇಂದ್ರದ ಫ್ಲೆಕ್ಸ್ಗಳು ಇಂದಿಗೂ ಟೇಕಲ್, ಮಾಸ್ತಿ, ಬನಹಳ್ಳಿ, ಕೆ.ಜಿ.ಹಳ್ಳಿ, ತೊರಲಕ್ಕಿ ಮುಂತಾದ ಕೆಲವು ನಾಡ ಕಚೇರಿಗಳ ಮುಂದೆ ರಾರಾಜಿಸುತ್ತಿವೆ. ಇದರಿಂದಾಗಿ ಜನರಲ್ಲಿ ಈಗ ರಾಜ್ಯದ ಮುಖ್ಯಮಂತ್ರಿ ಬದಲಾಗಿರುವುದು
ಗೊತ್ತಿದ್ದರೂ ಬೋರ್ಡ್ ನೋಡಿ ಅಧಿಕಾರಿಗಳು, ಬೆಂಬಲಿಗರ ನಿರ್ಲಕ್ಷ್ಯವನ್ನ್ನು ಆಡಿಕೊಳ್ಳುವಂತಾಗಿದೆ. ಇದರಿಂದ ಪುಕ್ಕಟೆ ಮನರಂಜನೆಯೂ ಪಡೆಯುತ್ತಿದ್ದಾರೆ.
ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ.
ಸಿದ್ದರಾಮಯ್ಯ ಹೊಸ ಮುಖ್ಯಮಂತ್ರಿಯಾಗಿ ಬಜೆಟ್ನ್ನೂ ಮಂಡಿಸಿದ್ದಾರೆ. ಆದರೂ, ಜನರನ್ನು ಈ ಬೋರ್ಡ್ಗಳು ದಾರಿತಪ್ಪಿಸುತ್ತಿವೆ. ಈ ಬಗ್ಗೆ ಇನ್ನಾದರೂ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕಟೌಟ್ಗಳ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ. ಹಾಗಾಗುವುದೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

