ವಿಕೃತ ಕಾಮಿ ಕೂದಲೆಳೆ ಅಂತರದಲ್ಲಿ ಪರಾರಿ
ಬೆಂಗಳೂರು: ನಮ್ಮ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ಇದೆ. ನಿಮ್ಮ ತಂದೆತಾಯಿ ಅಲ್ಲಿದ್ದಾರೆ. ನಿನ್ನನ್ನು ಕರೆತಬರಲು ಹೇಳಿದರು...
ಸುಳ್ಳು ಹೇಳಿ ಬಾಲಕಿಯನ್ನು ತನ್ನ ಬೈಕ್ನಲ್ಲಿ ಕರೆದುಕೊಂಡು ಹೋಗಿ ತನ್ನ ತೃಷೆ ತೀರಿಸಿಕೊಳ್ಳುತ್ತಿದ್ದ. ಆದರೆ, ಅವರ ಮೇಲೆ ಅತ್ಯಾಚಾರವೆಸಗುತ್ತಿರಲಿಲ್ಲ.
ಅಂತಹ ವಿಕೃತ ಕಾಮಿ ರವಿ ಕೂದಲೆಳೆ ಅಂತರದಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದು, ಆತ ಅಪಹೃತ ಬಾಲಕಿ ಸುರಕ್ಷಿತವಾಗಿ ಹಿಂತಿರುಗಿದ್ದಾಳೆ. ಜು.14ರಂದು ಮಹದೇವಪುರದಿಂದ ನಾಪತ್ತೆಯಾಗಿದ್ದಳು. 17 ವರ್ಷದ ಈ ಬಾಲಕಿ ಬಾಗೇಪಲ್ಲಿಯಲ್ಲಿ ಪತ್ತೆಯಾಗಿದ್ದು, ಮಹದೇವಪುರ ಠಾಣೆ ಪೊಲೀಸರು ಆಕೆಯನ್ನು ವಾಪಸ್ ಕರೆತಂದಿದ್ದು, ವೈದ್ಯಕೀಯ ಪರೀಕ್ಷೆ ನಂತರ ಪೋಷಕರಿಗೆ ಒಪ್ಪಸುವುದಾಗಿ ತಿಳಿಸಿದ್ದಾರೆ. ಅಪಹರಣವಾಗಿದ್ದ ಬಾಲಕಿ ಗರುಡಾಚಾರ್ ಪಾಳ್ಯದಲ್ಲಿರುವ ಸೇಂಟ್ ಆನ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ಅಪಹರಣ: ಪ್ರೌಢಶಾಲೆ, ಪಿಯುಸಿ ವ್ಯಾಸಂಗ ಮಾಡುವ ಬಾಲಕಿಯರೇ ಈತನ ಟಾರ್ಗೆಟ್. ನಿಮ್ಮ ಪೋಷಕರು ಪರಿಚಯವಿದ್ದಾರೆ. ನಿನ್ನನ್ನು ಕರೆತರುವಂತೆ ತಿಳಿಸಿದ್ದಾರೆಂದು ಬೈಕ್ನಲ್ಲಿ ಬಾಲಕಿಯರನ್ನು ಕರೆದೊಯ್ಯುತ್ತಿದ್ದ ಆರೋಪಿ ರವಿ ನಗರದ ವಿವಿಧ ಬಡಾವಣೆಗಳಲ್ಲಿ ಅವರನ್ನು ಸುತ್ತಾಡಿಸುತ್ತಿದ್ದ. ಈ ಮಧ್ಯೆ ಆಕೆಯ ಪೋಷಕರಿಗೆ ಕರೆ ಮಾಡುವ ನಾಟಕವಾಡುತ್ತಿದ್ದ. ನಿಮ್ಮ ಮಗಳು ನನ್ನ ಬಳಿಯೇ ಸುರಕ್ಷಿತವಾಗಿದ್ದಾಳೆ. ನಾಳೆ ವಾಪಸ್ ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದ. ಆದರೆ, ಆ ಕಡೆಯಿಂದ ಯಾರೂ ದೂರವಾಣಿಯಲ್ಲಿ ಇರುತ್ತಿರಲಿಲ್ಲ. ಬಾಲಕಿಯರನ್ನು ನಂಬಿಸಲು ಆತ ಆಡುತ್ತಿದ್ದ ನಾಟಕ ಇದು.
ಆ ರೀತಿ ಹೇಳಿದ ನಂತರ ಬಾಲಕಿಯರನ್ನು ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುವದು, ಅವರೊಂದಿಗೆ ಅಶ್ಲೀಲವಾಗಿ ವರ್ತಿಸುವುದು, ಅವರ ಮನವೊಲಿಸಿ ಆಭರಣ ಬಿಚ್ಚಿಸಿಕೊಳ್ಳುವುದು ಆತನ ಕಾಯಕ. ಇದುವರೆಗೆ ಬಾಣಸವಾಡಿ, ವೈಟ್ಫೀಲ್ಡ್ ಹಾಗೂ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ಬಾಲಕಿಯರನ್ನು ಅಪಹರಿಸಿ ಆಭರಣ ದೋಚಿ, ಅಶ್ಲೀಲವಾಗಿ ವರ್ತಿಸಿ ನಂತರ ಅವರನ್ನು ದಾರಿಮಧ್ಯದಲ್ಲಿಬಿಟ್ಟು ಪರಾರಿಯಾಗಿರುವ ಪ್ರಕರಣ ವರದಿಯಾಗಿವೆ. ಸದ್ಯ 3 ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತನ ವಿರುದ್ಧ ದೂರು ದಾಖಲಾಗಿವೆ.
ಅಷ್ಟೇ ಅಲ್ಲದೆ ಕಳ್ಳತನ, ಮನೆಗಳ್ಳತನದಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ನಗರದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
ಅಪಹರಣಗೊಂಡಿದ್ದ ಬಾಲಕಿಯರು ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ನೀಡದಿರುವುದು ಸಹ ತನಿಖೆ ಕಷ್ಟವಾಗುತ್ತಿದೆ ಎಂಬುದು ಪೊಲೀಸರ ಆರೋಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

