11 ಗ್ರಾಮ ಲೆಕ್ಕಿಗರ ವಜಾ
ಕ.ಪ್ರ.ವಾರ್ತೆ ಕೋಲಾರ ಜು. 26
ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ನೀಡಿದ ಆರೋಪದಡಿ ಜಿಲ್ಲೆಯ 11 ಮಂದಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ.
2013ರಲ್ಲಿ ನೇಮಕವಾಗಿದ್ದ 11 ಗ್ರಾಮ ಲೆಕ್ಕಿಗರು ನೇಮಕಾತಿಗಾಗಿ ಸಂದರ್ಶನ ನಡೆದ ಸಂದರ್ಭದಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದಡಿ ತನಿಖೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಕಂದಾಯ ಇಲಾಖಾ ಘಟಕದಲ್ಲಿ ಬರುವ ಐದು ತಾಲೂಕುಗಳಲ್ಲಿ ಖಾಲಿ ಇದ್ದ 41 ಕಂದಾಯ ವೃತ್ತಗಳಿಗೆ ಹಾಗೂ ನೂತನವಾಗಿ ರಚನೆಗೊಂಡ ನಾಡ ಕಚೇರಿಗಳಿಗೆ ಕಂಪ್ಯೂಟರ್ ಜ್ಞಾನವುಳ್ಳ 12 ಗ್ರಾಮ ಲೆಕ್ಕಿಗರಿಗೆ ನೇರ ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿತ್ತು. ಸದರಿ ನೇಮಕಾತಿ ಸಮಯದಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಅಭ್ಯರ್ಥಿಗಳು ಆಯ್ಕೆ ಆಗಿರುವ ಬಗ್ಗೆ ಬಂದ ದೂರಿನ ಮೇರೆಗೆ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಅಂಕಪಟ್ಟಿಯ ನೈಜತೆ ತಿಳಿಯಲು ಪರಿಶೀಲನೆ ನಡೆಸಿದಾಗ 11 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ನೀಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸದರಿ ಗ್ರಾಮ ಲೆಕ್ಕಿಗರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಸರ್ಕಾರಕ್ಕೆ ವಂಚಿಸಿರುವ ಗ್ರಾಮಲೆಕ್ಕಿಗರ ನೇಮಕಾತಿ ವಜಾಗೊಳಿಸಿ ಕಾನೂನು ಪ್ರಕಾರ ಮೊಕದ್ದಮೆ ಹೂಡಲು ಸಂಬಂಧಪಟ್ಟ ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ವಜಾಗೊಂಡಿರುವ ವಿಎಗಳು
- ಕೆ. ಚೈತ್ರ, ನಾಡಕಚೇರಿ ಆವಣಿ, ಮುಳಬಾಗಿಲು ತಾಲೂಕು
- ಬಿ.ಎನ್. ತಿಮ್ಮಕ್ಕ, ನಾಡಕಚೇರಿ ದುಗ್ಗಸಂದ್ರ, ಮುಳಬಾಗಿಲು ತಾಲೂಕು
- ಜಿ.ವಿ. ನಾಗೇಶ್, ನಾಡಕಚೇರಿ ನೆಲವಂಕಿ, ಶ್ರೀನಿವಾಸಪುರ ತಾಲೂಕು
- ಹೆಚ್.ಆರ್. ಮೋಹನ್ ಶ್ರೀವತ್ಸ, ನಂಬಿಹಳ್ಳಿ ಕಂದಾಯ ವೃತ್ತ, ಶ್ರೀನಿವಾಸಪುರ ತಾಲೂಕು
- ಎಂ. ಸುರೇಖ, ನರಸಾಪುರ ಕಂದಾಯ ವೃತ್ತ, ಕೋಲಾರ ತಾಲೂಕು
- ಮಹಮ್ಮದ್ ಬಾಬ, ರೋಣೂರು ಕಂದಾಯ ವೃತ್ತ, ಶ್ರೀನಿವಾಸಪುರ ತಾಲೂಕು
- ಕೆ.ಎಸ್. ಪುಷ್ಪಲತ, ಹೋಳೂರು ಕಂದಾಯ ವೃತ್ತ, ಕೋಲಾರ ತಾಲೂಕು
- ಶಾರದ, ಹುಣಸನಹಳ್ಳಿ ಕಂದಾಯ ವೃತ್ತ, ಬಂಗಾರಪೇಟೆ ತಾಲೂಕು
- ಬಿದರಮ್ಮ, ದ್ಯಾಪಸಂದ್ರ ಕಂದಾಯ ವೃತ್ತ, ಮಾಲೂರು ತಾಲೂಕು
- ರಾಮಾಂಜನಮ್ಮ, ನೂಟವೆ ಕಂದಾಯ ವೃತ್ತ, ಮಾಲೂರು ತಾಲೂಕು
- ಕೆ.ಎಸ್. ಸತೀಶ್, ಆರ್. ತಿಮ್ಮಸಂದ್ರ ಕಂದಾಯ ವೃತ್ತ, ಶ್ರೀನಿವಾಸಪುರ ತಾಲೂಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

