ಜಿಲ್ಲೆಯಲ್ಲಿ 23,316 ಪರೀಕ್ಷಾರ್ಥಿಗಳು

Updated on: 

ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.29
ಜಿಲ್ಲೆಯ 87 ಕೇಂದ್ರಗಳಲ್ಲಿ ಏಪ್ರಿಲ್ 1 ರಿಂದ ಆರಂಭಗೊಳ್ಳುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 23316 ಮಂದಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ವಿ.ಪದ್ಮನಾಭ್ ತಿಳಿಸಿದ್ದಾರೆ.
ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಖಾಸಗಿ ಅಭ್ಯರ್ರ್ಥಿಗಳು, ಪುನರಾವರ್ತಿತ ಹಾಗೂ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಈ ಬಾರಿ ಜಿಲ್ಲೆಯ 272 ಶಾಲೆಗಳಿಂದ 10512 ಬಾಲಕರು, 10465 ಬಾಲಕಿಯರು ಸೇರಿದಂತೆ 20977 ಮಂದಿ ಹೊಸ ಅಭ್ಯರ್ಥಿಗಳು ಹಾಗೂ 1274 ಪುನರಾವರ್ತಿತ ಪರೀಕ್ಷೆಗೆ ಕೂರಲಿದ್ದಾರೆ. ಉಳಿದಂತೆ 726 ಮಂದಿ ಖಾಸಗಿ ಹೊಸ ಅಭ್ಯರ್ಥಿಗಳು, ಖಾಸಗಿ ಪುನರಾವರ್ತಿತ 329 ಮಂದಿ ಪರೀಕ್ಷೆ ಬರೆಯಲಿದ್ದು, ಇಲಾಖೆ ಸಕಲ ಸಿದ್ಧತೆ ನಡೆಸಿದೆ ಎಂದು ವಿವರಿಸಿದರು.
ಜಿಲ್ಲೆಯ 87 ಪರೀಕ್ಷಾ ಕೇಂದ್ರಗಳ ಪೈಕಿ 50 ನಗರ ಪ್ರದೇಶಗಳಲ್ಲೂ ಮತ್ತು 37 ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲೂ ಇವೆ.
ಶೈಕ್ಷಣಿಕ ವಲಯವಾರು ಕೋಲಾರ ತಾಲೂಕಿನಲ್ಲಿ 3066 ಬಾಲಕರು, 2797 ಬಾಲಕಿಯರು, ಬಂಗಾರಪೇಟೆ ತಾಲೂಕು-2025 ಬಾಲಕರು,1658 ಬಾಲಕಿಯರು, ಕೆಜಿಎಫ್ ವಲಯ-1986 ಬಾಲಕರು, 1583 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಮಾಲೂರು- 1835 ಬಾಲಕರು, 1914 ಬಾಲಕಿಯರು, ಮುಳಬಾಗಿಲು- 1693 ಬಾಲಕರು, 1713 ಬಾಲಕಿಯರು, ಶ್ರೀನಿವಾಸಪುರ- 1729 ಬಾಲಕರು ಹಾಗೂ 1518 ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ 6 ಶಿಕ್ಷಣ ವಲಯಗಳ ವ್ಯಾಪ್ತಿಯಲ್ಲಿನ 87 ಪರೀಕ್ಷಾ ಕೇಂದ್ರಗಳ ಪೈಕಿ 7 ಕೇಂದ್ರಗಳನ್ನು ಸೂಕ್ಷ್ಮವೆಂದು ಪರಿಗಣಿಸಲಾಗಿದೆ, ಇದರಲ್ಲಿ ಖಾಸಗಿ ಅಭ್ಯರ್ಥಿಗಳು ಕೂರುವ ಎಲ್ಲಾ ಐದು ಕೇಂದ್ರಗಳು ಹಾಗೂ ಮುಳಬಾಗಿಲು ತಾಲೂಕಿನ 2 ಕೇಂದ್ರಗಳು ಸೇರಿವೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಜಿಲ್ಲಾ ದಂಡಾಧಿಕಾರಿಗಳು ನಿಷೇಧಾಜ್ಞೆ ಘೋಷಿಸಲಿದ್ದು, ಪೊಲೀಸ್ ರಕ್ಷಣೆಯಲ್ಲಿ ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು. ಪರೀಕ್ಷೆಗಳು ಸುಗಮವಾಗಿ ನಡೆಯಲು ಇಲಾಖೆಯ ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ, ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರಪ್ರಸಾದ್, ವಿಷಯ ಪರೀಕ್ಷಕರಾದ ಕೆ. ಶ್ರೀನಿವಾಸಗೌಡ, ವೆಂಕಟಸ್ವಾಮಿ, ಸಿ.ಆರ್. ಅಶೋಕ್, ಜನಾರ್ದನನಾಯ್ಡು ಮತ್ತಿತರರು ಶ್ರಮಿಸುತ್ತಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com