ಪಿಎಫ್ಐನಿಂದ ಸ್ಕೂಲ್ ಚಲೋ ಕಾರ್ಯಕ್ರಮ
ಕೋಲಾರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ರಾಷ್ಟ್ರ ವ್ಯಾಪ್ತಿ ಸ್ಕೂಲ್ ಚಲೋ ಎಂಬ ಕಾರ್ಯಕ್ರಮವನ್ನು ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಭಾಗವಾಗಿ ಕರ್ನಾಟಕದಲ್ಲೂ ಸ್ಕೂಲ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಫೂಲಲ್ಷಾ ಮೊಹಲ್ಲಾ, ನೂರ್ ನಗರ, ಷಹೀಂಷಾ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ಶಾಲಾ ಮಕ್ಕಳಿಗೆ ಪ್ರವೇಶ ಶುಲ್ಕ, ಬ್ಯಾಗ್, ನೋಟ್ಬುಕ್, ಲೇಖನಿ ಸಾಮಗ್ರಿಗಳು ಸೇರಿದಂತೆ ಇತರೇ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು.
ಸಂಘಟನೆ ಮುಖಂಡ ಶಾಮೀರ್ ಪಾಷ ಮಾತನಾಡುತ್ತಾ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೇ ಹೊಟೇಲ್, ಮ್ಯೆಕಾನಿಕ್ ಶಾಪ್, ಗ್ಯಾರೇಜ್ಗಳಲ್ಲಿ ಕೆಲಸಕ್ಕೆ ಕಳುಹಿಸಿ ಅವರ ಭವಿಷ್ಯವನ್ನು ಹಾಳು ಮಾಡುವುದು ಬೇಡಿ, ಮಕ್ಕಳನ್ನು ಕೆಲಸಕ್ಕೆ ದೂಡಿದಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇದಕ್ಕೆ ಬದಲು ಶಾಲೆಗಳಿಗೆ ಕಳುಹಿಸಿದಲ್ಲಿ ವಿದ್ಯೆ ಕಲಿತು ಮುಂದೆ ದೊಡ್ಡ ಉದ್ಯೋಗಕ್ಕೆ ಸೇರಿ ಎಲ್ಲರಿಗೂ ಪ್ರಯೋಜನಕ್ಕೆ ಬರುತ್ತಾರೆಂದು ತಿಳಿಸಿದರು.
ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಪೋಷಕರಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮದಿಂದ ವಿದ್ಯಾಭ್ಯಾಸದ ಮುಖಾಂತರ ಜಾಗೃತಿಯನ್ನು ಮೂಡುವಂತೆ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಪಿ.ಎಫ್.ಐ. ಪ್ರಧಾನ ಕಾರ್ಯದರ್ಶಿ ಷಾ ಉಸ್ಜಮಾ, ಕಾರ್ಯದರ್ಶಿ ಸುಹೇಲ್, ಮಸೀದಿಯ ಅಧ್ಯಕ್ಷ ಹಾಗೂ ಎಸ್.ಡಿ.ಪಿ.ಐ ಶಾಮೀರ್ಪಾಷ,ಖದೀರ್ ಅಹಮದ್, ರಹಮತ್ತಲ್ಲಾ ಖಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

