ಕೋಲಾರ

ಅಮಲಿನಲ್ಲಿ ಹೊಡೆದಾಟ ದಾಯಾದಿಯಿಂದ ಹತ್ಯೆ

Published On :

ಕ.ಪ್ರ.ವಾರ್ತೆ ಬಾಗೇಪಲ್ಲಿ  ಜು. 15
ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ದಾಯಾದಿಗಳಿಬ್ಬರು ಮಾಡಿಕೊಂಡ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಪರಗೋಡು ಗ್ರಾ.ಪಂ.ವ್ಯಾಪ್ತಿಯ ಪೂಲವಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಹೊಡೆದಾಟದಲ್ಲಿ ಶ್ರೀನಿವಾಸ(40) ಎಂಬುವವರೇ ಮೃತಪಟ್ಟ ದುರ್ದೈವಿ.
ಘಟನೆ ವಿವರ: ಕಳೆದ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಮೃತ ಶ್ರೀನಿವಾಸ, ತನ್ನ ಚಿಕ್ಕಪ್ಪನ ಮಗನಾದ ಗಂಗಾಧರಪ್ಪ(50) ಮತ್ತು ಗಂಗಾಧರಪ್ಪ ರವರ ಮಗನಾದ ನರಸಿಂಹಮೂರ್ತಿ (ತಂದೆ ಮತ್ತು ಮಗ) ಎಂಬುವವರು ಹಣದ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಗಂಗಾಧರಪ್ಪನನ್ನು ಮಗನಾದ ನರಸಿಂಹಮೂರ್ತಿ ಚೆನ್ನಾಗಿ ಥಳಿಸಿದ್ದ ಎನ್ನಲಾಗಿದೆ.
 ಈ ವಿಷಯವನ್ನು ಮೃತ ಶ್ರೀನಿವಾಸ ಗ್ರಾಮದಲ್ಲಿ ಪ್ರಚಾರ ಮಾಡುವ ಮೂಲಕ ಹೀಯಾಳಿಸುತ್ತಿದ್ದರಿಂದ  ಕೆರಳಿದ ಗಂಗಾಧರ್ ಕೆಲವು ದಿನಗಳಿಂದ ಶ್ರೀನಿವಾಸನನ್ನು ಹುಡುಕುತ್ತಿದ್ದ ಎನ್ನಲಾಗಿದೆ.
ಕಳೆದ ರಾತ್ರಿ ಅಂಗಡಿಯೊಂದರ ಬಳಿ ಶ್ರೀನಿವಾಸ ಮತ್ತು ಗಂಗಾಧರಪ್ಪ ಮುಖಾಮುಖಿಯಾಗಿದ್ದಾರೆ. ಈ ಇಬ್ಬರೂ ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಮುಖಾಮುಖಿಯಾದ  ಆರೋಪಿ ಗಂಗಾಧರಪ್ಪ ನನ್ನನ್ನು  ಹಿಯಾಳಿಸುವುದಕ್ಕೆ ಹಾಗೂ ನನ್ನ ಕುಟುಂಬದ ಬಗ್ಗೆ  ಮಾತನಾಡಲು ನೀನು ಯಾರೆಂದು ಮೃತ ಶ್ರೀನಿವಾಸನನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು ಮೃತ ಶ್ರೀನಿವಾಸನು ಗಂಗಾಧರಪ್ಪನಿಗೆ ಒಂದು ಏಟು ಹಾಕಿದ್ದಾನೆ.
 ಇದರಿಂದ ಕುಪಿತನಾದ ಗಂಗಾಧರಪ್ಪ ಅಂಗಡಿಯಲ್ಲಿದ್ದ ಕಬ್ಬಿಣದ ತೂಕ ಮಾಡುವ ತಕ್ಕಡಿಯಿಂದ ಬಲವಾಗಿ ತಲೆ, ಎದೆ ಮತ್ತು ಕೆನ್ನೆಗೆ ಹೊಡೆದು ಗಾಯಗೊಳಿಸಿದ ಪರಿಣಾಮ ಶ್ರೀನಿವಾಸ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆರೋಪಿ ಗಂಗಾಧರನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.