ವಿದ್ಯಾರ್ಥಿನಿ ಸಾವು ಸಿಒಡಿ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಗೌರಿಬಿದನೂರು ನ. 11
ಕಾಲೇಜು ವಿಧ್ಯಾರ್ಥಿನಿ ನೇತ್ರಾಳ ನಿಗೂಢ ಸಾವನ್ನು ಸಿಒಡಿಗೆ ಒಪ್ಪಿಸಬೇಕೆಂದು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್‌ನಿಂದ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ನವೀನ್ ಮಾತನಾಡಿ, ಎಸ್‌ಎಸ್‌ಇಎ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಧ್ಯಾರ್ಥಿನಿಯಾಗಿದ್ದ ನೇತ್ರಾ ಕಳೆದ 22-10-2013 ರಂದು ಕಾಲೇಜಿಗೆ ಹೋದವಳು ಮನೆಗೆ ಬಂದಿಲ್ಲ. ನಂತರ 1-11-2013 ರಂದು ಚಿಕ್ಕಬಳ್ಳಾಪುರ ರಸ್ತೆಯ ಕಣಿವೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಸಂಭಂದ ಪೋಷಕರಿಂದ 26-10-2013 ರಂದು ಕಾಣೆಯಾದ ಬಗ್ಗೆ ದೂರು ನೀಡಿರುತ್ತಾರೆ. ನಂತರ ಪೋಷಕರಿಂದ ಹೊಟ್ಟೆನೋವು ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿಕೆ ಪಡೆದಿದ್ದಾರೆ. ಆದರೆ ಶವ ಸಿಕ್ಕಿದ ಸ್ಥಳ ನಿರ್ಜನ ಪ್ರದೇಶವಾಗಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು ಪೋಷಕರನ್ನು ಹೆದರಿಸುವ ಉದ್ದೇಶವಿರುವ ಕಾರಣ ಪ್ರಕರಣದ ನಿಜಾಂಶ ಬಯಲಿಗೆ ಎಳೆಯಲು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಮುಂದಿನ ಏಳು ದಿನಗಳಲ್ಲಿ ಪ್ರಕರಣಕ್ಕೆ ಅಂತ್ಯ ಹಾಡದಿದ್ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪರಿಷತ್ತಿನ ಕಾರ್ಯದರ್ಶಿ ಹರೀಶ್ ಕುಮಾರ್, ಸಂಚಾಲಕ ವಿಜಯಕುಮಾರ್, ಕಾರ್ಯಕರ್ತರಾದ ಆನಂದ್, ಸುನೀಲ್, ಚರಣ್, ಅನಂತ್, ಚೈತ್ರ, ಅನಿತ, ಪವಿತ್ರ ಇದ್ದರು.
'ಒಣದಿನ ಆಚರಿಸಿ'
ಗುಡಿಬಂಡೆ: ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರು ವಾರಕ್ಕೆ ಒಂದು ದಿನ ಒಣದಿನ ಆಚರಿಸಬೇಕೆಂದು ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಕೋರಿದ್ದಾರೆ. ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ತಡೆಗಟ್ಟಲು ನಾಗರಿಕರು ಮನೆಗಳಲ್ಲಿ ಬಳಸುವ ನೀರಿನ ತೊಟ್ಟಿ, ಡ್ರಂ ಮುಂತಾದವನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ಉಪಯೋಗಿಸಬೇಕೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

