ಕೋಲಾರ

ವ್ಯಕ್ತಿತ್ವ ರೂಪುಗೂಳ್ಳುವಂಥ ಚಿತ್ರಕಲೆ ರಚಿಸಿ

Published On :

ಚಿಕ್ಕಬಳ್ಳಾಪುರ: ಸಾಮಾನ್ಯ ಶಿಕ್ಷಣವನ್ನು ಬೋಧನೆ ಮಾಡುವವರಿಗಿಂತ ಹೆಚ್ಚು ಶಕ್ತಿ ಕಲಾವಿದನಿಗೆ ಇರುತ್ತದೆ. ಸೃಜನಶೀಲತೆಯಿಂದ ಲೆಕ್ಕವನ್ನು ಬಿಡಿಸಬಹುದು. ಆದರೆ ಸೃಜನಶೀಲತೆಯಿಂದ ಕಲ್ಪನೆ ಬಿಡಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಕೋಡಿರಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ. ಸರ್.ಎಂ.ವಿ. ಚಿತ್ರಕಲಾ ಸಂಘ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿತ್ರ ಕಲಾ ಕಣತಿಗಳ ಪ್ರದರ್ಶನ ಕಾರ್ಯಕ್ರಮವನ್ನು ಭಾರತದಲ್ಲಿ ಸಾಕ್ಷರತೆ ಬಿಂಬಿಸುವ ಚಿತ್ರ ಕಲೆ ಬಿಡಿಸುವ ಮೂಲಕ ಶಿಕ್ಷಣವೇ ಶಕ್ತಿ ಎಂಬ ವಾಕ್ಯವನ್ನು ಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತರರಿಗಿಂತಲೂ ಹೆಚ್ಚುವರಿ ಸಹನೆ, ಶಕ್ತಿ, ಸಾಮರ್ಥ್ಯ, ಸೃಜನ ಶೀಲತೆ, ಪರಿಶ್ರಮ, ಉತ್ತಮವಾದ ಕಲ್ಪನೆಗಳನ್ನು ಚಿತ್ರ ಕಲಾವಿದ ಹೊಂದಿರುತ್ತಾನೆ.  ಚಿತ್ರ ಕಲಾವಿದರು ರಾಷ್ಟ್ರೀಯ ವ್ಯಕ್ತಿತ್ವ ರೂಪುಗೂಳ್ಳುವಂತಹ ಚಿತ್ರ ಕಲೆಗಳನ್ನು ಮಕ್ಕಳಿಗೆ ಹಾಗೂ ಜನರಿಗೆ ಚಿತ್ರ ಕಲೆಗಳ ಮೂಲಕ ತಲುಪಿಸುವಂತಾಗಬೇಕು. ಚಿತ್ರ ಕಲಾವಿದರು ಉತ್ತಮವಾದ ಕಲೆಯನ್ನು ಸಮಾಜದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೋರಿಸುವ ಚಿಂತನೆಯನ್ನು ಮಾಡಬೇಕು.
 ಚಿತ್ರಕಲೆಗಳಿಗೆ ಪರೀಕ್ಷೆ ಇಲ್ಲದ ಕಾರಣ ಮಕ್ಕಳ ಸಮುದಾಯಕ್ಕೆ ಆಸಕ್ತಿ ಹೆಚ್ಚಿಗೆ ಆಗುತ್ತಿಲ್ಲ. ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮಖ್ಯೋಪಾಧ್ಯಾಯರು ಮುಂದೆ ಬರಬೇಕು. ಕಲ್ಪನೆ ಕನಸುಗಳಿಲ್ಲದೆ ಕಲಾ ಕಣತಿಗಳನ್ನು ಬರೆಯಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಶಿಬಿರಗಳನ್ನು ಮಾಡಿ ಮಕ್ಕಳಲ್ಲಿ ವಿಶೇಷವಾದ ಕಲೆಗಾರಿಕೆಯನ್ನು ಗುರುತಿಸಿ ಮಕ್ಕಳ ಕೌಶಲ್ಯ ಬೆಳೆಸಲು ಶ್ರಮಿಸಬೇಕು ಎಂದರು.
ನಂದಿ ದೇವಾಲಯದ ಚಿತ್ರ, ನಂದಿ ಬೆಟ್ಟದ ಚಿತ್ರಗಳು, ಕಾಡಿನಲ್ಲಿ ಗೋವುಗಳನ್ನು ಮಧ್ಯೆ ಶ್ರೀ ಕೃಷ್ಣ, ನದಿ ಹರಿಯುತ್ತಿರುವುದು ಸೇರಿದಂತೆ ಹಲವು ಕಲಾ ಕೃತಿಗಳು ನೋಡುಗರ ಕಣ್ಮನ ಸೆಳೆಯಿತು.
ಚಿತ್ರಕಲೆ ನಿರ್ದೇಶಕ ಮಹಾಂತೇಶ್ ಕಂಠಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಗೋಪಾಲಗೌಡ ಕಲ್ಪಮಂಜಲಿ. ಸರ್.ಎಂ.ವಿ. ಚಿತ್ರಕಲಾ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್. ನಿವೃತ್ತ ಶಿಕ್ಷಕರಾದ ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು. ಚಿತ್ರಕಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗರಾಜ್ ಸ್ವಾಗತಿಸಿ, ಶಿಕ್ಷಕ ಮಾರುತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.