ಕೋಲಾರ

ದಾಳಿಗೆ ಬಲಿಯಾದ ವ್ಯಕ್ತಿ ಗುರುತು ಪತ್ತೆ

Published On :

ಕ.ಪ್ರ.ವಾರ್ತೆ   ಮಾಲೂರು   ಜೂ. 23
ತಾಲೂಕಿನ ಅಬ್ಬೇನಹಳ್ಳಿ ಪ್ಲಾಟೇಷನ್‌ನಲ್ಲಿ ಶನಿವಾರ ಸಂಜೆ  ಆನೆಗಳ ದಾಳಿಗೆ ಸಿಕ್ಕಿ ಸಾವನ್ನಪ್ಪಿದ ವ್ಯಕ್ತಿಯನ್ನು ಮಲ್ಲಿಪನಹಳ್ಳಿ ಮಾಜಿ ಚೇರ್ಮನ್ ಚಂದ್ರಪ್ಪ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಕತ್ತಲಾದ ನಂತರ ಪ್ಲಾಟೇಷನ್‌ನಲ್ಲಿ ಶವ ಪತ್ತೆಯಾಗಿದ್ದು, ಮುಖ ಸಂಪೂರ್ಣ ಜಜ್ಜಿದ ಕಾರಣ ಪತ್ತೆ ಹಚ್ಚಲು ಆಗಿರಲಿಲ್ಲ. ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ನೆರವಿನಿಂದ ಮೃತ ವ್ಯಕ್ತಿಯ ಗುರುತು ಹಚ್ಚಲಾಯಿತು. ಭಾನುವಾರ ಬೆಳಗಿನ ಜಾವ ಪಕ್ಕದ ಹೊಸಕೋಟೆ ತಾಲೂಕಿನ ಜಡಗೇನಹಳ್ಳಿ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಭಾನುವಾರ ಸಂಜೆ 7 ಗಂಟೆವರೆಗೂ ತಾಲೂಕಿನ ಗಡಿಭಾಗದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದೆ. ಆನೆಗಳ ಹಿಂಡು ನಡೆಸಿರುವ ದಾಳಿಗಳಿಂದ ಭಯ ಭೀತರಾಗಿರುವ ತಾಲೂಕಿನ ಗಡಿಭಾಗದ ಜನತೆ ಆನೆಗಳು ಇನ್ನೂ ಗಡಿಭಾಗದಲ್ಲಿರುವುದರಿಂದ ಭಾನುವಾರವೂ ತಮ್ಮ ಭಯದಿಂದ ಹೊರಬಂದಿಲ್ಲ. ಸಾವಿಗೀಡಾಗಿದ್ದ ಕಾಟೇರಿ, ಮಡಿವಾಳ, ಮಲ್ಲಿಪನಹಳ್ಳಿಯಲ್ಲಿ ಭಯದ ವಾತಾವರಣ ಕಂಡು ಬರುತ್ತಿತ್ತು. ಪೊಲೀಸರು ಭಾನುವಾರವೂ ತಾಲೂಕಿನ ಕಸಬಾ ಹೋಬಳಿಗಳಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಅನಾವಶ್ಯಕವಾಗಿ ಕಾಡಿನ ಕಡೆ ತಿರುಗದಂತೆ, ದನ ಕರು-ಕುರಿಗಳನ್ನು ಮೇಯಿಸಲು ಹೋಗದಂತೆ ಮೈಕ್ ಮೂಲಕ ಮನವಿ ಮಾಡುತ್ತಿದ್ದರು.
ಶಾಸಕರಿಂದ ಸಾಂತ್ವನ: ಶಾಸಕ ಮಂಜುನಾಥ್ ಗೌಡ ಆನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದ ಕಾಟೇರಿಯ ಮಲ್ಲಯ್ಯ, ಮಡಿವಾಳದ ರಾಮಕೃಷ್ಣಪ್ಪ ಹಾಗೂ ಮಲ್ಲಿಪನಹಳ್ಳಿಯ ಚಂದ್ರಪ್ಪನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಲಾಖೆಯಿಂದ ಈಗಾಗಲೇ ತಲಾ 5 ಲಕ್ಷ ರು. ನೀಡಲಾಗುತ್ತಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ರವರು ಸಹ ತಮ್ಮ ನಿಧಿಯಿಂದ ತಲಾ ಹತ್ತು ಸಾವಿರ ರು .ನೀಡುವುದಾಗಿ ಘೋಷಿಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.