ಕೋಲಾರ

ಮೊಬೈಲ್ ಅಂಗಡಿ ಶೆಟ್ಟರ್ ಮುರಿದು ಉಪಕರಣಗಳ ಕಳವು

Published On :

ಟೇಕಲ್: ಇಲ್ಲಿನ ಹೃದಯ ಭಾಗದ ಸರ್ಕಲ್ನಲ್ಲಿ ನಂದೀಶ್ ಮಾಲೀಕತ್ವದ ನ್ಯೂ ಎಂ.ಎಂ. ಮೊಬೈಲ್ ಸರ್ವೀಸೆಂಟರ್ನ ಶೆಟ್ಟರ್ ಮುರಿದು ಕಳ್ಳರು ಒಳನುಗ್ಗಿ ಅಂದಾಜು 3 ಲಕ್ಷ ಬೆಲೆಯ ಮೊಬೈಲ್ ಬಿಡಿ ಭಾಗಗಳು, ಲ್ಯಾಪ್ಟಾಪ್ ಹಾಗೂ 25 ಸಾವಿರ ನಗದನ್ನು ಕಳವು ಮಾಡಿರುವ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.  ಮುಖ್ಯ ವೃತ್ತದಲ್ಲಿರುವ ಈ ಮೊಬೈಲ್ ಅಂಗಡಿ ಸ್ಥಳೀಯ ಕೆ.ಕೆ.ಜಿ. ಕಾಂಪ್ಲೆಕ್ಸ್ ಮಹಡಿ ಮೇಲಿದೆ. ಮಂಗಳವಾರ ರಾತ್ರಿ ಕಳ್ಳರು ಶೆಟ್ಟರ್ ಮೀಟಿ ಎತ್ತಿ ಒಳಗಿದ್ದ ಹೊಸ ಮೊಬೈಲ್ ಫೋನ್ಗಳನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಿಡಿಭಾಗದ ಉಪಕರಣಗಳು, ಒಂದು ಲ್ಯಾಪ್ಟಾಪ್ ಇತರೆ ಸಾಮಾನುಗಳನ್ನು ಕದ್ದೊಯ್ದಿದಿದ್ದಾರೆ. ಈ ಬಗ್ಗೆ ಮಾಲೀಕ ನಂದೀಶ್ ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಸ್ಥಳಕ್ಕೆ ಮಾಸ್ತಿ ಪಿಎಸ್ಐ ಸಿದ್ದಪ್ಪ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತೀಚಿನ ದಿನದಲ್ಲಿ ಅಪರಿಚಿತ ವ್ಯಕ್ತಿಗಳು ಟೇಕಲ್ನಲ್ಲಿ ಓಡಾಡುತ್ತಿದ್ದು ಸರಣಿಯಾಗಿ ಕಳ್ಳತನಗಳು ಹೆಚ್ಚಿದ್ದು ಸ್ಥಳೀಯ ಪೊಲೀಸರು ಈ ಬಗ್ಗೆ ರಾತ್ರಿ ಪಹರೆಯನ್ನು ಹೆಚ್ಚಿಸಬೇಕಾಗಿದೆ ಎಂಬುದು ಸ್ಥಳೀಯ ಸಾರ್ವಜನಿಕರ ಮನವಿಯಾಗಿದೆ.
ನೀರಿನಲ್ಲಿ ಮುಳುಗಿ ದಂಪತಿ ಸಾವು
ಶಿಡ್ಲಘಟ್ಟ: ಹನುಮಂತ ಪುರದ ಕೃಷ್ಣಸ್ವಾಮಿ  ಕುಂಟೆಯಲ್ಲಿ ಕುರಿ ತೊಳೆಯಲು ಹೋಗಿ ಹೊಳಿನಲ್ಲಿ ಸಿಕ್ಕಿ ಹಾಕಿಕೊಂಡು ಗಂಡ ಮತ್ತು ಹೆಂಡತಿ ಮೃತ ಪಟ್ಟ ಘಟನೆ ನಡೆದಿದೆ. ಕಿಟ್ಟಪ್ಪ(50), ವೆಂಕಟಮ್ಮ(40) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕುರಿಗಳನ್ನು ತೊಳೆಯಲು ಹನುಮಂತಪುರದ ಕೃಷ್ಣಸ್ವಾಮಿ ಕುಂಟೆಯಲ್ಲಿ ಇಳಿದಾಗ ಹೊಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಒಬ್ಬರನ್ನೂಬ್ಬರು ರಕ್ಷಿಸಿಕೊಳ್ಳಲು ಹೋಗಿ ಮೃತಪಟ್ಟಿದ್ದಾರೆ. ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.
ಮಾನಸಿಕ ಅಸ್ವಸ್ಥ ನೇಣಿಗೆ ಶರಣು
