ಕೋಲಾರ

ಗಣಿ ಕಾರ್ಮಿಕರಲ್ಲಿ ಒಗ್ಗಟ್ಟಿರಲಿ: ಸಂಪಂಗಿ

Published On :

ಕೆಜಿಎಫ್: ಸುಪ್ರೀಂ ಕೋರ್ಟ್ 13 ವರ್ಷಗಳ ನಂತರ ಬಿಜಿಎಂಎಲ್ ಪುನರಾರಂಭಕ್ಕೆ ಮಹತ್ವದ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಕೆಜಿಎಫ್ನ ಎಲ್ಲಾ ಬಿಜಿಎಂಎಲ್ ಕಾರ್ಮಿಕರು, ಕಾರ್ಮಿಕ ಕುಟುಂಬಸ್ಥರು ಹಾಗೂ ಕ್ಷೇತ್ರದ ಜನರು ಸಂತಸಗೊಂಡಿದ್ದಾರೆ. ಆದರೆ, ಕೇಂದ್ರ ಸಚಿವರು ಮತ್ತು ಕೆಲ ಕಾರ್ಮಿಕ ಸಂಘದ ಮುಖಂಡರು ಬಿಜಿಎಂಎಲ್ ಚಿನ್ನದ ಗಣಿ ಪುನರಾರಂಭಕ್ಕೆ ಮುಖ್ಯ ಕಾರಣ ಎಂದು ಹೇಳಿಕೊಂಡು ಭಿತ್ತಿಪತ್ರಗಳು, ಫ್ಲೆಕ್ಸ್ಗಳು ಹಂಚಿಕೊಂಡು ರಾಜಕೀಯ ಕುತಂತ್ರ ಮಾಡುತ್ತಿರುವುದನ್ನು ಖಂಡಿಸುವುದಾಗಿ ಬಿಜಿಎಂಎಲ್ನ ಜೆಟಿಯುಎಫ್ ಅಧ್ಯಕ್ಷ, ಮಾಜಿ ಶಾಸಕ ವೈ.ಸಂಪಂಗಿ ತಿಳಿಸಿದರು. ಈ ಸಂಬಂಧ ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಉದ್ದೇಶಿಸಿ ಮಾತನಾಡಿದ ಅವರು 2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕಾರ್ಮಿಕರು ಹಾಗೂ ಕಾರ್ಮಿಕ ಒಕ್ಕೂಟದ ಸಂಘಗಳು ನಿರಂತರ ಹೋರಾಟ ಪ್ರತಿಭಟನೆಗಳನ್ನು ಮಾಡಿಕೊಂಡು ಬಂದಿದೆ. ಅದೇ ರೀತಿ ತಾವು ಹಿಂದೆ ಶಾಸಕರಾಗಿದ್ದಾಗ ಎಲ್ಲಾ ಕಾರ್ಮಿಕರ ಸಂಘಗಳನ್ನು ಒಗ್ಗೂಡಿಸಿ ಚಿನ್ನದ ಗಣಿ ಪುನರಾರಂಭಕ್ಕೆ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಜಿಎಫ್ ಬಂದ್, ದೆಹಲಿ ಚಲೋ, ರೈಲ್ರೋಕೋ ಸೇರಿದಂತೆ ಹಲವಾರು ಪ್ರತಿಭಟನೆಗಳು ಹೋರಾಟ ನಡೆಸಿವೆ. ಚಿನ್ನದ ಗಣಿ ಪುನರಾರಂಭದಿಂದ ಕೆಜಿಎಫ್ ಕ್ಷೇತ್ರದ ಉತ್ತಮ ಭವಿಷ್ಯ ಹಾಗೂ ಕಾರ್ಮಿಕರ ಕುಟುಂಬ ವರ್ಗದವರಿಗೆ ಉದ್ಯೋಗವಾಕಾಶ ಕಾರ್ಮಿಕರಿಗೆ ಬರಬೇಕಾದ ಶೇ.100 ವಿಆರ್ಎಸ್ ಹಾಗೂ ಗ್ರಾಚ್ಯೂಟಿ ಬಡ್ಡಿಹಣ ಮುಂತಾದ ಸಮಸ್ಯೆಗಳು ಇತ್ಯರ್ಥವಾಗುತ್ತದೆ ಅಲ್ಲದೆ, ಕೆಜಿಎಫ್ನಲ್ಲಿ ಉತ್ತಮ ಅಭಿವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಚಿನ್ನದ ಗಣಿ ಪುನರಾರಂಭಗೊಳ್ಳುವ ಮತ್ತು ಕಾರ್ಮಿಕ ಒಕ್ಕೂಟ ಸಂಘಗಳ ಮಧ್ಯೆ ರಾಜಕೀಯ ಕುತಂತ್ರವನ್ನು ಬದಿಗೊತ್ತಿ ಬಿಜಿಎಂಎಲ್ ಗ್ಲೋಬಲ್ ಟೆಂಡರ್ ಪ್ರಕ್ರಿಯೆಗೆ ಪಕ್ಷ ಬೇದ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಬಿಜಿಎಂಎಲ್ ಚಿನ್ನದ ಗಣಿ ಕಾರ್ಮಿಕರ ಒಕ್ಕೂಟ ಸಂಘಗಳ ಅಧ್ಯಕ್ಷ ಯಶ್ವಂತ್ರಾಜ್, ಮುಖಂಡರಾದ ಗುಣಶೇಖರ್, ಬಾಬು, ಶ್ರೀನಿವಾಸನ್, ಮೇಘನಾಥ್ ಮತ್ತಿತರರು ಹಾಜರಿದ್ದರು.
'ಸಾರ್ವಜನಿಕರ ಕೆಲಸ ವಿಳಂಬವಾಗದಿರಲಿ'
ಕೋಲಾರ: ತಾಲೂಕಿನ ಹುತ್ತೂರು ಗ್ರಾಮ ಪಂಚಾಯತಿಯಲ್ಲಿ 2013-14ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆಯನ್ನು ನೋಡಲ್ ಅಧಿಕಾರಿ ರವಿಚಂದ್ರ ಸಮ್ಮುಖದಲ್ಲಿ ನಡೆಸಲಾಯಿತು. ಹುತ್ತೂರು ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡಲು ಸಿಬ್ಬಂದಿಯೊಂದಿಗೆ ಜೊತೆಗೂಡಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು  ಅಧಿಕಾರಿ ರವಿಚಂದ್ರ ತಿಳಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.