ಆ.3ರಿಂದ ನಗರದಲ್ಲಿ ಮಂತ್ರಾಲಯ ಶ್ರೀ ಚಾತುರ್ಮಾಸ್ಯ ಉತ್ಸವ
ಬೆಂಗಳೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಮಠಾಧೀಶರಾಗಿದ್ದ ಶ್ರೀ ಸುಶಮೀಂದ್ರ ತೀರ್ಥರ ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥರು ಈ ಬಾರಿ ನಗರದ ಶ್ರೀನಗರ ಬಡಾವಣೆ ರಾಯರ ಮಠದಲ್ಲಿ ಚಾತುರ್ಮಾಸ್ಯ ಸಂಕಲ್ಪ ಕೈಗೊಂಡಿದ್ದಾರೆ. ಇದರ ಅಂಗವಾಗಿ ಆಗಸ್ಟ್ 3ರಂದು ಸಂಜೆ ನಗರದ ಎನ್.ಆರ್. ಕಾಲೋನಿಯಿಂದ ಶ್ರೀನಗರ ರಾಘವೇಂದ್ರ ಸ್ವಾಮಿಗಳ ಮಠದ ಸುಶಮೀಂದ್ರ ಸಭಾ ಮಂಟಪದವರೆಗೆ ವಿಶೇಷ ಶೋಭಾ ಯಾತ್ರೆ ಹಮ್ಮಿ ಕೊಳ್ಳಲಾಗಿದೆ. ಜಯತೀರ್ಥ ವಿದ್ಯಾ ಪೀಠದ ಪ್ರಾಂಶುಪಾಲರಾದ ಪಂಡಿತ್ ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಶೋಭಾ ಯಾತ್ರೆಗೆ ಚಾಲನೆ ನೀಡುವರು. ಸುವಿದ್ಯೇಂದ್ರ ತೀರ್ಥ ಶ್ರೀ ಪಾದಂಗಳವರು ಜ್ಯೋತಿ ಪ್ರಜ್ವಲನೆ ಮುಖಾಂತರ 'ತಂತ್ರ ದೀಪಿಕಾ ವೇದಿಕೆ' ಹಾಗೂ ಚಾತುರ್ಮಾಸ್ಯ ಕಾರ್ಯಕ್ರಮ ಉದ್ಘಾಟಿಸುವರು. ತಿರುಪತಿ ತಿರುಮಲ ದೇವಸ್ಥಾನ ಸನ್ನಿಧಿ ಸೂಪರಿಂಟೆಂಡೆಂಟ್ ಪಂಡಿತ್ ಡಿ. ಗುರುರಾಜಾಚಾರ್ಯ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜಯರಾಜ್ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಮ್ಹಣ್ಯಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಂತ್ರ ದೀಪಿಕಾ ವೇದಿಕೆಯ ನಾರಾಯಣಮೂರ್ತಿ ತಿಳಿಸಿದ್ದಾರೆ.
ಜಾನುವಾರು ವಿಮೆ ಸೌಲಭ್ಯ ಪ್ರಾರಂಭ
ಮಾಗಡಿ: ತಾಲೂಕಿನಾದ್ಯಂತ ಇರುವ ರೈತರ ಜಾನುವಾರುಗಳಿಗೆ ವಿಮಾ ಭದ್ರತೆ ಕಾರ್ಯಕ್ರಮ ಪ್ರಾರಂಭಗೊಂಡಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ತಿಳಿಸಿದರು. ರೈತರು ತಮ್ಮ ನಾಟಿ, ಮಿಶ್ರತಳಿ ಹಸುಗಳು, ಎಮ್ಮೆಗಳಿಗೆ ಬೆಲೆಗೆ ಅನುಗುಣವಾಗಿ ಶೇ. 50 ರಿಯಾಯಿತಿ ದರದಲ್ಲಿ ವಿಮೆ ಸೌಲಭ್ಯ ಆರಂಭಿಸಲಾಗಿದ್ದು, ಪ್ರತಿ ರಾಸುಗೆ ಉದಾಹರಣೆಗೆ 10 ಸಾವಿರಕ್ಕೆ ರು. 203ನಂತೆ ವಿಮೆ ಕಟ್ಟಿಸಿಕೊಳ್ಳಲಾಗುತ್ತಿದೆ. ರೈತರು ವಿಮೆ ಹಣ ಪಾವತಿಸಿ ವಿಮೆ ಸೌಲತ್ತು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. 1, 2 ಮತ್ತು 3 ವರ್ಷಗಳಿಗೂ ವಿಮೆ ಮಾಡಿಸಬಹುದಾಗಿರುತ್ತದೆ ಎಂದರು.