ಶಿಡ್ಲಘಟ್ಟ: ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿಯೊಬ್ಬ ತನ್ನ ತಂದೆಯ ಸಮಾದಿ ಬಳಿ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಗಂಬೀರನಹಳ್ಳಿಯಲ್ಲಿ ನಡೆದಿದೆ. ಗಂಬಿರನಹಳ್ಳಿಯ ವೆಂಕಟೇಗೌಡ ನೇಣಿಗೆ ಶರಣಾದ ದುರ್ದೈವಿಯಾಗಿದ್ದಾನೆ. ವೆಂಕಟೇಗೌಡನ ತಂದೆ ಹಾಗೂ ಅಣ್ಣ ಮೃತಪಟ್ಟಿದ್ದು ಮಾನಸಿಕವಾಗಿ ವೆಂಕಟೇಗೌಡ ಅಸ್ವಸ್ಥನಾಗಿದ್ದ. ಪ್ರತಿ ದಿನ ರಾತ್ರಿ ತಂದೆಯ ಸಮಾದಿಯ ಬಳಿ ಮಲಗುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ತಾಯಿಯೊಂದಿಗೆ ಜನಗಳವಾಡಿ ತಂದೆಯ ಸಮಾದಿ ಬಳಿ ಬಂದ ವೆಂಕಟೇಗೌಡ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಬೆಳಗ್ಗೆ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೀದಿ ನಾಯಿಗಳ ದಾಳಿ: 9 ಕುರಿಗಳ ಸಾವು
ಚಿಂತಾಮಣಿ: ಚಿಲಕಲನೇರ್ಪು ಗ್ರಾಮದಲ್ಲಿ ಕುರಿಗಳ ಅಟ್ಟಿಗೆಗೆ ಬೀದಿ ನಾಯಿಗಳು ನುಗ್ಗಿ ಕಚ್ಚಿದ ಪರಿಣಾಮ ಒಂಬತ್ತು ಕುರಿಗಳು ಸಾವನ್ನಪ್ಪಿ, ಇನ್ನು ಹಲವು ಕುರಿಗಳು ತೀವ್ರವಾಗಿ ಗಾಯಗೊಂಡಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ತಾಲೂಕಿನ ಚಿಲಕಲನೇರ್ಪು ಗ್ರಾಮದ ದಲಿತ ಕಾಲೋನಿಯಲ್ಲಿರುವ ಗೌರಮ್ಮ ಗಾರಿ ಗಂಗುಲಪ್ಪ ಎಂಬವರ ಮನೆ ಮುಂಭಾಗದ ಕುರಿಗಳ ಅಟ್ಟಿಗೆ ಮಂಗಳವಾರ ರಾತ್ರಿ ಸುಮಾರು 20 ಕ್ಕೂ ಹೆಚ್ಚು ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿ ಕಚ್ಚಿದ ಪರಿಣಾಮ 9 ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ನಷ್ಟಮೊಂದ ರೈತ ಗೌರಮ್ಮ ಗಾರಿ ಗಂಗುಲಪ್ಪ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಮಳೆ-ಬೆಳೆಯಿಲ್ಲದೆ ಕುರಿಗಳಿಂದಲೇ ಜೀವನ ಸಾಗಿಸುತ್ತಿದ್ದ ಬಡ ದಲಿತ ಕುಟುಂಬ ಇದರಿಂದ ಬೀದಿ ಪಾಲಾಗಿದೆಯೆಂದು ಗ್ರಾಮಸ್ಥರು ಹೇಳಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳಿಗೆ ಕಡಿವಾಣ ಹಾಕದೆ ನಿರ್ಲಕ್ಷ್ಯ ತೋರಿರುವುದರಿಂದ ಗ್ರಾಮದಲ್ಲಿ ಬೀದಿ ನಾಯಿಗಳ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಷ್ಟಹೊಂದಿದ ರೈತನಿಗೆ ಪರಿಹಾರ ಕೊಡಬೇಕೆಂದು ಗೌರಮ್ಮಗಾರಿ ಗಂಗುಲಪ್ಪ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.