14ಕ್ಕೆ ಆದಿಮದಲ್ಲಿ ದಲಿತ ಸಂಘಟನೆಗಳ ಸಮಾವೇಶ
ಕೋಲಾರ: ಚದುರಿ ಹೋಗಿರುವ ಜಿಲ್ಲೆಯ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಮತ್ತೆ ಜನಪರ ಹೋರಾಟ ರೂಪಿಸಲು ನ.14 ರಂದು ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿನ ಆದಿಮ ಕೇಂದ್ರದಲ್ಲಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಹಾರೋಹಳ್ಳಿ ವಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ದಲಿತ ಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ದಲಿತ ಪರ ಶಕ್ತಿಯನ್ನು ಒಂದೆಡೆ ಸೇರಿಸುವ ಸಹಮತಕ್ಕೆ ಎಲ್ಲರೂ ಬಂದಿದ್ದು, ಇದೇ 14 ರಂದು ನಡೆಸಲು ಉದ್ದೇಶಿಸಿರುವ ಸಮಾವೇಶದಲ್ಲಿ ಮುಂದಿನ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ ಎಂದರು.
ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ದಲಿತ ಸಮುದಾಯ ಶೈಕ್ಷಿಣಿಕವಾಗಿ ವಂಚನೆಗೊಳಗಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅಸ್ಪೃಶ್ಯತೆ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಜಾತಿಗಳಿಗೆ ತಲುಪಬೇಕಾದ ಆನೇಕ ಯೋಜನೆಗಳು ಬಳಸಿಕೊಳ್ಳದೇ ಕೈತಪ್ಪಿ ಹೋಗಿ ಮರಳಿ ಸರ್ಕಾರಕ್ಕೆ ವಾಪಸ್ಸಾಗುತ್ತಿದೆ ಎಂದು ವಿಷಾಧಿಸಿದರು.
ಟಿ. ವಿಜಯಕುಮಾರ್ ಮಾತನಾಡಿ, ದಲಿತರ ಕೆಲ ಲೋಪದೋಷಗಳನ್ನು ಸರಿಪಡಿಸಿಕೊಂಡು ದಲಿತಪರವಾದ ಸಿದ್ಧಾಂತಗಳ ಅಡಿಯಲ್ಲಿ ಒಕ್ಕೂಟವನ್ನು ಬಲಪಡಿ ಎಲ್ಲರಿಗೂ ಸಮನಾದ ನಾಯಕತ್ವ ಹೊಣೆಗಾರಿಕೆಯನ್ನು ನೀಡಿ ದಲಿತ ಮತ್ತು ಸಮಾಜಕ್ಕೆ ಪೂರಕವಾದ ಹೋರಾಟಗಳನ್ನು ರೂಪಿಸುವುದಾಗಿ ಅವರು ತಿಳಿಸಿದರು.
ಕೃಷ್ಣಪ್ಪ ರವರು, ಎಂ. ಮುನಿರಾಜು, ದಲಿತ ನಾರಾಯಣಸ್ವಾಮಿ, ಬೆಳಗಾನಹಳ್ಳಿ ಆನಂದ್ ಮಾತನಾಡಿದರು. ಎ. ಕೃಷ್ಣಪ್ಪ, ರಾಮಣ್ಣ, ಡಿಪಿಎಸ್ ಮುನಿರಾಜು, ವೆಂಕಟೇಶ್, ಹನುಮಂತು, ಗದ್ದೆಕಣ್ಣೂರು ಮುನಿನಾರಾಯಣಪ್ಪ, ಉಮಾಶಂಕರ್, ಹೊನ್ನೇನಹಳ್ಳಿ ಕೃಷ್ಮಪ್ಪ, ಸಾಹುಕಾರ್ ಶಂಕರಪ್ಪ, ಆರ್. ನಾರಾಯಣಪ್ಪ, ಹೂಹಳ್ಳಿ ಪ್ರಕಾಶ್, ವೆಂಕಟೇಶ್, ಮುನಿಆಂಜನಪ್ಪ, ಶ್ರೀರಂಗ, ಗಾಂಧಿನಗರ ಮುನಿಯಪ್ಪ, ಎಸ್. ಕೃಷ್ಮಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

