ಕೋಲಾರ

ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

Published On :

ಕೋಲಾರ: ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಮ್ಮ ಮನೆ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಬಡ ಗ್ರಾಮೀಣ ವಿದ್ಯಾರ್ಥಿಗಳು ಜೂ.26 ರೊಳಗೆ ಅರ್ಜಿಗಳನ್ನು ಒಕ್ಕಲಿಗರ ವಿದ್ಯಾರ್ಥಿ ನಿಲಯ ಸಂಕೀರ್ಣ ಕೋಟೆ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ ಕೋಲಾರ ಇಲ್ಲಿಗೆ ತಲುಪಿಸುವಂತೆ  ಸಂಘದ ಚೇರ್‌ಮನ್ ವಿ. ಕೃಷ್ಣಾರೆಡ್ಡಿ  ಪ್ರಕಟಣೆಯಲ್ಲಿ ಕೋರಿದ್ದಾರೆ. ಜಿಲ್ಲೆಯ ಒಕ್ಕಲಿಗರ ಕೋರಿಕೆಯ ಮೇರೆಗೆ 2013-2014 ನೇ ಸಾಲಿಗೂ ಸಹ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯ  ಒದಗಿಸಲಾಗಿದ್ದು, ಈ ಸೌಲಭ್ಯಗಳನ್ನು ಬಡ ಗ್ರಾಮೀಣ ಎಸ್.ಎಸ್.ಎಲ್.ಸಿ. ಮೇಲ್ಪಟ್ಟವರಾಗಿದ್ದು ಹೆಚ್ಚು ಅಂಕಗಳನ್ನು ಪಡೆದವರನ್ನು ಪರಿಗಣಿಸಲಾಗುವುದು, ಹಿಂದಿನ 2 ವರ್ಷಗಳಿಂದ ಉಚಿತವಾಗಿ ನಮ್ಮ ಮನೆ ಹಾಸ್ಟೆಲ್‌ನಲ್ಲಿದ್ದವರು ಸಹ ಮೂಲ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ಮೊ.ನಂ.99723833333,94480455740,9448209340  ಸಂಪರ್ಕಿಸಲು ತಿಳಿಸಿದ್ದಾರೆ.
ಬಿಇಡಿ ಕೋರ್ಸಿಗೆ ಅರ್ಜಿ ಆಹ್ವಾನ
ಕೋಲಾರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕಲಿಕಾ ಕೇಂದ್ರ ಗೋಲ್ಡ್‌ಫೀಲ್ಡ್ ಶಿಕ್ಷಣ ಸಂಸ್ಥೆ 2014-15ನೇ ಸಾಲಿಗೆ ಬಿ.ಇ.ಡಿ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸಂಸ್ಥೆಯಲ್ಲಿಯೇ ಅರ್ಜಿಗಳನ್ನು ಪಡೆದು ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 8 ರಂದು ಕಡೆ ದಿನವಾಗಿದೆ. ಪ್ರವೇಶ ಪರೀಕ್ಷೆಯ  ದಿನಾಂಕ ಸೆ.8 ಆಗಿರುತ್ತದೆ.  ಅರ್ಜಿ ಶುಲ್ಕ 1 ಸಾವಿರ ರು. ನಿಗದಿ ಮಾಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಡಾ.ಕೆ. ಪೂರ್ಣಿಮಾ, ದೂ.ನಂ 08152-254324755 ಸಂಪರ್ಕಿಸಲು ಬಂಗಾರಪೇಟೆಯ ಗೋಲ್ಡ್‌ಫೀಲ್ಡ್ ಶಿಕ್ಷಣ ವಿಶ್ವವಿದ್ಯಾಲಯ ಕೋರಿದೆ.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಮಾಲೂರು: ಸ್ಥಳೀಯ ಕನಕದಾಸ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವು 2013-14 ನೇ ಸಾಲಿನ ಹಿಂದುಳಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯಕ್ಕೆ ಸೇರಲು ಅರ್ಜಿಗಳನ್ನು ಆಹ್ವಾನಿಸಿದೆ. ಕೋಲಾರ ರಸ್ತೆಯಲ್ಲಿರುವ ಕನಕದಾಸ ಕುರುಬ ಮತ್ತು ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯದ ಪ್ರವೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಜುಲೈ 5 ರಂದು ಕೊನೆಯ ದಿನವಾಗಿದ್ದು, ನಂತರ  ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ನಿಲಯದ ಕಾರ್ಯದರ್ಶಿರವರಿಗೆ ತಲುಪಿಸಬೇಕಾಗಿದ್ದು, ಅರ್ಜಿಗಳು ಪಟ್ಟಣದ ಬಸ್ ನಿಲ್ದಾಣ ಬಳಿಯ ಅಂಜನಿ ಮೆಡಿಕಲ್ಸ್ ಹಾಗೂ  ಹಳೇ ಅಂಚೆ ಕಚೇರಿ ರಸ್ತೆಯ ಸಂಪೂರ್ಣ ಬ್ಯಾಂಗಲ್ಸ್ ಸ್ಟೋರ್ಸ್‌ನಲ್ಲಿ ಸಿಗಲಿದೆ ಎಂದು ಕಾರ್ಯದರ್ಶಿ ಸಿ.ವೆಂಕಟಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.