ಹಣ ಕದ್ದು ದರೋಡೆ ನಾಟಕವಾಡಿದ ಕ್ಯಾಷಿಯರ್ಗೆ ಕೈಕೋಳ
ಕ.ಪ್ರ.ವಾರ್ತೆ ಬಂಗಾರಪೇಟೆ ಜೂ. 24
ತಾನೇ ಹಣ ಕದ್ದು ದರೋಡೆ ನಡೆದಿರುವಂತೆ ಪೊಲೀಸರಿಗೆ ದೂರು ನೀಡಿ ಶಾಪ್ ಮಾಲೀಕರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಆಸಾಮಿಯೊಬ್ಬನನ್ನು ಕಾಮಸಮುದ್ರ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಪಾತರಾಮಗುಳ್ಳ ಗ್ರಾಮದ ಗೋವಿಂದಸ್ವಾಮಿಯೇ ಬಂಧಿತ. ಭಾನುವಾರ ಮುಂಜಾನೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಕನಮನಹಳ್ಳಿ ಬಳಿ ಇರುವ ಜೈ ಮಾರುತಿ ವೈನ್ಶಾಪ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿರುವ ಗೋವಿಂದಸ್ವಾಮಿ ಹಣ ಲಪಟಾಯಿಸುವ ಸಲುವಾಗಿ ಮೂವರು ಅಪರಿಚಿತರು ಬಂದು ಕಣ್ಣಿಗೆ ಖಾರದ ಪುಡಿ ಎರಚಿ 2 ಲಕ್ಷ ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆಂದು ತಾನೇ ಖುದ್ದಾಗಿ ಪೊಲೀಸರಿಗೆ ದೂರು ನೀಡಿದ್ದ. ಆರೋಪಿ ನೀಡಿರುವ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಆರೋಪಿ ಗೋವಿಂದಸ್ವಾಮಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ನಡೆದಿಲ್ಲ. ಹಣ ಲಪಟಾಯಿಸುವ ಸಲುವಾಗಿ ಈ ನಾಟಕವಾಡಿದೆ ಎಂದು ಹೇಳಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣ ನಡೆದ ಕೆಲ ಗಂಟೆಗಳಲ್ಲೆ ಕಾಮಸಮುದ್ರ ಪೊಲೀಸರು ಪ್ರಕರಣಕ್ಕೆ ಮಂಗಳ ಹಾಡಿರುವುದು ಸಾರ್ವಜನಿಕರು ಹಾಗೂ ಕೆಜಿಎಫ್ ರಕ್ಷಣಾಧಿಕಾರಿ ಡಾ. ರೋಹಿಣಿ ಶ್ಲಾಘಿಸಿದ್ದಾರೆ.
ದ್ವಿಚಕ್ರ ವಾಹನ ಕಳವು
ಕೋಲಾರ: ತಾಲೂಕಿನ ದೊಡ್ಡಹಸಾಳ ಗ್ರಾಮದ ನಿವಾಸಿ ರಾಮಲಿಂಗಾರೆಡ್ಡಿ ಎಂಬುವರು ಗ್ರಾಮದ ರೇಲ್ವೆ ಗೇಟ್ಬಳಿ ನಿಲ್ಲಿಸಿದ್ದ ಸುಮಾರು 30 ಸಾವಿರ ರು ಬೆಲೆ ಬಾಳುವ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಮೊನ್ನೆ ಕಳವು ಮಾಡಿದ್ದು ಈ ಸಂಬಂಧ ವಾಹನ ಮಾಲೀಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಟಾಟಾ ಸುಮೋ ಕಳವು
ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಜಾವಿದ್ ಎಂಬುವರಿಗೆ ಸೇರುವ ಟಾಟಾ ಸುಮೋ ಕಾರನ್ನು ಕಳ್ಳರು ರಾತ್ರೋ ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

