ಕೋಲಾರ

ಹೊಸ ಕಾಲೇಜಿನ ಬಾಗಿಲು, ಕಿಟಕಿ ಕಳಪೆ

Published On :

ಮಾಲೂರು: ನಮ್ಮ ದೇಶದಲ್ಲಿ ಯಾವುದೇ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಳ್ಳಬೇಕಾದರೆ ರಾಜಕೀಯ ದೃಢಸಂಕಲ್ಪ ಬೇಕಾಗಿದ್ದು, ಅವುಗಳ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಂಗಲಿ ಚಂದ್ರಶೇಖರ್ ಹೇಳಿದರು.
ರೇಲ್ವೆ ನಿಲ್ದಾಣದ ಎದುರು ನೂತನವಾಗಿ ನಿರ್ಮಿಸಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸುರಕ್ಷೆ ಕುರಿತು ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಡಿಸೆಂಬರ್‌ನಲ್ಲಿ 50 ಲಕ್ಷಗಳಲ್ಲಿ ಉದ್ಘಾಟನೆಗೊಂಡ ಈ ಕಾಲೇಜು ಕಟ್ಟಡದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುದ್ದೀಕರಣ ಸೇರಿದಂತೆ ಮೂಲ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಕಿಟಕಿಗಳು, ಬಾಗಿಲು ಸಂಪೂರ್ಣ ಕಳಪೆಯಾಗಿದ್ದು, ಗೆದ್ದಲಿಗೆ ಆಹಾರವಾಗುತ್ತಿವೆ. ಭದ್ರತೆ ಇಲ್ಲದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಎಚ್ಚರತಪ್ಪಿ ಮೆಟ್ಟಿಲು ಮೇಲೆ ನಡೆದರೆ ಅಪಾಯ ಖಂಡಿತ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದ್ದು, ಗುತ್ತಿಗೆದಾರರಿಂದ ಸಕರತ್ಮಾಕ ಸ್ಪಂದನೆ ಸಿಕ್ಕಿದೆ ಎಂದರು.
ಕಾಂಪೌಂಡ್ ಬೇಕು: ಸುತ್ತಮುತ್ತಲ ಪ್ರದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬರಬೇಕಾದರೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಜತೆಗೆ ಕಾಲೇಜು ಸುತ್ತ ಕಾಂಪೌಂಡ್ ನಿರ್ಮಿಸಬೇಕಿದೆ. ಕಾಲೇಜಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ನೀರಿಲ್ಲದೆ ಅದು ಉಪಯೋಗಕ್ಕೆ ಬಾರದಂತಾಗಿದೆ ಎಂದು ವಿವರಿಸಿದರು.
ಈಗಾಗಲೇ ಸಂತೇಹಳ್ಳಿ ಬಳಿಯ ಸಿಲ್ವ ಕ್ರೇಸ್ಟ್ ಕ್ಲಾಂತಿಂಗ್ ಕಂಪನಿಯವರು ಕಾಲೇಜಿಗೆ 6.2 ಲಕ್ಷಗಳಲ್ಲಿ ಸುಸಜ್ಜಿತ ಕಂಪ್ಯೂಟರ್ ಕೋಣೆ ನಿರ್ಮಿಸುತ್ತಿದ್ದು, ಇದೇ ರೀತಿ ಸರ್ಕಾರದ ಅನುದಾನಗಳಿಗಾಗಿ ಕಾಯದೆ ಸಾರ್ವಜನಿಕರು ಸಹಾಯ ಮಾಡಬೇಕೆಂದು ಮನವಿ ಮಾಡಿದರು.
ಪ್ರಾಧ್ಯಪಕ ಜಯರಾಮ್ ರೆಡ್ಡಿ, ಡಾ.ಮುನಿನಾರಾಯಣ್, ಆನಂದ ಮೂರ್ತಿ, ರಾಮಕೃಷ್ಣಪ್ಪ, ವಿಶ್ವೇಶ್ವರಯ್ಯ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.