4 ಕೆರೆಗಳಿಗೆ ಮಳೆ ನೀರು ಹರಿಸಲು ರಾಜಕಾಲುವೆಗಳ ದುರಸ್ತಿ
ಬಂಗಾರಪೇಟೆ: ಕ್ಷೇತ್ರದಲ್ಲಿ ದಿನೇದಿನೆ ಕುಸಿಯುತ್ತಿರುವ ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ನಾಲ್ಕು ಪ್ರಮುಖ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿಯಲು 1.22ಕೋಟಿ ವೆಚ್ಚದಲ್ಲಿ ರಾಜಕಾಲುವೆಗಳನ್ನು ದುರಸ್ತಿ ಮಾಡಿಸುವ ಕಾಮಗಾರಿಗೆ ಶಾಸಕ ಕೆ.ಎಂ. ನಾರಾಯಣಸ್ವಾಮಿ ಶನಿವಾರ ಚಾಲನೆ ನೀಡಿದರು.
ಪಟ್ಟಣ ಸಮೀಪವಿರುವ ಕೊಪ್ಪದಕೆರೆ, ಮಾರ್ಕಂಡೇಯ ಜಲಾಶಯ, ಮುಷ್ಚ್ರಹಳ್ಳಿ ಹಾಗೂ ಹರಟಿ ಕೆರೆಗಳಿಗೆ ಮಳೆ ಬಂದರೂ ರಾಜಕಾಲುವೆಗಳು ಒತ್ತುವರಿಯಾಗಿ ಮುಚ್ಚಿ ಹೋಗಿದ್ದು ಅವುಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯುವಂತೆ ಮಾಡುವ ಸಲುವಾಗಿ ಶಾಸಕರಾದ ಬಳಿಕ ನಾರಾಯಣಸ್ವಾಮಿ ಹೆಚ್ಚಿನ ಕಾಳಜಿ ವಹಿಸಿ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಶನಿವಾರ ಕಾಮಗಾರಿಗೆ ಚಾಲನೆ ನೀಡಿದ್ದು ಈ ಭಾಗದ ರೈತರಲ್ಲಿ ಸಂತಸ ಉಂಟು ಮಾಡಿದೆ.
ಬೂದಿಕೋಟೆಯ ಮಾರ್ಕಂಡೇಯ ಜಲಾಶಯದ ರಾಜಕಾಲುವೆ ದುರಸ್ತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ನಾರಾಯಣಸ್ವಾಮಿ ಬೂದಿಕೋಟೆ ಮಾರ್ಕಂಡೇಯ ಜಲಾಶಯ ಇತಿಹಾಸ ಪ್ರಸಿದ್ದ ತಾಣವಾಗಿದ್ದು ಇಂತಹ ಪ್ರಸಿದ್ಧವಾದ ಜಲಾಶಯ ಈಗ ನೀರಿಲ್ಲದೆ ಒಣಗಿದ್ದು ಇದಕ್ಕೆ ಕಾರಣ ರಾಜಕಾಲುವೆ ಮುಚ್ಚಿರುವುದು ಇದನ್ನು ದುರಸ್ತಿಗೊಳಿಸಿದರೆ ಮಳೆ ನೀರು ಹರಿದು ಬರಲಿದೆ ಇಂತಹ ಸ್ಥಿತಿ ಹಲವು ಕೆರೆಗಳಿದೆ ಅವುಗಳನ್ನು ತೆರವುಗೊಳಿಸಿ ದುರಸ್ತಿ ಮಾಡಿಸುವೆ ಎಂದರಲ್ಲದೆ ಈ ಜಲಾಶಯ ಪ್ರವಾಸಿಗರ ತಾಣ ಸಹವಾಗಿತ್ತು,ಈಗ ಪ್ರವಾಸಿಗರಿಲ್ಲದೆ ಸೊರಗಿದ್ದು ಮತ್ತೆ ಗತವೈಭವ ಮರುಕಳಿಸಲು ಎರಡು ಕೋಟಿ ವೆಚ್ಚದಲ್ಲಿ ಜಲಾಶಯ ಸುತ್ತಲೂ ಅಭಿವೃದ್ಧಿಗೊಳಿಸಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಚಿಂತಿಸಲಾಗಿದೆ ಎಂದು ನುಡಿದರು.
ಇದಲ್ಲದೆ ವರ್ತೂರು ಕೆರೆ ನೀರು ವ್ಯರ್ಥವಾಗಿ ತಮಿಳುನಾಡು ಸೇರುತ್ತಿದ್ದು ಆ ನೀರನ್ನು ಕ್ಷೇತ್ರದ ಪ್ರಮುಖ ಕೆರೆಗಳಿಗೆ ಹರಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ತಮ್ಮ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ಯಾವುದೇ ದಕ್ಕೆ ಬಾರದಂತೆ ನಡೆದುಕೊಳ್ಳುವುದಾಗಿ ಹೇಳಿ,ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ರಾಜ್ಯದ ನಾನಾ ಕಡೆ ರೈತರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಕೈಬಿಡುವಂತೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿರುವುದನ್ನು ನೋಡಿದರೆ ತಿಳಿಯುತ್ತದೆ ಕಾಂಗ್ರೆಸ್ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷರಾದ ಮಂಜುನಾಥ್, ಪಾರ್ಥಸಾರಥಿ, ಮುಖಂಡರಾದ ರಾಮಪ್ಪ, ತಾಪಂ ಮಾಜಿ ಸದಸ್ಯ ಪಿಚ್ಚಹಳ್ಳಿ ಗೋವಿಂದರಾಜು, ಕೃಷ್ಣಪ್ಪಶೆಟ್ಟಿ, ಹೊಸರಾಯಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

