ಮಾನವೀಯತೆ ಮೆರೆದ ಕೆಎಸ್ಸಾರ್ಟಿಸಿ ಸಿಬ್ಬಂದಿ
ಕನ್ನಡಪ್ರಭ ವಾರ್ತ್ಣೆ ಕೋಲಾರ ನ.5
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಮನುಷ್ಯತ್ವ ಇರುವುದಿಲ್ಲ, ಪ್ರಯಾಣಿಕರೊಂದಿಗೆ ಅಹಿತಕರವಾಗಿ ವರ್ತಿಸುತ್ತಾರೆಂಬ ದೂರುಗಳು ಸಾಮಾನ್ಯ. ಆದರೆ, ಗೌರಿಬಿದನೂರು ಡಿಪೋಗೆ ಸೇರಿದ ಸರ್ಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ತಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಎದೆ ನೋವಿನಿಂದ ಬಳಲುತ್ತಿದ್ದಾಗ, ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಮೆರೆದು ಆಸ್ಪತ್ರೆಗೆ ಸೇರಿಸಿ ರೋಗಿಯ ಪ್ರಾಣ ಕಾಪಾಡಿದ ಅಪರೂಪದ ಘಟನೆ ವರದಿಯಾಗಿದೆ.
ಮಂಗಳವಾರ ಶಿರಾದಿಂದ ಕೋಲಾರದ ಕಡೆಗೆ ಬರುತ್ತಿದ್ದ ಬಸ್ಸಿನಲ್ಲಿ 60 ವರ್ಷ ವಯಸ್ಸಿನ ವೃದ್ಧರೊಬ್ಬರು ಬಸ್ಸಿಗೆ ಹತ್ತಿಕೊಂಡು ಕೋಲಾರಕ್ಕೆ ಟಿಕೆಟ್ ಪಡೆದುಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹಠಾತ್ತನೆ ಎದೆನೋವಿನಿಂದ ಪ್ರಯಾಣಿಕ ನರಳಲಾಂಭಿಸಿದಾಗ ಇದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ಬಸ್ಸಿನ ನಿರ್ವಾಹಕ ಜಿಲಾನ್ ಮತ್ತು ಚಾಲರ ಪೀರ್ಸಾಬ್ಗೆ ವಿಷಯ ತಿಳಿಸಿದಾಗ, ಸಮಯಪ್ರಜ್ಞೆ ಹಾಗೂ ಮಾನವೀಯತೆ ಮೆರೆದು ವ್ಯಕ್ತಿಯನ್ನು ಮಾರ್ಗ ಮಧ್ಯೆ ಸಿಗುವ ವೇಮಗಲ್ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಸೇರಿದರು.
ಇದಕ್ಕೂ ಮುನ್ನ 108 ಆ್ಯಂಬುಲೆನ್ಸ್ಗೂ ಮಾಹಿತಿ ರವಾನಿಸಲಾಯಿತು. ಆಸ್ಪತ್ರೆಗೆ ಸಾಗುವ ತಿರುವಿನಲ್ಲಿ ಬೆಸ್ಕಾಂನವರು ಮರ ಕಡಿಯುತ್ತಿದ್ದುದನ್ನು ಗಮನಿಸಿದ ನಿರ್ವಾಹಕ ಜಿಲಾನ್ ತಕ್ಷಣವೇ ಬಸ್ಸಿಂದ ಇಳಿದು ಕೆಲಸಗಾರರಿಗೆ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿ ಕೊಟ್ಟು ಬಸ್ ಬೇಗನೇ ಸಾಗಲು ಅನುವು ಮಾಡಿ ಕೊಟ್ಟಿದ್ದು ಗಮನ ಸೆಳೆಯಿತು. ಎದೆನೋವಿನಿಂದ ನರಳುತ್ತಿದ್ದ ವ್ಯಕ್ತಿ ನಡೆಯುವ ಸ್ಥಿತಿಯಲ್ಲೂ ಇಲ್ಲದಿರುವುದನ್ನು ಮನಗಂಡ ಸಹಪ್ರಯಾಣಿಕರಲ್ಲಿ ಕೆಲವರು ಅವರನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸಿಗುವಂತೆ ಮಾಡಿದರು ಎಂದು ಇದೇ ಬಸ್ಸಿನಲ್ಲಿ ಕೋಲಾರಕ್ಕೆ ಬರುತ್ತಿದ್ದ ಲೇಖಕ ಹಾಗೂ ಹಿರಿಯ ಪತ್ರಕರ್ತ ವಿಶ್ವ ಕುಂದಾಪುರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

