ರೈಲು ಯೋಜನೆ ಕೈಬಿಡಿ: ಡಿಸಿಗೆ ಮನವಿ
ಕ.ಪ್ರ.ವಾರ್ತೆ ಕೋಲಾರ ನ.5
ಕೇಂದ್ರ ಸರ್ಕಾರವು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕೋಲಾರ-ವೈಟ್ಫೀಲ್ಡ್ ನೂತನ ರೇಲ್ವೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ರೈತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೋಲಾರ, ಮಾಲೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉದ್ದೇಶಿತ ಯೋಜನೆಯಿಂದ ರೈತರಿಗೆ ನಷ್ಟವಾಗುವುದರಿಂದ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕೋಲಾರದಿಂದ ವೈಟ್ಫೀಲ್ಡ್ ಕೇವಲ 40 ಕಿಮೀ ದೂರದಲ್ಲಿದ್ದು ಬೆಂಗಳೂರಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಉತ್ತಮವಾಗಿರುವುದರಿಂದ ರೈಲು ಓಡಾಟದ ಅವಶ್ಯಕತೆ ಇಲ್ಲ. ಜೊತೆಗೆ ಈ ಯೋಜನೆಗೆ ರೈತರು ಭೂಮಿ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲವೆಂದು ತಿಳಿಸಿದರು.
ಕೋಲಾರ ಬಂಗಾರಪೇಟೆ ಮಾರ್ಗವಾಗಿ ವೈಟ್ಫೀಲ್ಡ್ಗೆ ಸೇರಲು 56 ಕಿ.ಮೀ ಆಗಲಿದೆ ಅದೇ ಈಗ ಹೊಸದಾಗಿ ನಿರ್ಮಿಸುತ್ತಿರುವ ಕೋಲಾರ ವೈಟ್ಫೀಲ್ಡ್ ರೈಲ್ವೆ ಮಾರ್ಗಕ್ಕೆ 48 ಕಿ.ಮೀ. ಅಂದರೆ ಕೇವಲ 8 ಕಿ.ಮೀ ನಷ್ಟು ಮಾತ್ರ ಕಡಿಮೆಯಾಗಲಿದ್ದು, ಸುಮಾರು 368 ಕೋಟಿಯಷ್ಟು ವೆಚ್ಚ ಮಾಡಿ ಮಾಡುವಂತಹ ಪ್ರಮೇಯವಾದರೂ ಏನೋ ಎಂದು ರೈತರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಈ ಯೋಜನೆಯಿಂದ ರೈತರ ತಮ್ಮ ಹೊಲಗಳಿಗೆ ಹೋಗಬೇಕಾದರೆ ಸುಮಾರು 5 ಕಿ.ಮೀ ಸುತ್ತಾಡಿಕೊಂಡು ಹೋಗಬೇಕಾಗುತ್ತದೆ ಮತ್ತು ಬೆಳಗಳನ್ನು ಸಾಗಣಿಕೆ ಮಾಡಲು ತುಂಬಾ ತೊಂದರೆಯಾಗುತ್ತದೆ ಎಂದು ದೂರಿದರು.
ಬಂಗಾರಪೇಟೆಯಿಂದ ಕೋಲಾರಕ್ಕೆ ರೈಲಿನ ವ್ಯವಸ್ಥೆಯಿದ್ದು, ಈಗ ಹಾಲಿ ಇರುವ ಮಾರ್ಗದಲ್ಲಿಯೇ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಕಲ್ಪಿಸಿ ಅಭಿವೃದ್ಧಿ ಪಡಿಸಲಿ ಅದು ಬಿಟ್ಟು 8 ಕಿ.ಮೀ. ಉಳಿತಾಯಕ್ಕೆ ಸುಮಾರು ಕೋಟ್ಯಂತರ ರು.ಗಳನ್ನು ವೆಚ್ಚ ಮಾಡುವುದರ ಜೊತೆಗೆ ರೈತರ ಜಮೀನುಗಳನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ಪ್ರತಿಭಟನೆಯ ನೇತೃತ್ವವನ್ನು ರೈತ ಮುಖಂಡರಾದ ವನರಾಶಪ್ಪ, ವಕ್ಕಲೇರಿ ಸಿ.ಎಂ. ವೆಂಕಟೇಶಪ್ಪ, ಕೆಂಚೇಗೌಡ, ರಾಮಕೃಷ್ಣಗೌಡ, ಅರಾಭಿಕೊತ್ತನೂರು ನಾಗಭೂಷಣಗೌಡ, ಶಿವಕುಮಾರ್, ಕೆ.ಎನ್. ಕೃಷ್ಣಪ್ಪ, ಅಪ್ಪಸಂದ್ರ ಮುನಿಯಪ್ಪ, ಆಂಜಿನಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

