ಮಹಿಳೆ ಮೇಲೆ ಹಲ್ಲೆ ನಡೆಸಿ, ಹಣ ಕಳವು
ಕೆಜಿಎಫ್: ಮನೆ ಮುಂದೆ ಹಸುಗಳನ್ನು ಕಟ್ಟಿ ಹಾಕುವ ವಿಚಾರಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದಲ್ಲದೆ, ಹಲ್ಲೆ ನಡೆಸಿ, ಮನೆಯಲ್ಲಿದ್ದ ನಗದು ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಹಳೇ ಮಾರಿಕುಪ್ಪ ನಿವಾಸಿ ಸುರೇಶ್ ಎಂಬುವರ ಪತ್ನಿ ಮಂಜುಳಾ ಎಂಬವರ ಮೇಲೆ ಅವರ ಪಕ್ಕದ ಮನೆ ನಿವಾಸಿಯ ಸಹೋದರರಾದ ಸತೀಶ್ಕುಮಾರ್, ಮುತ್ತುಕುಮಾರ್ ಎಂಬವರು ಹಲ್ಲೆ ನಡೆಸಿದ್ದಾರೆ.
ಘಟನೆ ವಿವಿರ: ಸುರೇಶ್ ಎಂಬವರು ಹಸುಗಳನ್ನು ಕಟ್ಟಿ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ತಮ್ಮ ಹಸುಗಳನ್ನು ಮನೆಯ ಪಕ್ಕದಲ್ಲಿರುವ ದೇವಸ್ಥಾನದ ಮುಂಭಾಗ ಕಟ್ಟುತ್ತಿದ್ದರು. ಸುರೇಶ್ ಮನೆಯ ಪಕ್ಕದ ಮನೆ ನಿವಾಸಿಗಳಿಗೆ ಮತ್ತು ಸುರೇಶ್ ಮಧ್ಯೆ ಹಸುಗಳನ್ನು ಕಟ್ಟಿ ಹಾಕುವ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಸುರೇಶ್ ಎಂದಿನಂತೆ ತಮ್ಮ ಹಸುಗಳನ್ನು ಮನೆಯ ಪಕ್ಕದಲ್ಲಿ ಕಟ್ಟಿಹಾಕಿದ್ದಾಗ ಮಕ್ಕದ ಮನೆಯ ಸತೀಶ್ಕುಮಾರ್, ಮುತ್ತುಕುಮಾರ್ ಅವರು ಬೆಳಗ್ಗೆ ಬಂಗಾರಪೇಟೆಯ ಖಾಸಗಿ ಕೆಲಸಕ್ಕೆ ಹೋಗಲು ಬರುತ್ತಿದ್ದಾಗ ಹಸು ಬಾಲದಿಂದ ಸತೀಶ್ಕುಮಾರ್ಗೆ ಹೊಡೆದಿದ್ದರಿಂದ ಬಟ್ಟೆಯಲ್ಲಿ ಹಾಳಾಗಿ ಹೋಯ್ತು ಎಂದು ಗಲಾಟೆ ಮಾಡಿ ಹೊಗಿದ್ದರು.
ಸಂಜೆ ಸಹೋದರರಿಬ್ಬರು ಮದ್ಯ ಸೇವಿಸಿ ಮನೆಯೊಳಗೆ ನುಗ್ಗಿ ಸುರೇಶ್ ಪತ್ನಿ ಮಂಜುಳಾ ಮೇಲೆ ದೊಣ್ಣೆಯಿಂದ ಮತ್ತು ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಸೆಲ್ಪ್ ಮೇಲೆ ಇಟ್ಟಿದ್ದ ಹಾಲಿನ ಬಿಲ್ ಹಣವಾದ 18000 ಕಳವು ಮಾಡಿದ್ದಾರೆ ಎಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಾ ಮಾರಿಕುಪ್ಪಂ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

