ದೇಗುಲ ನವೀಕರಣ, ವಿಮಾನ ಗೋಪುರ ಜೀರ್ಣೋದ್ಧಾರ
ಕೆಜಿಎಫ್: ಕ್ಷೇತ್ರದ ಬೇತಮಂಗಲ ಗ್ರಾಮದಲ್ಲಿ ನೆಲಸಿರುವ ಇತಿಹಾಸ ಪ್ರಸಿದ್ಧ ಶ್ರೀ ವಿಜಯೇಂದ್ರ ಸ್ವಾಮಿ ದೇವಾಲಯವನ್ನು ಲಕ್ಷಾಂತರ ವೆಚ್ಚದಲ್ಲಿ ನವೀಕರಣಗೊಳಿಸಿದ್ದು ಸೋಮವಾರದಿಂದ ಬುಧವಾರದವರೆಗೆ ವಿಮಾನ ಗೋಪುರ ಜೀರ್ಣೋದ್ಧಾರ ವಿಶೇಷ ಪೂಜೆಯನ್ನು ದೇವಾಲಯದ ಟ್ರಸ್ಟ್ ವತಿಯಿಂದ ಹಾಗೂ ಬೇತಮಂಗಮ ಗ್ರಾಮದ ಮುಖ್ಯಸ್ಥರಿಂದ ಹಮ್ಮಿಕೊಳ್ಳಲಾಗಿದೆ.
ವಿಜಯೇಂದ್ರ ಸ್ವಾಮಿ ವಿಗ್ರಹವನ್ನು ಮಹಾಭಾರತದ ಅರ್ಜುನನು ಪ್ರತಿಷ್ಠಾಪಿಸಿರುವುದಾಗಿ ಹೇಳಲಾಗಿದ್ದು, ಯುದ್ಧದಲ್ಲಿ ಜಯಗಳಿಸಿ ವಿಜಯೋತ್ಸವವನ್ನು ಆಚರಿಸಿದ ಹಿನ್ನಲೆಯಲ್ಲಿ ಸ್ವಾಮಿ ವೆಂಕಟೇಶ್ವರನನ್ನು ಶ್ರೀ ವಿಜಯೇಂದ್ರಸ್ವಾಮಿ ಎಂಬ ಹೆಸರಿನಲ್ಲಿ ಪ್ರತಿಷ್ಠಾಪಿಸಲಾಗಿದೆ.
ಅಲ್ಲದೆ ಈ ದೇಗುಲವನ್ನು ಪಾಲಾರ್ ನಿದಿ ತೀರದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ವಿಜಯೇಂದ್ರ ಸ್ವಾಮಿ ದೇವಸ್ಥಾನವನ್ನು ಚೋಳರಾಜರು ನಿರ್ಮಿಸಿದ್ದು ಈ ದೇವಾಲಯ ಗ್ರಾಮದ ಆರಾಧ್ಯ ದೇವರಾಗಿ ಪೂಜಿಸುತ್ತಾ ಬಂದಿರುವುದು ಇಲ್ಲಿನ ವಿಶೇಷವಾಗಿದೆ. ಪ್ರತಿ ವರ್ಷ ಯುಗಾದಿ ಹಬ್ಬದಿಂದ ಹಿಡಿದು ಶ್ರೀರಾಮನವಮಿ ವರೆಗೆ ಬ್ರಹ್ಮೋತ್ಸವಗಳನ್ನು ಬಹಳ ಅದ್ಧೂರಿಯಾಗಿ ನಡೆಸಲಾಗುತ್ತದೆ.
ಬಹಳ ಪೂರಾತನ ದೇವಸ್ಥಾನವಾದ್ದರಿಂದ ದೇವಾಲಯದ ಗರ್ಭಗುಡಿ ಮೇಲಿನ ಗೋಪುರ ಶಿಥಳಗೊಂಡಿದ್ದ ಕಾರಣ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ ಮತ್ತು ಅವರ ಕುಟುಂಬಸ್ಥರಿಂದ 10 ಲಕ್ಷ ರು. ಸೇರಿದಂತೆ ದೇವಾಲಯದ ಅಭಿವೃದ್ಧಿ ಸಮಿತಿಯ ಸಂಚಾಲಕ ಶ್ರೀಹರಿ ಅವರ ನೇತೃತ್ವದಲ್ಲಿ ಗ್ರಾಮಸ್ಥರಿಂದ ದೇಣಿಗೆಯನ್ನು ಹಣವನ್ನು ಸಂಗ್ರಹಿಸಿ ದೇವಸ್ಥಾನ ಅಭಿವೃದ್ಧಿ ಮಾಡಲಾಗಿದ್ದು ಇವುಗಳ ಸಂಪೋಕ್ಷಣೆಗೆ ಮತ್ತು ಜೀರ್ಣೋದ್ಧಾರ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಹೋಮ, ಹವನ, ಆಲಯ ಪ್ರವೇಶ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಸಂಯುಕ್ತ ಕರ್ನಾಟಕ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳೀ, ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ, ಮುಳಬಾಗಿಲು ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಇತರೆ ಮುಖಂಡರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

