ನುಸುಳುಕೋರರಿಗೆ ಗುರುತಿನ ಚೀಟಿ: ಮುತಾಲಿಕ್ ಖಂಡನೆ
ಕ.ಪ್ರ. ವಾರ್ತೆ ಕೋಲಾರ ಜು.28
ಭಾರತಕ್ಕೆ ನುಸುಳುತ್ತಿರುವ ಬಾಂಗ್ಲಾ ದೇಶಿಗರಿಗೆ ಕೇಂದ್ರ ಸರ್ಕಾರ ಗುರುತಿನ ಚೀಟಿ ನೀಡುತ್ತಿವುದಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ನಗರದ ಚೊಕ್ಕ ಕನ್ವೆಷನ್ ಹಾಲ್‌ನಲ್ಲಿ ಶ್ರೀರಾಮಸೇನೆಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿರುವ ನಮ್ಮ ದೇಶದ ಕೆಲ ಲಜ್ಜೆಗೆಟ್ಟ ರಾಜಕಾರಣಿಗಳು ಭಾರತಕ್ಕೆ ಕಂಟಕರಾಗಿರುವ ಬಾಂಗ್ಲಾ ದೇಶದ ನುಸುಳುಕೋರರಿಗೆ ಮತದಾನಕ್ಕೆ ಸಂಬಂಧಿಸಿದ ಕಾರ್ಡು, ಆಧಾರ್ ಕಾರ್ಡು ಹಾಗೂ ಪಡಿತರ ಚೀಟಿಯನ್ನು ಕೊಡಿಸುವ ಮೂಲಕ ದೇಶದ ಐಕ್ಯತೆ, ಸಮಗ್ರತೆಗೆ ದಕ್ಕೆಯನ್ನುಂಟು ಮಾಡುತ್ತಿದ್ದಾರೆಂದು ಕಿಡಿಕಾರಿದರು. ನುಸುಳುಕೋರರನ್ನು ದೇಶದಿಂದ ಹೊರಹಾಕಲು ಶ್ರೀರಾಮಸೇನೆ ಬಾಂಗ್ಲಾ ದೇಶಿ ಹಠಾವೋ, ದೇಶ ಬಚಾವೋ ಆಂದೋಲನ ಆರಂಭಿಸಲಿದೆ ಎಂದ ಅವರು, ಭಾರತವನ್ನು ಪ್ರೀತಿಸುವ, ಗೌವರವಿಸುವ ಪ್ರತಿಯೊಬ್ಬರು ಆಂದೋಲನಕ್ಕೆ ಸಹಕಾರ ನೀಡುವಂತೆ ಕರೆ ನೀಡಿದರು.
ನಮ್ಮ ದೇಶದ ಕೋಟ್ಯಂತರ ಬಡವನಿಗೆ ಇನ್ನೂ ಪಡಿತರ ಚೀಟಿ, ಆಧಾರ್‌ಕಾರ್ಡ್ ಸಿಕ್ಕಿಲ್ಲ. ಆದರೆ ದೇಶದ್ರೋಹಿ ಬಾಂಗ್ಲಾ ನುಸುಳುಕೋರರಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲೂ ಒಂದು ಲಕ್ಷ ನುಸುಳುಕೋರರಿದ್ದಾರೆ, ಮೂರು ಸಾವಿರ ಯುವತಿಯರು ಬಂದಿದ್ದಾರೆ, ನಮ್ಮ ಯುವಕರನ್ನು ಸೆಳೆದು ಅವರಿಗೆ ಏಡ್ಸ್‌ನಂತಹ ಮಾರಕ ರೋಗ ಅಂಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದರು.
ಗೋರಕ್ಷಣೆಗೆ ಗೋಸೇನೆ: ಶ್ರೀರಾಮಸೇನೆ ವತಿಯಿಂದ ಹಿಂದೂಗಳ ಪವಿತ್ರ ಗೋ ರಕ್ಷಣೆಗೆ ಗೋಸೇನೆ ರಚಿಸಲಾಗುತ್ತಿದೆ, ಪ್ರತಿ ಜಿಲ್ಲಾ ಕೇಂದ್ರದಲ್ಲೂ ಸಮರ್ಥ 100 ಕಾರ್ಯಕರ್ತರ ಪಡೆ ಇದಕ್ಕೆ ಸಿದ್ಧವಾಗಲಿದೆ ಎಂದು ತಿಳಿಸಿದರು. ಈ ಸೇನೆ ಭಾರತೀಯ ಕಾನೂನಿನಡಿಯೇ ಕೆಲಸ ಮಾಡುತ್ತದೆ, ನಮಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ, ಅದನ್ನು ಮತ್ತೊಬ್ಬರಿಂದ ಕಲಿಯಬೇಕಾಗಿಲ್ಲ ಎಂದರು.ರಾಮಮಂದಿರ ನಿರ್ಮಾಣವೂ ನಮ್ಮ ಗುರಿಯಾಗಿದೆ, ಅಂತಹ ಅಭಿಯಾನವನ್ನು ನಾವು ಆರಂಭಿಸುತ್ತೇವೆ ಎಂದು ತಿಳಿಸಿದರು.
ಡಾ. ಶಿವಣ್ಣ, ಭೀಮರಾವ್, ಶ್ರೀರಾಮಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ದಕ್ಷಿಣ ವಲಯ ಪ್ರಾಂತ ಅಧ್ಯಕ್ಷ ಮಹೇಶ್ ಕೊಪ್ಪ, ದಕ್ಷಿಣ ಪ್ರಾಂತ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಮೋದ್ ಮತ್ತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

