ಚೇತರಿಕೆ ಕಂಡ ಶಿವು ಮರಳಿ ಗೂಡಿಗೆ
ಕೋಲಾರ: ಮಾನಸಿಕ ಅಸ್ವಸ್ಥವಾಗಿ ಬೀದಿಪಾಲಾಗಿದ್ದ ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿಯ ಶಿವಕುಮಾರ್ ಬೆಂಗಳೂರಿನ ಆಟೋರಾಜನ ನ್ಯೂ ಎ.ಆರ್.ಕೆ. ಮಿಷನ್ ಆಫ್ ಇಂಡಿಯಾದಲ್ಲಿ ಆರೈಕೆ ಪಡೆದ ನಂತರ ಮತ್ತೆ ತನ್ನ ಮನೆ ಸೇರಿದ್ದಾನೆ. ಆಟೋರಾಜನ ಆಶ್ರಯ ಸಿಗುವವರೆಗೆ ಅನಾಥನಾಗಿದ್ದ ಶಿವಕುಮಾರ್ ಬಜರಂಗದಳದ ಕಾರ್ಯಕರ್ತರ ಸಹಾಯದಿಂದ ಆಟೋರಾಜನ ಸಂಸ್ಥೆಗೆ ಸೇರುವಂತಾಗಿತ್ತು. 'ಕನ್ನಡಪ್ರಭ' ದಲ್ಲಿ ಅನಾಥ ಹಾಗೂ ಅಪರಿಚಿತ ವ್ಯಕ್ತಿಯು ಆಟೋರಾಜನ ಸಂಸ್ಥೆಯಲ್ಲಿರುವ ಆಶ್ರಯ ಪಡೆದಿರುವ ಬಗ್ಗೆ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ರೋಗಿಯ ಕಡೆಯವರು ಪೊಲೀಸರು ಮತ್ತು ಬಜರಂಗ ದಳದ ಮುಖಂಡರನ್ನು ಸಂಪರ್ಕಿಸಿ ನಾಪತ್ತೆಯಾಗಿ ಆಟೋರಾಜನ ಮಡಿಲು ಸೇರಿರುವ ವ್ಯಕ್ತಿ ಶಿವಕುಮಾರ್ (35)ಎಂಬುವನಾಗಿದ್ದು ಆತನನ್ನು ಮನೆಗೆ ಕರೆತರುವುದಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

