ಗೌರಿಬಿದನೂರಲ್ಲಿ ಕುಡಿವ ನೀರಿಗೆ ಹಾಹಾಕಾರ
-ವಿ.ಡಿ. ಗಣೇಶ್
ಕ.ಪ್ರ.ವಾರ್ತೆ ಗೌರಿಬಿದನೂರು ನ. 11
ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರು. 4.99 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಟ್ಯಾಂಕ್ ಬತ್ತಿಹೋಗಿದ್ದು, ಪಟ್ಟಣದ ಜನತೆಯ ನೀರಿನ ಆಹಾಕಾರ ಮುಗಿಲು ಮುಟ್ಟಿದೆ.
ಪುರಸಭೆಯಿಂದ ಬದಲೀ ವ್ಯವಸ್ಥೆ ರೂಪಿಸದ ಕಾರಣ ನಾಗರಿಕರು ನೀರಿಗಾಗಿ ಪರಿತಪಿಸುತ್ತಿದ್ದು ಪುರಸಭೆ ಕಳುಹಿಸುವ ಟ್ಯಾಂಕರ್ ನೀರಿಗಾಗಿ ಜನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಒಳಗೆ ಅಂತರ್ಜಲ ಸಮೃದ್ಧವಾಗಿರುವ ಸಂದರ್ಭದಲ್ಲಿ ಈ ಯೋಜನೆ ಉಪಯೋಗವಾಗುತ್ತದೆ. ಈಗ ಇಂದರಿಂದ ಯಾವುದೇ ಉಪಯೋಗವಾಗುತ್ತಿಲ್ಲ. ಕಿಂಡಿ ಅಣೆಕಟ್ಟಿಗೆ ಹತ್ತಿರದಲ್ಲಿಯೇ ನದಿಯಲ್ಲಿ 35ಅಡಿ ಆಳ ಮತ್ತು 45 ಅಡಿ ಅಗಲದ ನೀರನ್ನು ಹಿಂಗಿಸುವ ವಿಧಾನದಿಂದ ನೀರು ಪಟ್ಟಣಕ್ಕೆ ಸಾಕಾಗುವಷ್ಟು ಬರುತ್ತಿತ್ತು. ಮರಳುಗಣಿಗಾರಿಕೆ ಹೆಚ್ಚಾಗಿ ಅಂತರ್ಜಲ ಪಾತಾಳಕ್ಕಿಳಿದಿದ್ದು, ನೀರು ಪೂರೈಕೆ ಸ್ಥಗಿತಗೊಂಡಿದೆ. ಈಗ ಪಟ್ಟಣ ಪೂರ್ತಿಯಾಗಿ ಟ್ಯಾಂಕರ್ ನೀರಿಗಾಗಿ ಕಾಯಬೇಕಾಗಿದೆ, ಕೋಟ್ಯಂತರ ರು.ಗಳಲ್ಲಿ ನಿರ್ಮಿಸಿರುವ ಈ ಯೋಜನೆ ಪ್ರಯೋಜನವಿಲ್ಲದಂತಾಗಿದೆ.
ಅಶುದ್ಧ ನೀರಿನ ಪರಿಣಾಮವಾಗಿ ಪಟ್ಟಣದ ಜನತೆ ರೋಗಗಳಿಗೆ ತುತ್ತಾಗುತ್ತಿದ್ದು, ಇದರ ಅರಿವಿದ್ದರೂ ಉತ್ತಮ ನೀರನ್ನು ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ಪುರಸಭೆಯ ನೀರು ಸರಬರಾಜು ಕೆಲಸ ಸಿಕ್ಕವರಿಗೆ ಸೀರುಂಡೆಯಂತಾಗಿದ್ದು, ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ತಕ್ಷಣ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಪಟ್ಟಣಕ್ಕೆ ನೀರು ಪೂರೈಸಿ ಎಂದು ಸೂಚಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

