ಕೋಲಾರ

ಅನೈತಿಕ ಸಂಬಂಧದಿಂದ ಪತಿ ಕೊಲೆ; ಪ್ರಿಯಕರನ ಬಂಧನ

Published On :

ಚಿಂತಾಮಣಿ: ಅನೈತಿಕ ಸಂಬಂಧ ಹೊಂದಿದ ಶಿಕ್ಷಕಿ ತನ್ನ ಗಂಡನಿಗೆ ಊಟದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿ ಡಿಎನ್ಎ ವರದಿಯಿಂದ ಸತ್ಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಘಟನೆ ವಿವರ: ಪಟ್ಟಣದ ಟ್ಯಾಂಕ್ ಬಂಡ್ ರಸ್ತೆ ನಿವಾಸಿ ನರಸರಾಜು ಎಂಬಾತನ ಸಾವಿನ ಬಗ್ಗೆ ಕಡೆಗೂ ಸತ್ಯ ಹೊರ ಬಂದದ್ದು, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುಳ ಎಂಬವರು ಅನೈತಿಕ ಸಂಬಂಧ ಇಟ್ಟುಕೊಂಡು ಶಿಷ್ಯ ವಿಜಯ್ ಎಂಬವನೊಂದಿಗೆ ಸೇರಿ ಗಂಡ ನರಸರಾಜುನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಜಯ್ನನ್ನು ಪೊಲೀಸರು ಬಂಧಿಸಿದ್ದಾರೆ. 24-4-2013 ರಂದು ನರಸರಾಜು ಪಟ್ಟಣದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ತನ್ನ ಎರಡನೆ ಹೆಂಡತಿ ಶಿಕ್ಷಕಿ ಮಂಜುಳ ಊಟದಲ್ಲಿ ವಿಷ ಬೆರೆಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ನಾಟಕವಾಡಿದ್ದಳು. ನಂತರ ಶಿಷ್ಯ ವಿಜಯ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದೆಂದು ಮೊದಲನೆ ಪತ್ನಿ ಸರಸ್ವತಮ್ಮ ಮಗ ಕಾರ್ತಿಕ್ ಆರೋಪಿಸಿದ್ದು ಮಾತ್ರವಲ್ಲದೆ, ತಮ್ಮ ಸಮಯ ಪ್ರಜ್ಞೆಯಿಂದ ಶಿಕ್ಷಕಿ ಮಂಜುಳಾರವರ ರಾಸಲೀಲೆಯನ್ನು ಸಿಸಿ ಕ್ಯಾಮಾರದಲ್ಲಿ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದನು.
ಈ ಸಂಬಂಧ ಮೃತ ನರಸರಾಜು ಕುಟುಂಬ ಜೂನ್ 11 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಶಾಂತಲಾ ಹಾಗೂ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ರವರ ಸಮ್ಮುಖದಲ್ಲಿ ಬೆಂಗಳೂರು ವೈದ್ಯರ ತಂಡದೊಂದಿಗೆ ಮರು ಶವ ಪರೀಕ್ಷೆ ನಡೆಸಲಾಗಿತ್ತು. ಶವ ಪರೀಕ್ಷೆಯಲ್ಲಿ ಪೊರೆನ್ಸಿಕ್ ಲ್ಯಾಬ್ನಿಂದ ಸಾವಿನ ರಸಹ್ಯದ ವರದಿ ಪೊಲೀಸರಿಗೆ ತಲುಪಿದ್ದು, ವರದಿಯಲ್ಲಿ ವಿಷದಿಂದಲೇ ನರಸರಾಜು ಮೃತಪಟ್ಟಿರುವುದಾಗಿ ಖಚಿತ ಪಡಿಸಿಕೊಂಡ ಪೊಲೀಸರು ಅನೈತಿಕ ಸಂಬಂಧ ಹೊಂದಿದ್ದ ವಿಜಯ್ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಶಿಕ್ಷಕಿ ಮಂಜುಳ ಪತ್ತೆಗಾಗಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.