ನರ್ನಕಲ್ಲು ಕರವೇ ಗ್ರಾಮ ಶಾಖೆ ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಕನ್ನಡ ನಾಡು-ನುಡಿಗಾಗಿ ತಾಲೂಕು ಮಟ್ಟದಲ್ಲಿ ಕರವೇ ಸಂಘಟನೆಯನ್ನು ಬಲಪಡಿಸಲು ಗ್ರಾಮ ಮಟ್ಟದಿಂದ ತಾಲೂಕು ಮಟ್ಟದವರೆಗೂ ಹಂತ ಹಂತವಾಗಿ ಸಂಘಟನೆಯನ್ನು ಬೆಳೆಸಲಾಗುತ್ತಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಎನ್. ಅಂಬರೀಷ್ ಹೇಳಿದರು.
ಕಿಶೋರ ವಿದ್ಯಾಭವನ ಮುಂಭಾಗದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ನರ್ನಕಲ್ಲು ಗ್ರಾಮಶಾಖೆ ಪದಾಧಿಕಾರಿಗಳ ಆಯ್ಕೆ ವೇಳೆ ಅವರು ಮಾತನಾಡುತ್ತಿದ್ದರು.
ಗಡಿಭಾಗದಲ್ಲಿರುವ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕನ್ನಡಿಗನೇ ಸಾರ್ವಭೌಮ ಎಂಬ ಸಿದ್ಧಾಂತವನ್ನು ಅನ್ಯ ಭಾಷಿಗರು ಕನ್ನಡ ಭಾಷಾ ವ್ಯಾಮೋಹವನ್ನು ಬೆಳಿಸಿಕೊಂಡು ಕನ್ನಡ ಮಾತನಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ನರ್ನಕಲ್ಲು ಗ್ರಾಮಶಾಖೆ ಪದಾಧಿಕಾರಿಗಳಾಗಿ ಎಂ. ಕೃಷ್ಣಪ್ಪ (ಗೌರವಾಧ್ಯಕ್ಷ), ಎನ್.ಎಲ್. ಮಾದೇಶ್ (ಅಧ್ಯಕ್ಷ ), ಎನ್.ಎಂ. ವೆಂಕಟಸ್ವಾಮಿ (ಉಪಾಧ್ಯಕ್ಷ), ಎನ್.ಎಲ್. ಚಂದ್ರಶೇಖರ್ (ಪ್ರಧಾನ ಕಾರ್ಯದರ್ಶಿ), ಮುನಿರಾಜು (ಕಾರ್ಯದರ್ಶಿ), ಶ್ರೀಧರ್(ಸಂಘಟನಾ ಕಾರ್ಯದರ್ಶಿ), ಎನ್.ಕೆ. ಅಂಬರೀಷ್ (ಖಜಾಂಚಿ), ಎನ್.ಸಿ. ರಮೇಶ್ (ಸಂಚಾಲಕ) ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ವೆಂಕಟಪ್ಪ ನಿಧನಕ್ಕೆ ಗಣ್ಯರ ಶೋಕ
ಕೋಲಾರ: ಮಾಜಿ ಸ್ಪೀಕರ್ ಎಂ.ವಿ. ವೆಂಕಟಪ್ಪ ಅವರ ನಿಧನಕ್ಕೆ ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಸಂತಾಪ ಸೂಚಿಸಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ನಿಷ್ಠೆ, ಪ್ರಾಮಾಣಿಕತೆಯನ್ನಿಟ್ಟುಕೊಂಡು ಪ್ರಗತಿಗೆ ಶ್ರಮಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ. ನಮ್ಮ ತಂದೆ ಸಿ.ಬೈರೇಗೌಡರ ಕಾಲದ ರಾಜಕಾರಣಿಯಾಗಿದ್ದ ಎಂ.ವಿ. ವೆಂಕಟಪ್ಪ ಅವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಜನರ ಹಿತಕ್ಕಾಗಿ ಹೋರಾಟ ಮಾಡಿದವರು. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ಭಗವಂತ ನೀಡಲೆಂದು ಕೋರಿದ್ದಾರೆ.
ವರ್ತೂರ್ ಪ್ರಕಾಶ್ ಕಂಬನಿ: ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನಸಭೆಯ ಮಾಜಿ ಅಧ್ಯಕ್ಷ ಎಂ.ವಿ. ವೆಂಕಟಪ್ಪ ಅವರ ನಿಧನಕ್ಕೆ ಮಾಜಿ ಸಚಿವ, ಹಾಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ಕಂಬನಿ ಮಿಡಿದಿದ್ದಾರೆ. ಶುದ್ಧ ಹಸ್ತದ ರಾಜಕಾರಣಿಯಾಗಿದ್ದ ವೆಂಕಟಪ್ಪ ಅವರ ನಿಧನದಿಂದ ಜಿಲ್ಲೆ ಮತ್ತು ರಾಜ್ಯಕ್ಕೆ ನಷ್ಟವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

