'ರೈತರು ತರಬೇತಿ ಶಿಬಿರ ಪ್ರಯೋಜನ ಪಡೆಯಲಿ'
ಕ.ಪ್ರ.ವಾರ್ತೆ , ಗೌರಿಬಿದನೂರು , ಜು.23
ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಅವರನ್ನು ಸಶಕ್ತರನ್ನಾಗಿ ಮಾಡುವುದು, ಭೂಮಿಗೆ ಬಿದ್ದ ಮಳೆ ನೀರಿನ ಸಂಗ್ರಹ, ಸಮಗ್ರ ಬೆಳೆ ನಿರ್ವಹಣೆ, ಕಡಿಮೆ ಖರ್ಚಿನಲ್ಲಿ ಆರೋಗ್ಯಕರ ಬೆಳೆ ಬೆಳೆಯುವ ಕಾರ್ಯಗಳ ಬಗ್ಗೆ ತರಬೇತಿ ಶಿಬಿರಗಳಲ್ಲಿ ರೈತರು ಭಾಗವಹಿಸಿ, ತಮ್ಮ ವೃತ್ತಿಪರ ಬೇಸಾಯದ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಂ.ಅನುರೂಪ ಹೇಳಿದರು.
ತಾಲೂಕಿನ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆರ್ಕುಂದ ಗ್ರಾಮದ ದಾನಿ ರೈತ ಎಂ.ಶ್ರೀನಿವಾಸಮೂರ್ತಿ ಕೃಷಿ ಭೂಮಿಯಲ್ಲಿ ದೀಪ ಬೆಳಗುವ ಮೂಲಕ ಭೂ ಚೇತನ ಯೋಜನೆಯ ರೈತ ಕ್ಷೇತ್ರ ಪಾಠಶಾಲೆಗೆ ಚಾಲನೆ ನೀಡಿ ಇಲಾಖೆಯ ವತಿಯಿಂದ ಗ್ರಾಮೀಣ ಭಾಗದ ಜನತೆಗೆ ಸಿಗುವ ಪ್ರಯೋಜನೆಗಳು ಮತ್ತು ವಿವಿಧ ತರಬೇತಿಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಅನುವುಗಾರ ಎಚ್.ಎನ್. ಕಿರಣಕುಮಾರ್, ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಇಂದು ಕಲುಷಿತಗೊಂಡು ವಿಷಮಯವಾಗುತ್ತಿದೆ. ಮಿತಿ ಮೀರಿ ಬಳಕೆಯಲ್ಲಿರುವ ರಾಸಾಯನಿಕ ಗೊಬ್ಬರ-ಔಷಧಿಗಳನ್ನು ತೊರೆದು ಸಾವಯವ ಕೃಷಿಗೆ ರೈತರು ಬದಲಾಗಬೇಕು ಎಂದರು.
ಎಸ್.ವೆಂಕಟೇಶ್ ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ವಿ.ಭವ್ಯಾ, ಗ್ರಾಪಂ ಸದಸ್ಯರು, ರೈತ ಅನುವುಗಾರರಾದ ಸಿ.ಎ.ಗೋವಿಂದರಾಜು, ಹಳೇಹಳ್ಳಿ ಶಿವಕುಮಾರ್, ಹರೀಶ್ ಹಾಗೂ ಗ್ರಾಮದ ರೈತ ಮುಖಂಡರಾದ ಕೃಷ್ಣಮೂರ್ತಿ, ಅಂಜಿನಪ್ಪ, ಸಿದ್ದೇಶ್ವರ್, ನಾರಾಯಣಸ್ವಾಮಿ, ಆದಿನಾರಾಯಣ, ಜಯಮ್ಮ, ನಾಗೇಶ್, ಶಂಕರೇಗೌಡ ಹಾಗೂ ಕ್ಷೇತ್ರ ಪಾಠ ಶಾಲೆಗೆ ದಾಖಲಾದ ಅನೇಕ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