ಇಂದು ಧಾರ್ಮಿಕ ಚಿಂತನೆ ಸಂಕಿರಣ
ವಿಜಯಪುರ: ಇಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದಾದ ಸರೋವರ ಗಣಪತಿ ದೇವಾಲಯದಲ್ಲಿ ಗುರು ಪೌರ್ಣಮಿ ಪ್ರಯುಕ್ತ ಪತಂಜಲಿ ಯೋಗಾಸನ ಸಮಿತಿ ವತಿಯಿಂದ ಧಾರ್ಮಿಕ ಚಿಂತನೆಗಳ ಅಗತ್ಯತೆ ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವು ಸೋಮವಾರ ನಡೆಯಲಿದ್ದು ಕೇಂದ್ರ ಬಿಂದುವಾಗಿ ಸೂಲಿಬೆಲೆ ಚಕ್ರವರ್ತಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಸಮಿತಿಯ ಸಂಚಾಲಕಿ ಭಾರತಿ ಪ್ರಭುದೇವ್ ತಿಳಿಸಿದ್ದಾರೆ.
ಕಾರು ಡಿಕ್ಕಿ; ಬಾಲಕ ಸಾವು
ಬೆಂಗಳೂರು: ಕಾರು ಡಿಕ್ಕಿ ಹೊಡೆದು ಒಂಭತ್ತು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಇಸ್ರೊ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವಸಂತಪುರ ನಿವಾಸಿ ಕೀರ್ತಿ ಮೃತ ಬಾಲಕ. ತನ್ನ ಸ್ನೇಹಿತನ ಜತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಇಸ್ರೊ ಬಡಾವಣೆ 3ನೇ ಬಿ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮನೆಕೆಲಸ ಮಾಡುತ್ತಿದ್ದ ತನ್ನ ತಾಯಿ ಭಾಗ್ಯ ಅವರನ್ನು ಮಾತನಾಡಿಸಿಕೊಂಡು ಕೀರ್ತಿ ಹಾಗೂ ಆತನ ಸ್ನೇಹಿತ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ಚಾಲಕ ಶಿವಪ್ಪ(62) ಎಂಬುವವರನ್ನು ಕುಮಾರಸ್ವಾಮಿ ಬಡಾವಣೆ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಪ್ಪ ಅವರ ಮನೆಮುಂದೆಯೇ ಅಪಘಾತ ಸಂಭವಿಸಿದ್ದು, ಕೆಲಸ ನಿಮಿತ್ತ ಹೊರಗೆ ಹೋಗಿದ್ದ ಶಿವಪ್ಪ ತಮ್ಮ ಕಾರನ್ನು ಶೆಡ್‌ನಲ್ಲಿ ಹಾಕಲು ಮುಂದಾಗುತ್ತಿದ್ದಾಗ ಘಟನೆ ಸಂಭವಿಸಿದೆ. ಘಟನೆಯಿಂದ ಬಂಧಿತ ಶಿವಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಕೀರ್ತಿ ತಂದೆ ಆನಂದ್ ಆಟೋ ಚಾಲಕರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

