ದಟ್ಟಣೆ ತಪ್ಪಿಸಿ, ಸುಗಮ ಸಂಚಾರ ಕಲ್ಪಿಸಿ
ಚಿಂತಾಮಣಿ: ರಾಮಕುಂಟೆ ಪ್ರದೇಶದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ಟ್ರಕ್ ಟರ್ಮಿನಲ್ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಯೋಜನೆ ಹಾಕಿಕೊಂಡಿರುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ.ವಿಶಾಲ್ ಪಟ್ಟಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸುಗಮ ಸಂಚಾರಕ್ಕಾಗಿ ಚರ್ಚಿಸಿದರು.
ಪಟ್ಟಣದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ನಿಯಂತ್ರಿಸಲು ಪಟ್ಟಣದ ಖಾಸಗಿ ಬಸ್ ನಿಲ್ದಾಣವನ್ನು ಸರ್ಕಾರಿ ರೇಷ್ಮೆಗೂಡಿನ ಮಾರುಕ್ಟಟೆ ಮುಂಭಾಗದ ರಾಮಕುಂಟೆ ಪ್ರದೇಶದಲ್ಲಿ ಖಾಸಗಿ ಬಸ್ನಿಲ್ದಾಣ ಹಾಗೂ ಟ್ರಕ್ ಟರ್ಮಿನಲ್ ವ್ಯವಸ್ಥೆಯನ್ನು ಕಲ್ಪಿಸಲು ಮಂಗಳವಾರ ಇಲ್ಲಿನ ಯೋಗಿನಾರಾಯಣ ವೃತ್ತ, ಆಜಾದ್ ಚೌಕ, ಚೇಳೂರು ರಸ್ತೆ ಮುಂತಾದ ಪ್ರದೇಶಗಳಲ್ಲಿ ಸಂಚರಿಸಿ ನಂತರ ಜಿಲ್ಲಾ ರಕ್ಷಣಾಧಿಕಾರಿಗಳಾದ ಶಿವಪ್ರಸಾದ್, ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್, ನಗರಸಭೆ ಆಯುಕ್ತ ಚನ್ನೇಗೌಡ ಸೇರಿದಂತೆ ಇನ್ನೂ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಾರ್ವಜನಿಕರ ಹಿತಾಸಕ್ತಿಯಿಂದ ಸುಗಮವಾಗಿ ಸಂಚರಿಸಲು ಪಟ್ಟಣದಲ್ಲಿ ಸಂಚಾರಿ ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗೆ ದೂರು: ದಿನ ನಿತ್ಯ ಯೋಗಿನಾರಾಯಣ ವೃತ್ತದ ಬಳಿ ಹಲವು ಖಾಸಗಿ ಬಸ್ಸಿನ ಪರ-ವಿರೋಧ ಗುಂಪುಗಳು ಬಸ್ಸಿನ ವೇಳಾ ವಿಷಯವಾಗಿ ಜಟಾಪಟಿಯಿಂದ ಜನಸಾಮಾನ್ಯರಿಗೆ ಸುಗಮವಾಗಿ ಸಂಚರಿಸಲು ಅಸಾಧ್ಯವಾಗಿ ಈ ಪ್ರದೇಶದಲ್ಲಿ ಮಹಿಳೆಯರು, ವಿದ್ಯಾರ್ಥಿ, ವೃದ್ಧರು ಹಾಗೂ ಪ್ರಯಾಣಿಕರಿಗೆ ಕಿರಿ ಕಿರಿಯಾಗಿ ಬೇಸತ್ತಿದ್ದರು. ಇದರಿಂದ ಸಾಕಷ್ಟು ಬಾರಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದ ಕಾರಣ, ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಮಂಗಳವಾರ ಖುದ್ದು ಭೇಟಿ ನೀಡಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಆದೇಶಿಸಿದರು.
ಅಕ್ರಮ ಖಾಸಗಿ ಬಸ್ಸುಗಳಿಗೆ ಬ್ರೇಕ್: ಪಟ್ಟಣದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಖಾಸಗಿ ಬಸ್ಸುಗಳ ಬೀದಿ ರಂಪಾಟದಿಂದ ಜನ ಸಾಮಾನ್ಯರು ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಮಾತನಾಡಿ, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮಾಂತರ ಪ್ರದೇಶಗಳ ಮುಖಾಂತರ ಸಂಚರಿಸಬೇಕಾದ ಹಲವು ಖಾಸಗಿ ಬಸ್ಸುಗಳು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಹಾಗೂ ಖಾಸಗಿ ಬಸ್ಸುಗಳ ಹಾವಳಿ ತಪ್ಪಿಸಲು ಯೋಗಿನಾರಾಯಣ ವೃತ್ತದಲ್ಲಿ ಬಸ್ಸುಗಳನ್ನು ನಿಲ್ಲಿಸದಂತೆ ತಡೆಯಬೇಕು ಸ್ಥಳೀಯ ಪೊಲೀಸರಿಗೆ ಸೂಚಿಸಿದರು.
ಪರವಾನಗಿ ಪಡೆದ ಬಸ್ಸುಗಳಿಗೆ ಮಾತ್ರ ಅವಕಾಶ: ಆರ್ಟಿಒ ಅಧಿಕಾರಿಗಳಿಂದ ಪರವಾನಗಿ ಪಡೆದ ಖಾಸಗಿ ಬಸ್ಸುಗಳು ಮಾತ್ರ ಮಾರ್ಗದ ಮುಖಾಂತರ ಸಂಚರಿಸಲು ಹಾಗೂ ಅಕ್ರಮವಾಗಿ ಸಂಚರಿಸುವ ವಾಹನಗಳ ಮೇಲೆ ಸ್ಥಳೀಯ ಪೊಲೀಸರು ಬಸ್ಸುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿ, ಕಾನೂನು ಪಾಲನೆ ಮಾಡಲು ಸೂಚಿಸಿದರು. ಇದರಿಂದ ಕಳೆದ ಹಲವು ದಿನಗಳಿಂದ ಖಾಸಗಿ ಬಸ್ಸುಗಳ ಬೀದಿ ರಂಪಾಟಕ್ಕೆ ಕೊನೆಗೂ ಎತ್ತೆಚ್ಚುಕೊಂಡ ಜಿಲ್ಲಾಡಳಿತ ಬಸ್ಸುಗಳಿಗೆ ಬ್ರೇಕ್ ಹಾಕಲು ಮುಂದಾಗಿರುವುದು ನಾಗರಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

