ಕೋಲಾರ

31ರೊಳಗೆ ಅರ್ಜಿ ಸಲ್ಲಿಕೆಗೆ ಸೂಚನೆ

Published On :

ಚಿಕ್ಕಬಳ್ಳಾಪುರ: ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಅರ್ಹ ರೈತರು ಬೆಳೆ ವಿಮೆಗಾಗಿ ಜು.31 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬೀದ್ ತಿಳಿಸಿದರು.
ನಗರದಲ್ಲಿರುವ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಅತಿವೃಷ್ಟಿ, ಅನಾವೃಷ್ಟಿ, ಆರ್ದ್ರತೆ, ಗಾಳಿಯ ವೇಗ ಮತ್ತು ತಾಪಮಾನ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದ ಬೆಳೆ ನಷ್ಟ ಸಂಭವಿಸಿದ್ದಲ್ಲಿ ಬೆಳೆ ವಿಮೆ ರಕ್ಷಣೆ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ಮಳೆಯ ಪ್ರಮಾಣದ ಆಧಾರದ ಮೇಲೆ ಬೆಳೆ ವಿಮಾ ನಷ್ಟ ಪರಿಹಾರ ಲೆಕ್ಕಹಾಕಲಾಗುತ್ತಿದೆ ಎಂದರು. ಆ್ಜ್ಠ್ಝ್ಛ್ಡಟಡ್ಡ್ಠಿಜ ಐಟಿಡ್ಡ್ಠಛಟ್ಛಿಜ ಈ್ಟಟಠಛಟಿಣ ್ಟಜಿ ಐಟಿಜ್ಝಛ ಔಡಿಜ ಸಂಸ್ಥೆಯವರು ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕು,ಐಈಐಈಐ ಔ್ಟಟಛಿಛ್ಠಜ  ಸಂಸ್ಥೆ ಗೌರಿಬಿದನೂರು, ಖಿಆಖಿಆ ಆಐಎ ಔಡಿಜ ಸಂಸ್ಥೆಯವರು  ಬಾಗೇಪಲ್ಲಿ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆ ನಷ್ಟದ ಅಂಕಿ ಅಂಶಗಳನ್ನು ತಿಳಿದುಕೊಂಡು ವಿಮೆ ಸೌಲಭ್ಯವನ್ನು ಪಡೆದುಕೊಳ್ಳುವ ರೈತರಿಗೆ ನಷ್ಟಪರಿಹಾರವನ್ನು ನೀಡಲಿದ್ದಾರೆ ಎಂದರು.
ಬೆಳೆ ಸಾಲ ಪಡೆಯುವ ರೈತರು ಕಡ್ಡಾಯವಾಗಿ ಮತ್ತು  ಇತರೆ ರೈತರು ಆಸಕ್ತಿ ಹೊಂದಿದ್ದಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬೇಕು.2013 ರ ಮುಂಗಾರು ಹಂಗಾಮಿನಲ್ಲಿ ಈ ಜಿಲ್ಲೆಯಲ್ಲಿ ರಾಗಿ (ಮಳೆ ಆಶ್ರಿತ),ಮುಸುಕಿನಜೋಳ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ದ್ರಾಕ್ಷಿ ಬೆಳೆಯು ವಿಮೆ ಯೋಜನೆಯ ವ್ಯಾಪ್ತಿಗೆ ಬರುತ್ತದೆ ಎಂದರು.
ವಿಮಾ ಗಣನೆ ದರ ಮತ್ತು ರೈತರು ಕಟ್ಟಬೇಕಾಗಿರುವ ವಿಮಾ ಕಂತಿನ ದರದ ವ್ಯತ್ಯಾಸದ ಮೊಬಲಗನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮನಾಗಿ (50ಣ50 ರ ಅನುಪಾತದಲ್ಲಿ) ಭರಿಸುತ್ತದೆ. ಖಾಸಗಿ ವಿಮಾ ಸಂಸ್ಥೆಯವರಿಗೂ ವಿಮಾ ಕಂತಿನ ರಿಯಾಯಿತಿ ಅನ್ವಯವಾಗುತ್ತದೆ.ನಂತರ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ಮೂಲಕ ಖಾಸಗಿ ವಿಮೆ ಸಂಸ್ಥೆಯವರಿಗೆ ನೀಡುತ್ತದೆ.
ಈ ಯೋಜನೆಯಡಿ ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಕಟ್ಟಿ ಪಾಲ್ಗೊಳ್ಳಲು ಹತ್ತಿರುದ ಬ್ಯಾಂಕನ್ನು ಅಥವಾ ಯುನೈಟೆಡ್ ಇನ್ಸೂರೆನ್ಸ್ ಕಂ ಶಾಖೆ ಏಜೆಂಟರನ್ನು ಸಂಪರ್ಕಿಸಬಹುದೆಂದು ತಿಳಿಸಿದ ಅವರು, ರೈತರು ನಿಗದಿತ ಅರ್ಜಿಯೊಂದಿಗೆ ಪಹಣೆ, ಕಂದಾಯ ರಶೀದಿ, ಖಾತೆ ದಾಖಲೆಗಳನ್ನು ಒದಗಿಸಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೀಡ್‌ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಜೆ.ಶ್ರೀಧರ್, ಮ್ಯಾನೇಜರ್ ಸುಂದರೇಶ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.