ಆಟೋ ಚಾಲಕರ ಸಾಮಾಜಿಕ ಭದ್ರತೆ ನೆರವಿಗೆ ಬದ್ಧ
ಬಂಗಾರಪೇಟೆ: ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದಲ್ಲಿ ಹಾಗೂ ಸಮಾಜದ ಸೇವೆಗೆ ತಮ್ಮದೆ ಆದ ಕೊಡುಗೆ ನೀಡುತ್ತಿರುವ ಆಟೋ ಚಾಲಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ತಾವು ಪ್ರಾಮಾಣಿಕ ಹೋರಾಟ ಮಾಡುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.
ತ್ರಿಚಕ್ರ ವಾಹನ ಚಾಲಕರ ಮತ್ತು ಮಾಲೀಕರ ಸಂಘ,ಆಟೋ ರಿಕ್ಷಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಆಟೋ ಚಾಲಕರು ಶ್ರಮಜೀವಿಗಳಾಗಿದ್ದು ಇವರಿಗೆ ಯಾವುದೇ ಜೀವ ಭದ್ರತೆ, ಸಾಮಾಜಿಕ ಭದ್ರತೆ ಮತ್ತಿತರ ಭದ್ರತೆಗಳಿಲ್ಲದೆ ನಾಡು ನುಡಿ ಭಾಷೆ ಅಭಿವೃದ್ದಿಗೆ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ ಇತಂಹ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು 1.25ಲಕ್ಷ ಹಣ ಸಬ್ಸಿಡಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು ಮುಂದೆ ಕ್ಷೇತ್ರದಲ್ಲಿರುವ ಕಟ್ಟಡ, ಕೂಲಿ ಮತ್ತು ಅಸಂಘಟಿತ ಕಾರ್ಮಿಕರಿಗೆ ನೆರವಾಗುವಂತೆ ಹಾಗೂ ನೆತ್ತಿ ಮೇಲೆ ಸೂರಿಲ್ಲದವರಿಗೆ ಮನೆ ನಿರ್ಮಾಣಕ್ಕೆ ಒಟ್ಟು 500 ಉಚಿತ ನಿವೇಶ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಆಟೋ ಚಾಲಕರು ಮೊದಲು ಪರವಾನಿಗೆ ಇಲ್ಲದೆ ಆಟೋಗಳನ್ನು ರಸ್ತೆಗಳಿಗೆ ಇಳಿಸಬಾರದು ಪ್ರತಿಯೊಬ್ಬರು ಅಧಿಕೃತವಾಗಿ ಕಾನೂನು ಪ್ರಕಾರ ಆಟೋಗಳನ್ನು ಚಲಾಯಿಸಬೇಕು ಪರವಾನಿಗೆ ಇಲ್ಲದ ಚಾಲಕರಿಗೆ ತಾವು ಉಚಿತವಾಗಿ ದೊರಕಿಸಿಕೊಡುವುದಾಗಿ ಹೇಳಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಶಾದಿ ಭಾಗ್ಯ ಬರೀ ಮುಸ್ಲಿಂ ಜನರಿಗೆ ಮಾತ್ರವಲ್ಲ ಹಿಂದುಳಿದ ವರ್ಗಗಳ ಎಲ್ಲಾ ಜನರೂ ಯೋಜನೆಯ ಲಾಭವನ್ನು ಪಡೆಯಬಹುದು ಕೆಲವರು ಇದನ್ನು ರಾಜಕೀಯ ಲಾಭಕ್ಕೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಅದಕ್ಕೆ ಕಿವಿ ಕೊಡಬಾರದು ಎಂದರು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿದರು. ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಆಟೋ ಚಾಲಕರ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು.ಇದಕ್ಕೂ ಮುನ್ನ ಪೊಲೀಸ್ ಠಾಣೆ ಪಕ್ಕದಲ್ಲಿ ಯೋಗಿನಾರಾಯಣ ತಾತಯ್ಯ ಹೆಸರಿನ ಆಟೋ ನಿಲ್ದಾಣವನ್ನು ಶಾಸಕರು ಉದ್ಘಾಟಿಸಿದರು.ಅಂಬೇಡ್ಕರ್ಪ್ರ್ತಿಮೆಯಿಂದ ಬಸಸ್ನಿಲ್ದಾಣದವರೂ ಆಟೋಗಳ ಮೇಲೆ ಕನ್ನಡ ಭಾವುಟಗಳನ್ನು ಹಾಕಿಕೊಂಡು ಭವ್ಯ ಮೆರವಣಿಗೆ ಮಾಡಿದರು.
ಚಾಲಕರ ಸಂಘದ ತಾ-ಅಧ್ಯಕ್ಷ ಆರ್.ಸುಭ್ರಮಣಿ,ಸುರೇಶ್,ಪಿಎಸ್ಐ ಯೋಗಾನಂದ ಸೋನಾರ್ಪುರಸಭೆ ಸದಸ್ಯರಾದ ವೆಂಕಟೇಶಗೌಡ,ಆರೋಕ್ಯ ರಾಜನ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

